WWDC 2023: ಐಫೋನ್​ಗೆ ಹೊಸ iOS ಘೋಷಿಸಲಿದೆ ಆ್ಯಪಲ್

Updated on: Apr 04, 2023 | 10:00 AM

ಸಮ್ಮೇಳನದಲ್ಲಿ ಹೊಸ ಓಎಸ್ ಸರಣಿಯನ್ನು ಘೋಷಿಸುವ ಆ್ಯಪಲ್, ಆ್ಯಪ್ ಡೆವಲಪರ್​ಗಳಿಗೆ ಓಎಸ್ ಬೀಟಾ ಡೆವಲಪರ್​ ಆವೃತ್ತಿಯನ್ನು ಒದಗಿಸುತ್ತದೆ. ಈ ಬಾರಿ ಆ್ಯಪಲ್, ಜೂನ್ 5ರಿಂದ ಜೂನ್ 9ರವರೆಗೆ WWDC 2023 ಸಮಾವೇಶ ಆಯೋಜಿಸಿದೆ.

ಆ್ಯಪಲ್, ಪ್ರತಿ ವರ್ಷ ಐಫೋನ್, ಐಪ್ಯಾಡ್ ಮತ್ತು ಮ್ಯಾಕ್​ಗೆ ಹೊಸ ಅಪ್​ಡೇಟೆಡ್ ಓಎಸ್​ಗಳನ್ನು ಬಿಡುಗಡೆ ಮಾಡುತ್ತದೆ. ಅದಕ್ಕಾಗಿ ಪ್ರತಿ ವರ್ಷ ಆ್ಯಪಲ್, ಜಾಗತಿಕ ಆ್ಯಪ್ ಡೆವಲಪರ್​ಗಳ ಸಮ್ಮೇಳನ ನಡೆಸುತ್ತದೆ. ಈ ಸಮ್ಮೇಳನದಲ್ಲಿ ಹೊಸ ಓಎಸ್ ಸರಣಿಯನ್ನು ಘೋಷಿಸುವ ಆ್ಯಪಲ್, ಆ್ಯಪ್ ಡೆವಲಪರ್​ಗಳಿಗೆ ಓಎಸ್ ಬೀಟಾ ಡೆವಲಪರ್​ ಆವೃತ್ತಿಯನ್ನು ಒದಗಿಸುತ್ತದೆ. ನಂತರದಲ್ಲಿ ಡೆವಲಪರ್​ಗಳು ಬೀಟಾ ಆವೃತ್ತಿಯನ್ನು ಪರಿಶೀಲಿಸಿ, ಅದರಲ್ಲಿನ ದೋಷಗಳನ್ನು ಸರಿಪಡಿಸುತ್ತಾರೆ. ನಂತರವಷ್ಟೇ ಸಾಮಾನ್ಯ ಬಳಕೆದಾರರಿಗೆ ನೂತನ ಓಎಸ್ ಅಪ್​ಡೇಟ್ ಲಭ್ಯವಾಗುತ್ತದೆ. ಈ ಬಾರಿ ಆ್ಯಪಲ್, ಜೂನ್ 5ರಿಂದ ಜೂನ್ 9ರವರೆಗೆ WWDC 2023 ಸಮಾವೇಶ ಆಯೋಜಿಸಿದೆ. ಹೊಸದಾಗಿ ಆ್ಯಪಲ್ ಐಓಎಸ್ 17 ಘೋಷಿಸಲಿದೆ. ಆ್ಯಪಲ್ ಈವೆಂಟ್​ನಲ್ಲಿ ಹೊಸ ಐಓಎಸ್ ಸರಣಿ ಘೋಷಣೆಯಾದರೂ, ಅವುಗಳ ಪರೀಕ್ಷಾರ್ಥ ಬಳಕೆ ಮುಗಿದ ಬಳಿಕ, ಸೆಪ್ಟೆಂಬರ್​ನಲ್ಲಿ ಸಾಮಾನ್ಯ ಬಳಕೆದಾರರಿಗೆ ಲಭ್ಯವಾಗಲಿದೆ. ನಂತರ, ಅವುಗಳನ್ನು ಡೌನ್​ಲೋಡ್ ಮಾಡಿಕೊಂಡು ಇನ್​ಸ್ಟಾಲ್ ಮಾಡಬೇಕಿದೆ.

Follow Us
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

Read More