AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Whatsapp: ವಾಟ್ಸ್​ಆ್ಯಪ್​ನಲ್ಲಿ ಹೆಚ್ಚಾಗುತ್ತಿದೆ ಸ್ಕ್ಯಾಮ್: ಫೇಕ್ ಮೆಸೇಜ್​ಗಳನ್ನು ಈಗ ನೀವೇ ಪತ್ತೆ ಹಚ್ಚಿ

WhatsApp Tips and Tricks: ದಿನಕ್ಕೊಂದರಂತೆ ವಂಚನೆಯ ಮೆಸೇಜ್‌ಗಳು ವಾಟ್ಸ್ಆ್ಯಪ್​ನಲ್ಲಿ ಹರಿದಾಡುತ್ತಿರುತ್ತದೆ. ಅನ್‌ಲಿಮಿಟೆಡ್ ಡೇಟಾ, ಉಚಿತ ರೀಚಾರ್ಜ್, ಫ್ರೀ ಮೊಬೈಲ್, ಪ್ರಸಿದ್ಧ ಇ ಕಾಮರ್ಸ್ ತಾಣಗಳ ಫೇಕ್ ಆಫರ್ ಹೀಗೆ ಈರೀತಿಯ ಅನೇಕ ಮೆಸೇಜ್​ಗಳು ವೈರಲ್ (Viral) ಆಗುತ್ತವೆ.

Whatsapp: ವಾಟ್ಸ್​ಆ್ಯಪ್​ನಲ್ಲಿ ಹೆಚ್ಚಾಗುತ್ತಿದೆ ಸ್ಕ್ಯಾಮ್: ಫೇಕ್ ಮೆಸೇಜ್​ಗಳನ್ನು ಈಗ ನೀವೇ ಪತ್ತೆ ಹಚ್ಚಿ
whatsApp
TV9 Web
| Updated By: Vinay Bhat|

Updated on: Mar 14, 2022 | 6:29 AM

Share

ಮೆಟಾ (Meta) ಮಾಲೀಕತ್ವದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್​ನಲ್ಲಿ ಈಗೀಗ ಸ್ಕ್ಯಾಮ್ ಮೆಸೇಜ್‌ಗಳು ಬರುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ದಿನಕ್ಕೊಂದರಂತೆ ವಂಚನೆಯ ಮೆಸೇಜ್‌ಗಳು ವಾಟ್ಸ್ಆ್ಯಪ್​ನಲ್ಲಿ ಹರಿದಾಡುತ್ತಿರುತ್ತದೆ. ಅನ್‌ಲಿಮಿಟೆಡ್ ಡೇಟಾ, ಉಚಿತ ರೀಚಾರ್ಜ್, ಫ್ರೀ ಮೊಬೈಲ್, ಪ್ರಸಿದ್ಧ ಇ ಕಾಮರ್ಸ್ ತಾಣಗಳ ಫೇಕ್ ಆಫರ್ ಹೀಗೆ ಈರೀತಿಯ ಅನೇಕ ಮೆಸೇಜ್​ಗಳು ವೈರಲ್ (Viral) ಆಗುತ್ತವೆ. ಕೆಲ ವಾಟ್ಸ್ಆ್ಯಪ್ (WhatsApp) ಬಳಕೆದಾರರು ಸ್ಕ್ಯಾಮ್‌ ಮೆಸೇಜ್‌ಗಳನ್ನು ಪಡೆಯುವುದು ಮತ್ತು ಹಲವು ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದರಿಂದ ತಮ್ಮ ವೈಯಕ್ತಿಕ ಡೇಟಾವನ್ನು ಗೊತ್ತಿಲ್ಲದೇ ವಂಚಕರಿಗೆ ಶೇರ್‌ ಮಾಡುತ್ತಿರುವುದು ಅವರಿಗೆ ತಿಳಿಯದೇ ಆಗುತ್ತಿರುವ ಚಟುವಟಿಕೆ ಆಗಿದೆ. ಇನ್ನೂ ಹಣ ಕಳೆದುಕೊಂಡು ಮೋಸಹೋದವರು ಕೂಡ ಇದ್ದಾರೆ. ಆದ್ದರಿಂದ ಇಂದಿನ ಲೇಖನದಲ್ಲಿ ಫೇಕ್ ಮೆಸೇಜ್‌ ಮತ್ತು ವಂಚಕರ ವೆಬ್‌ಸೈಟ್‌ಗಳ ಲಿಂಕ್‌ಗಳನ್ನು ವಾಟ್ಸ್ಆ್ಯಪ್ ಬಳಕೆದಾರರು ಹೇಗೆ ಪತ್ತೆಹಚ್ಚಬಹುದು ಎಂದು ತಿಳಿಸುತ್ತಿದ್ದೇವೆ.

ಉಚಿತ ಮತ್ತು ಅನ್‌ಲಿಮಿಟೆಡ್ ಸಾಮಾನ್ಯವಾಗಿ ಫೇಕ್‌: ಹೌದು, ಸಾಮಾನ್ಯವಾಗಿ ಹೆಚ್ಚಿನ ಫೇಕ್‌ ಮೆಸೇಜ್‌ಗಳು ಉಚಿತ ಮತ್ತು ಅನ್‌ಲಿಮಿಟೆಡ್ ಎಂಬ ಸೇವೆ ಕುರಿತು ಇರುತ್ತವೆ. ಉದಾಹರಣೆಗೆ ಬಿಎಸ್‌ಎನ್‌ಎಲ್‌ ಮತ್ತು ಏರ್‌ಟೆಲ್‌ 4G ಅನ್‌ಲಿಮಿಟೆಡ್ ಡೇಟಾ, ಉಚಿತ ವಾಯ್ಸ್ ಕರೆ ಆಫರ್‌ಗಳನ್ನು ನೀಡುತ್ತಿವೆ ಎಂದು ಫೇಕ್‌ ಮೆಸೇಜ್‌ಗಳನ್ನು ಹರಿಯಬಿಡಲಾಗಿತ್ತು. ಇಂತಹ ಮೆಸೇಜ್‌ಗಳನ್ನು ಎಂದಿಗೂ ತೆರೆಯಬೇಡಿ.

ಸ್ಪೆಲ್ಲಿಂಗ್ ದೋಷಗಳನ್ನು ಪರಿಶೀಲಿಸಿ: ಅಧಿಕೃತ ನ್ಯೂಸ್‌ ಮೆಸೇಜ್‌ಗಳು ಯಾವುದೇ ಅಕ್ಷರ ದೋಷ ಹೊಂದಿರುವುದಿಲ್ಲ. ಆದರೆ ವಾಟ್ಸ್ಆ್ಯಪ್​ನಲ್ಲಿ ಹೆಚ್ಚು ಫಾರ್ವರ್ಡ್ ಮಾಡಲಾದ ಫೇಕ್‌ ಮೆಸೇಜ್‌ಗಳು ಹೆಚ್ಚು ಅಕ್ಷರ ದೋಷಗಳು, ಸ್ಪೆಲ್ಲಿಂಗ್‌ ತಪ್ಪುಗಳನ್ನು ಹೊಂದಿರುತ್ತವೆ. ಆದ್ದರಿಂದ ಎಚ್ಚರ ವಹಿಸಿ ಓದಿ.

ಲಿಂಕ್‌ ಹೊಂದಿದೆಯೇ?: ಅಧಿಕೃತವಾಗಿ ಪ್ರಕಟಿಸಲಾದ ಮೆಸೇಜ್ ಸಾಮಾನ್ಯವಾಗಿ ಲಿಂಕ್‌ ಹೊಂದಿರುವುದಿಲ್ಲ. ಆದರೆ ಫೇಕ್‌ ಮೆಸೇಜ್‌ಗಳು ಲಿಂಕ್‌ ಅನ್ನು ಹೊಂದಿರುತ್ತವೆ. ಉದಾಹರಣೆ ಬಿಎಸ್‌ಎನ್‌ಎಲ್‌ ಕುರಿತ ಅನ್‌ಲಿಮಿಟೆಡ್ ಡೇಟಾ ಮತ್ತು ವಾಯ್ಸ್ ಕರೆ ಕುರಿತ ಫೇಕ್‌ ಮೆಸೇಜ್‌ http://www.bsni.in/ ಲಿಂಕ್‌ ಅನ್ನು ಹೊಂದಿದೆ. ಯುಆರ್‌ಎಲ್‌ ಗಮನಿಸಿ. ಇಂತಹ ತಪ್ಪು ಯುಆರ್‌ಎಲ್‌ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡದಿರಿ ಹಾಗೂ ಫಾರ್ವರ್ಡ್‌ ಸಹ ಮಾಡದಿರಿ.

ಅಧಿಕೃತ ಮಾಹಿತಿಗಳಿಂದ ಖಚಿತ ಪಡಿಸಿಕೊಳ್ಳಿ: ವಾಟ್ಸ್ಆ್ಯಪ್​ನಲ್ಲಿ ಬಂದ ಅನ್‌ಲಿಮಿಟೆಡ್‌ ಮತ್ತು ಉಚಿತ ಸೇವೆಗಳ ಮೆಸೇಜ್‌ಗಳನ್ನು ನಂಬುವ ಮೊದಲು ಟೆಲಿಕಾಂ ಆಪರೇಟರ್‌ಗಳಿಂದ ಖಚಿತಪಡೆದುಕೊಳ್ಳಿ. ಅಲ್ಲದೇ ಮಾಹಿತಿ ಲಿಂಕ್ ಅಧಿಕೃತ ವೆಬ್‌ಸೈಟ್‌ಗಳದ್ದೇ ಎಂಬುದನ್ನು ತಿಳಿಯಿರಿ.

ಈ ರೀತಿಯ ಮೆಸೇಜ್‌ಗಳನ್ನು ತಪ್ಪಿಸಿ: ವಾಟ್ಸ್ಆ್ಯಪ್ ಮೆಸೇಜ್‌ಗಳು ಉಚಿತ ರೀಚಾರ್ಜ್‌, ಅನ್‌ಲಿಮಿಟೆಡ್, ಹಣ ಬಹುಮಾನ ಬಂದಿರುವ ಬಗ್ಗೆ ಭರವಸೆ ನೀಡಿ, ಮೆಸೇಜ್‌ ಅನ್ನು 10 ಜನರಿಗೆ ಫಾರ್ವರ್ಡ್ ಮಾಡಿ ಎಂದು ಹೇಳುತ್ತವೆ. ಆದ್ದರಿಂದ ಮೆಸೇಜ್‌ಗಳನ್ನು ಓದುವ ಬದಲು ವಾಟ್ಸ್ಆ್ಯಪ್ ಶಟ್‌ಡೌನ್‌ ಮಾಡಿ, ಮೆಸೇಜ್‌ ಕಡೆಗಣಿಸಿ ಬಿಡಿ.

BSNL: ಒಂದಲ್ಲ ಎರಡಲ್ಲ ಬರೋಬ್ಬರಿ 1000GB ಡೇಟಾ: ಬಿಎಸ್ಎಲ್​ನಿಂದ ಹೀಗೊಂದು ಬಂಪರ್ ಆಫರ್

Amazon Fab Phones Fest: ಅಮೆಜಾನ್​ನಲ್ಲಿ ಶುರುವಾಗಿದೆ ಫ್ಯಾಬ್‌ ಫೋನ್ಸ್‌ ಫೆಸ್ಟ್‌ ಸೇಲ್: ಈ ಮೊಬೈಲ್​ಗಳಿಗೆ ಬಂಪರ್ ಡಿಸ್ಕೌಂಟ್

ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ