Moto G51: 30 ಗಂಟೆಯ ಬಿಗ್ ಬ್ಯಾಟರಿ, ಭರ್ಜರಿ ಕ್ಯಾಮೆರಾ: ಭಾರತದಲ್ಲಿ 15 ಸಾವಿರಕ್ಕೆ ಮೋಟೋ G51 5G ಫೋನ್ ಬಿಡುಗಡೆ
Moto G51 5G Launched: ಮೋಟೋ G51 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿಯನ್ನು ಹೊಂದಿದೆ. ಇದು 10W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದನ್ನು ಬರೋಬ್ಬರಿ 30 ಗಂಟೆಯ ವರೆಗೆ ಉಪಯೋಗಿಸಬಹುದು ಎಂದು ಕಂಪನಿ ಹೇಳಿದೆ.

ಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಮೋಟೋರೊಲಾ (Motorola) ಕಂಪನಿ ಈಗೀಗ ಬಜೆಟ್ ಬೆಲೆಗೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು (Smartphone) ಪರಿಚಯಿಸಿ ಭದ್ರವಾಗಿ ನೆಲೆಯೂರಲು ಪ್ರಯತ್ನ ಪಡುತ್ತಿದೆ. ಹೆಚ್ಚಾಗಿ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ಗಳಿಂದಲೇ ಭರ್ಜರಿ ಸುದ್ದಿಯಲ್ಲಿರುವ ಮೋಟೋ (Moto) ಕಂಪನಿ ಇದೀಗ ತನ್ನ ಹೊಸ ಮೋಟೋರೊಲಾ ಜಿ51 5ಜಿ (Moto G51 5G) ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480 SoC ಪ್ಲಸ್ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ, ಅತ್ಯುತ್ತಮ ಬ್ಯಾಟರಿ ಹೊಂದಿರುವ ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಅನಾವರಣಗೊಂಡಿದ್ದು, ಅತಿ ಕಡಿಮೆ ಬೆಲೆಗೆ ಲಭ್ಯವಿದೆ ಎಂಬುದು ವಿಶೇಷ.
ಏನು ವಿಶೇಷತೆ?:
ಮೋಟೋ G51 ಸ್ಮಾರ್ಟ್‌ಫೋನ್ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.8-ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ಹೋಲ್ ಪಂಚ್ ಎಲ್‌ಸಿಡಿ ಡಿಸ್‌ಪ್ಲೇ ಆಗಿದ್ದು 20:9 ರಚನೆಯ ಅನುಪಾತವನ್ನು ಪಡೆದಿದೆ. 120 Hz ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್ನಿಂದ ಕೂಡಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480+ SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.
ವಿಶೇಷವಾಗಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ S5JKN1 ಸೆನ್ಸಾರ್ ಅನ್ನು ಒಳಗೊಂಡಿರುತ್ತದೆ. ಇನ್ನು ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಜೊತೆಗೆ ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 13 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಪಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಇನ್ನು ಮೋಟೋ G51 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿಯನ್ನು ಹೊಂದಿದೆ. ಇದು 10W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದನ್ನು ಬರೋಬ್ಬರಿ 30 ಗಂಟೆಯ ವರೆಗೆ ಉಪಯೋಗಿಸಬಹುದು ಎಂದು ಕಂಪನಿ ಹೇಳಿದೆ. ಉಳಿದಂತೆ Dolby Atmos ಬೆಂಬಲ ಪಡೆದುಕೊಂಡಿದ್ದು, ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಬೆಂಬಲ, Wi-Fi 5, ಬ್ಲೂಟೂತ್ v5.2, GPS, USB ಟೈಪ್-C ಪೋರ್ಟ್ ಮತ್ತು 3.5mm ಆಡಿಯೊ ಜ್ಯಾಕ್ ನೀಡಲಾಗಿದೆ. ಸ್ಮಾರ್ಟ್‌ಫೋನ್‌ನ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಇದೆ.
It’s time to experience next-gen wireless technology with a smartphone built for tomorrow. It’s time to #GoTrue5G with the all-new #motog51 5G, priced at ₹14,999! Head to @Flipkart today and check out its uber-cool features. Sale starts 16th Dec. #gomotog https://t.co/YpCGqqcKbG pic.twitter.com/JGQ1ohBPE5
— Motorola India (@motorolaindia) December 10, 2021
ಬೆಲೆ ಎಷ್ಟು?:
ಭಾರತದಲ್ಲಿ ಮೋಟೋ G51 ಸ್ಮಾರ್ಟ್‌ಫೋನ್ ಸದ್ಯಕ್ಕೆ ಕೇವಲ ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 4GB RAM ಮತ್ತು 64GB ಸ್ಟೋರೇಜ್ ರೂಪಾಂತರಕ್ಕಾಗಿ 14,999 ರೂ. ನಿಗದಿ ಮಾಡಲಾಗಿದೆ. ಡಿಸೆಂಬರ್ 16 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ ಈ ಸ್ಮಾರ್ಟ್‌ಫೋನ್ ಖರೀದಿಗೆ ಸಿಗಲಿದೆ.
Google photos: ಗೂಗಲ್ ಫೋಟೋಸ್ನಿಂದ ಡಿಲೀಟ್ ಆದ ಫೈಲ್ಗಳನ್ನು ರಿಕವರಿ ಮಾಡುವುದು ಹೇಗೆ?: ಇಲ್ಲಿದೆ ಟಿಪ್ಸ್
(Moto G51 Qualcomm Snapdragon processor Big Battery Best Camera Smartphone Moto G51 5G Launched in India)




