ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ (WhatsApp) ಇಂದು ವಿಶ್ವದಾದ್ಯಂತ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಎಷ್ಟರ ಮಟ್ಟಿಗೆ ಎಂದರೆ ಇಂದು 10 ವರ್ಷದವರಿಂದ ಹಿಡಿದು 90 ವರ್ಷದ ಮುದುಕ ಕೂಡ ವಾಟ್ಸ್ಆ್ಯಪ್ ಅನ್ನು ಉಪಯೋಗಿಸುತ್ತಿದ್ದಾರೆ. ಬೆಳಿಗ್ಗೆ ಎದ್ದು ದೇವರ ಫೋಟೋ ನೋಡ್ತಾರೋ ಗೊತ್ತಿಲ್ಲ ಆದ್ರೆ ವಾಟ್ಸ್ಆ್ಯಪ್ ಕಡೆ ತಪ್ಪದೆ ಕಣ್ಣು ಹಾಯಿಸುತ್ತಾರೆ. ಹೀಗೆ ವಾಟ್ಸ್ಆ್ಯಪ್ ನಮ್ಮನ್ನು ತನ್ನತ್ತ ಆಕರ್ಷಿಸಿದೆ. ಬಳಕೆದಾರರಿಗೆ ಬೇಕಾಗುವಂತಹ ಅನೇಕ ಫೀಚರ್ಗಳನ್ನು ಪರಿಚಿಯಿಸಿದೆ. ಇನ್ನೂ ಅನೇಕ ಸಾಲು ಸಾಲು ಫೀಚರ್ಗಳು ಪರೀಕ್ಷಾ ಹಂತದಲ್ಲಿದೆ. ವಾಟ್ಸ್ಆ್ಯಪ್ನಲ್ಲಿ ನಮಗೆ ಬೇಕಾದ ಕೆಲವು ಹಿಡನ್ ಆಯ್ಕೆಗಳು ಇಲ್ಲ. ಉದಾಹರಣೆಗೆ ಡಿಲೀಟ್ ಆಗಿರುವಂತಹ ಮೆಸೇಜ್ಗಳನ್ನು ನೋಡುವುದು ಅಥವಾ ನಮ್ಮ ಡಿಪಿ ಅನ್ನು ಯಾರು ನೋಡಿದ್ದಾರೆಂದು ತಿಳಿಯಲು ವಾಟ್ಸ್ಆ್ಯಪ್ನಲ್ಲಿ ನೇರವಾಗಿ ಸಾಧ್ಯವಿಲ್ಲ. ಆದರೆ, ಇದಕ್ಕೆಂದು ಇತರೆ ಥರ್ಡ್ ಪಾರ್ಟಿ ಆ್ಯಪ್ಗಳಿವೆ (Third Party App). ಹಾಗೆಯೆ ನಮ್ಮದಲ್ಲದ ಇತರರ ವಾಟ್ಸ್ಆ್ಯಪ್ ಖಾತೆಯಲ್ಲಿ ಏನಿದೆ?, ಅವರು ಯಾರ ಜೊತೆ ಹೆಚ್ಚು ಚಾಟ್ ಮಾಡುತ್ತಾರೆ ಎಂದು ತಿಳಿಯಬಹುದೇ?.
ಅನೇಕರಿಗೆ ಈರೀತಿಯ ಕುತೂಹಲ ಇದ್ದೇ ಇರುತ್ತದೆ. ಅವರು ಯಾವಾಗ ನೋಡಿದರೂ ವಾಟ್ಸ್ಆ್ಯಪ್ ಆನ್ಲೈನ್ನಲ್ಲಿಯೇ ಇರುತ್ತಾರೆ. ಆದರೆ ಏನು ಮಾಡ್ತಾ ಇರುತ್ತಾರೆ?, ಅಷ್ಟು ಹೊತ್ತು ಯಾರ ಜೊತೆ ಚಾಟ್ ಮಾಡ್ತಾ ಇರುತ್ತಾರೆ? ಹೀಗೆ ಅನೇಕ ಅನುಮಾನ ಹುಟ್ಟಿಕೊಂಡಿರುತ್ತದೆ. ಅವರು ನಮ್ಮ ಆತ್ಮೀಯರಾಗಿದ್ದರೆ ಮತ್ತಷ್ಟು ಕುತೂಹಲ. ಆದರೆ, ಒಂದು ಟ್ರಿಕ್ ಮೂಲಕ ನಿಮ್ಮ ಆತ್ಮೀಯರು ವಾಟ್ಸ್ಆ್ಯಪ್ನಲ್ಲಿ ಯಾರ ಜೊತೆ ಹೆಚ್ಚು ಚಾಟಿಂಗ್ ಮಾಡ್ತಾ ಇದ್ದಾರೆ ಎಂದು ತಿಳಿಯಬಹುದು. ಅವರು ಆ ಚಾಟ್ ಅನ್ನು ಹೈಡ್ ಮಾಡಿದ್ದರೂ ಕೂಡ. ಇದಕ್ಕೆ ಯಾವುದೇ ಥರ್ಡ್ ಪಾರ್ಟಿ ಆ್ಯಪ್ಗಳ ಅವಶ್ಯಕತೆಯಿಲ್ಲ. ಈ ಆಯ್ಕೆಯನ್ನು ನೀವು ವಾಟ್ಸ್ಆ್ಯಪ್ನಲ್ಲಿ ಪಡೆಯಬಹುದು.
ಹೌದು, ನಿಮ್ಮ ಆತ್ಮೀಯರು ವಾಟ್ಸ್ಆ್ಯಪ್ನಲ್ಲಿ ಹೆಚ್ಚು ಮೆಸೇಜ್ ಮಾಡಿರುವುದು ಯಾರಿಗೆ ಎಂದು ತಿಳಿಯಲು ಮೊದಲಿಗೆ ನೀವು ಅವರ ವಾಟ್ಸ್ಆ್ಯಪ್ ಅನ್ನು ತೆರೆಯಬೇಕು. ಅವರು ನಿಮ್ಮ ಆತ್ಮೀಯರಾದ ಕಾರಣ ಫೋನಿನ ಪಾಸ್ವರ್ಡ್ ಅಥವಾ ಪ್ಯಾಟರ್ನ್ ನಿಮಗೆ ತಿಳಿದೆ ಇರುತ್ತದೆ. ಹೀಗೆ ವಾಟ್ಸ್ಆ್ಯಪ್ ತೆರೆದ ನಂತರ ಮೇಲೆ ತೋರಿಸಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿಂದ ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ, ಅಲ್ಲಿ ನಿಮಗೆ ಹಲವು ಆಯ್ಕೆಗಳು ಕಾಣಿಸುತ್ತವೆ. ಅದೇ ಸಮಯದಲ್ಲಿ ನೀವು ಸ್ಟೋರೆಜ್ ಮತ್ತು ಡೇಟಾ ಎಂಬ ಆಯ್ಕೆಯನ್ನು ನೋಡುತ್ತೀರಿ, ಅದರ ಮೇಲೆ ಕ್ಲಿಕ್ ಮಾಡಬೇಕು. ಇದನ್ನು ತೆರೆದ ನಂತರ ಮತ್ತಷ್ಟು ಆಯ್ಕೆಗಳು ಕಾಣಿಸುತ್ತವೆ, ಅಲ್ಲಿ ನೀವು ಮ್ಯಾನೇಜ್ ಸ್ಟೋರೇಜ್ ಅನ್ನು ಕ್ಲಿಕ್ ಮಾಡಬೇಕು. ಇದನ್ನು ಕ್ಲಿಕ್ ಮಾಡಿದಾಗ, ನೀವು ಸಂಪೂರ್ಣ ಪಟ್ಟಿಯನ್ನು ನೋಡುತ್ತೀರಿ. ಇಲ್ಲಿ ಅವರು ಯಾರ ಜೊತೆ ಹೆಚ್ಚು ಮಾತನಾಡಿದ್ದಾರೆ ಅಥವಾ ಯಾರ ಜೊತೆ ಹೆಚ್ಚು ಚಾಟ್ ಮಾಡಿದ್ದಾರೆ ಎಂಬುದು ತಿಳಿಯುತ್ತದೆ.
ವಾಟ್ಸ್ಆ್ಯಪ್ನಲ್ಲಿ ಸ್ಟೋರೆಜ್ ಸ್ಪೇಸ್ ಫ್ರೀ ಮಾಡುವುದು ಹೇಗೆ?:
Smartphone Tips: ಎಚ್ಚರ: ಹಳೆಯ ಸ್ಮಾರ್ಟ್ಫೋನ್ ಮಾರುವ ಮುನ್ನ ತಪ್ಪದೆ ಈ ಕೆಲಸ ಮಾಡಿ
Twitter: ಟ್ವಿಟರ್ನ ಸ್ಪೇಸಸ್ ಆಡಿಯೋ ರೂಮ್ನಲ್ಲಿ ಅಚ್ಚರಿಯ ಫೀಚರ್: ಬಳಕೆದಾರರು ಫುಲ್ ಖುಷ್