X, Twitter Down: ಜಾಗತಿಕವಾಗಿ ಎಕ್ಸ್​​ ಡೌನ್, ವರದಿ ಮಾಡಿದ ಸಾವಿರಾರು X ಬಳಕೆದಾರರು

ಸಾಮಾಜಿಕ ಜಾಲತಾಣದ ಪ್ಲಾಟ್‌ಫಾರ್ಮ್​​​ಗಳಲ್ಲಿ ಒಂದಾದ ಎಕ್ಸ್ ಮತ್ತು ಎಕ್ಸ್ ಪ್ರೊ ಇಂದು ಜಾಗತಿಕವಾಗಿ ಸ್ಥಗಿತಗೊಂಡಿರುವ ಅನುಭವ ಉಂಟಾಗಿದೆ. ಔಟ್ಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್ Downdetector.com ಪ್ರಕಾರ, ಎಕ್ಸ್​​​ ಡೌನ್​​​ ಆಗಿರುವ ಬಗ್ಗೆ ಜನರು ವರದಿ ಮಾಡಿದ್ದಾರೆ.

X, Twitter Down: ಜಾಗತಿಕವಾಗಿ ಎಕ್ಸ್​​ ಡೌನ್, ವರದಿ ಮಾಡಿದ ಸಾವಿರಾರು X ಬಳಕೆದಾರರು
ಸಾಂದರ್ಭಿಕ ಚಿತ್ರ

Updated on: Dec 21, 2023 | 12:15 PM

ಸಾಮಾಜಿಕ ಜಾಲತಾಣದ ಪ್ಲಾಟ್‌ಫಾರ್ಮ್​​​ಗಳಲ್ಲಿ ಒಂದಾದ ಎಕ್ಸ್ ಮತ್ತು ಎಕ್ಸ್ ಪ್ರೊ ಇಂದು ಜಾಗತಿಕವಾಗಿ ಸ್ಥಗಿತಗೊಂಡಿರುವ ಅನುಭವ ಉಂಟಾಗಿದೆ. ಔಟ್ಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್ Downdetector.com ಪ್ರಕಾರ, ಎಕ್ಸ್​​​ ಡೌನ್​​​ ಆಗಿರುವ ಬಗ್ಗೆ ಜನರು ವರದಿ ಮಾಡಿದ್ದಾರೆ. ಸಾವಿರಾರು X (ಹಿಂದಿನ Twitter) ಬಳಕೆದಾರರು ಈ ಬಗ್ಗೆ ವರದಿ ಮಾಡಿದ್ದಾರೆ, ವೆಬ್ ಬಳಕೆದಾರರು ತಮ್ಮ ಫೀಡ್‌ಗಳಲ್ಲಿ ಸ್ವಾಗತ ಸಂದೇಶದ ಬಗ್ಗೆಯು ತಿಳಿಸಿದ್ದಾರೆ.

ಗುರುವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ತಾಂತ್ರಿಕ ಅಡಚಣೆಯನ್ನು ಉಂಟುಮಾಡಿತು. ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಎರಡೂ ಫೀಡ್‌ನಲ್ಲಿ ಸಾಮಾನ್ಯ ಟ್ವೀಟ್‌ಗಳ ಬದಲಿಗೆ ‘ನಿಮ್ಮ ಟೈಮ್‌ಲೈನ್‌ಗೆ ಸ್ವಾಗತ’ ಎಂದು ತೋರಿಸಿದೆ. ಡೌನ್‌ಡೆಕ್ಟರ್ ಪ್ರಕಾರ, ಎಕ್ಸ್​​ನ್ನು ಬಳಸುಲಾಗುತ್ತಿಲ್ಲ ಎಂದು 70,000 ಕ್ಕೂ ಹೆಚ್ಚು ಜನ ವರದಿ ಮಾಡಿದ್ದಾರೆ.

ಎಕ್ಸ್ ಸ್ಥಗಿತವನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ಎಲೋನ್ ಮಸ್ಕ್ ಸ್ವಾಧೀನ ಪಡೆಸಿಕೊಂಡ ನಂತರ ಮಾರ್ಚ್ ಮತ್ತು ಜುಲೈನಲ್ಲೂ ಎಕ್ಸ್​​​ ಇ ಸಮಸ್ಯೆಗಳನ್ನು ಎದುರಿಸಿತ್ತು. ಇದರಿಂದ ಜುಲೈನಲ್ಲಿ, ಯುಎಸ್ ಮತ್ತು ಯುಕೆಯಲ್ಲಿ 13,000 ಹೆಚ್ಚು ಜನರು ಎಕ್ಸ್ ಬಳಕೆ ಮಾಡುವುದನ್ನು ಕಡಿಮೆ ಮಾಡಿದ್ದಾರೆ.

ಇದನ್ನೂ ಓದಿ: ಟ್ವಿಟರ್‌ನಲ್ಲಿ ಓದುವಿಕೆ ಮಿತಿಯಿಂದಲ್ಲೇ ಟ್ವಿಟರ್​​ ಡೌನ್​​ಗೆ ಕಾರಣ ಎಂದ ಬಳಕೆದಾರರು

ಮಾರ್ಚ್​​​ 6ರಂದು ಕೂಡ ಇಂತಹ ಸಮಸ್ಯೆಯನ್ನು ಅನುಭವಿಸಿತ್ತು. ಲಿಂಕ್‌ಗಳು, ಚಿತ್ರಗಳು ಮತ್ತು ವೀಡಿಯೊ ಅಪ್ಲೋಡ್​​​ ಮತ್ತು ವೀಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡಲಾಗಿತ್ತು. ಇದೀಗ ವರ್ಷದ ಕೊನೆಯಲ್ಲೂ ಇಂತಹ ಸಮಸ್ಯೆಗಳನ್ನು ಎಕ್ಸ್​​​ ಬಳಕೆದಾರರೂ ಅನುಭವಿಸುತ್ತಿದ್ದಾರೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:43 am, Thu, 21 December 23

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us