WhatsApp: ವಾಟ್ಸ್​ಆ್ಯಪ್​ ಡೆಸ್ಕ್​ಟಾಪ್​ನಲ್ಲಿ ವಿಡಿಯೋ ಕರೆ ಮಾಡಲು ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ

WhatsApp tips and tricks: ಮೊಬೈಲ್ ಬದಲಿಗೆ ಡೆಸ್ಕ್‌ಟಾಪ್ ಮೂಲಕ ವಾಟ್ಸ್​ಆ್ಯಪ್​ ಬಳಸುವವರು ಬ್ರೌಸರ್‌ನಲ್ಲಿ ವಾಟ್ಸ್​ಆ್ಯಪ್​ ವೆಬ್ ಬಳಸುವುದನ್ನು ಕಲಿತೇ ಇರುತ್ತಾರೆ. ಇದರಲ್ಲಿ ವಿಡಿಯೋ ಕಾಲ್ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಉತ್ತರ.

WhatsApp: ವಾಟ್ಸ್​ಆ್ಯಪ್​ ಡೆಸ್ಕ್​ಟಾಪ್​ನಲ್ಲಿ ವಿಡಿಯೋ ಕರೆ ಮಾಡಲು ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ
WhatsApp Web
Updated By: Vinay Bhat

Updated on: Aug 05, 2021 | 3:35 PM

ಸಾಮಾಜಿಕ ಮಾಧ್ಯಮದ ದೈತ್ಯ ಎನಿಸಿಕೊಂಡಿರುವ ಫೇಸ್‌ಬುಕ್ (Facebook) ಮಾಲೀಕತ್ವದ ವಾಟ್ಸ್ಆ್ಯಪ್  (WhatsApp) ಮೆಸೆಜಿಂಗ್ ಅಪ್ಲಿಕೇಶನ್ ಈಗಾಗಲೇ ಬಳಕೆದಾರರಿಗೆ ಹಲವು ಆಕರ್ಷಕ ಫೀಚರ್ಸ್‌ ಮತ್ತು ಸೇವೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಮೊಬೈಲ್​ನಲ್ಲಿ ವಾಟ್ಸ್​ಆ್ಯಪ್​ ಮೂಲಕ ನೀವು ವಾಯ್ಸ್ ಮತ್ತು ವಿಡಿಯೋ ಕಾಲ್ ಮಾಡಬಹುದು. ಆದರೆ, ಡೆಸ್ಕ್​ಟಾಪ್ ಮತ್ತು ಲ್ಯಾಪ್​ಟಾಪ್​ನಲ್ಲೂ ಈ ಸೌಲಭ್ಯಗಳು ಇದೇ ಎಂಬುದು ಅನೇಕರಿಗೆ ತಿಳಿದಿಲ್ಲ. ತಿಳಿದಿದ್ದರೂ ಅದನ್ನು ಹೇಗೆ ಕಾರ್ಯರೂಪಕ್ಕೆ ತರುವುದು ಎಂಬ ಗೊಂದಲವಿದೆ.

ಮೊಬೈಲ್ ಬದಲಿಗೆ ಡೆಸ್ಕ್‌ಟಾಪ್ ಮೂಲಕ ವಾಟ್ಸ್​ಆ್ಯಪ್​ ಬಳಸುವವರು ಬ್ರೌಸರ್‌ನಲ್ಲಿ ವಾಟ್ಸ್​ಆ್ಯಪ್​ ವೆಬ್ ಬಳಸುವುದನ್ನು ಕಲಿತೇ ಇರುತ್ತಾರೆ. ಇದರಲ್ಲಿ ವಿಡಿಯೋ ಕಾಲ್ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಉತ್ತರ.

ಮೊದಲಿಗೆ ನಿಮ್ಮ ಸಿಸ್ಟಮ್​ನಲ್ಲಿ ವಾಟ್ಸ್​ಆ್ಯಪ್​ ಡೆಸ್ಕ್‌ಟಾಪ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ. ಇದು ವಿಂಡೋಸ್ 32 ಬಿಟ್, 64 ಬಿಟ್ ಅಲ್ಲದೆ ಮ್ಯಾಕ್ಒಎಸ್​ನಲ್ಲೂ ಲಭ್ಯವಿದೆ. ಈ ಡಿಯೋ ಕರೆ ಸೌಲಭ್ಯ ನಿಮಗೆ ಸಿಗಬೇಕಾದರೆ ವಿಂಡೋಸ್ 10 64 ಬಿಟ್ ಆವೃತ್ತಿ 1903 ಅಥವಾ ಅದಕ್ಕಿಂತ ಸುಧಾರಿತ ಆವೃತ್ತಿಯನ್ನು ಹೊಂದಿರಬೇಕು. ಮ್ಯಾಕ್ ಒಎಸ್ 10.13 ಇರಬೇಕು.

ನಿಮ್ಮ ಕಂಪ್ಯೂಟರಲ್ಲಿ ಏನೇನಿರಬೇಕು?

  • ಆಡಿಯೋ ಔಟ್ ಪುಟ್ ಸಾಧನ, ಮೈಕ್ರೋಫೋನ್, ವೆಬ್ ಕಾಮ್ ಅಥವಾ ಪ್ರತ್ಯೇಕವಾಗಿ ಸೇರಿಸಿದ ಕ್ಯಾಮೆರಾ ಬೇಕಾಗುತ್ತದೆ.
  • ನಿಮ್ಮ ಮೊಬೈಲ್ ಫೋನ್ ಹಾಗೂ ಡೆಸ್ಕ್ ಟಾಪ್ ಸಂಪರ್ಕಿಸಲು ಹಾಗೂ ಈ ಸೌಲಭ್ಯ ಬಳಸಲು ಇಂಟರ್ನೆಟ್ ಕನೆಕ್ಷನ್.
  • ನಿಮ್ಮ ಕಂಪ್ಯೂಟರ್ ಮೈಕ್ರೋಫೋನ್ ಹಾಗೂ ಕ್ಯಾಮೆರಾ ಬಳಸಲು ವಾಟ್ಸ್​ಆ್ಯಪ್​ಗೆ​ ಅನುಮತಿ.
  • ವಾಟ್ಸ್​ಆ್ಯಪ್​ ಡೆಸ್ಕ್​ಟಾಪ್ ಕರೆ ಚಾಲನೆ ವಿಧಾನ.
  • ವಾಟ್ಸ್​ಆ್ಯಪ್​ ಡೆಸ್ಕ್​ಟಾಪ್ ಅಪ್ಲಿಕೇಷನ್ ಕ್ಲಿಕ್ ಮಾಡಿ ರನ್ ಮಾಡಿ.
  • ನಿಮ್ಮ ಫೋನ್ ಬಳಸಿ QR ಕೋಡ್ ಸ್ಕ್ಯಾನ್ ಮಾಡಿ, ಅನುಮತಿ ನೀಡಬೇಕು.
  • ಈಗ ನಿಮ್ಮ ವಾಟ್ಸ್​ಆ್ಯಪ್​ ಅಕೌಂಟ್ ಓಪನ್ ಆಗುತ್ತದೆ. ಬಳಿಕ ಚಾಟ್ ಲಿಸ್ಟ್​ನಲ್ಲಿ ನೀವು ಕರೆ ಮಾಡಬೇಕಾದವರ ಖಾತೆ ಆಯ್ಕೆ ಮಾಡಿಕೊಳ್ಳಿ.
  • ಚಾಟ್ ಬಾಕ್ಸಿನ ಮೇಲ್ಭಾಗದಲ್ಲಿ ಕಾಣುವ ವಿಡಿಯೋ ಐಕಾನ್ ಕ್ಲಿಕ್ ಮಾಡಿ.
  • ಈಗ ಮೊಬೈಲ್ ನೆರವಿಲ್ಲದೆ ಡೆಸ್ಕ್​ಟಾಪ್ ಆ್ಯಪ್ ಕರೆ ಸಂಪರ್ಕ ಸಾಧ್ಯವಾಗಲಿದೆ.

Poco C3: ಭಾರತದಲ್ಲಿ ದಾಖಲೆಯ ಮಾರಾಟ ಕಂಡ ಪೋಕೋ ಸಿ3: ಅಂಥದ್ದೇನಿದೆ ಇದರಲ್ಲಿ ಗೊತ್ತೇ?

7000mAh ಬ್ಯಾಟರಿ, 64MP ಕ್ಯಾಮೆರಾ: ಸ್ಯಾಮ್​ಸಂಗ್​ನ ಈ ​ಫೊನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಖರೀದಿಸಬಹುದೇ?

(WhatsApp Web Video Call You Know how to make video call on WhatsApp via laptop or PC tricks here)