ಶವೋಮಿಯ ಹೊಸ ಫೋಲ್ಡೆಬಲ್ ಸ್ಮಾರ್ಟ್​ಫೋನ್ ಬಿಡುಗಡೆ: ಫೀಚರ್ಸ್ ಕೇಳಿ ದಂಗಾದ ಜನರು

|

Updated on: Aug 15, 2023 | 2:38 PM

Xiaomi Mix Fold 3 Launched: ಶವೋಮಿ ಮಿಕ್ಸ್ ಫೋಲ್ಡ್ 3 ಫ್ಲಾಗ್​ಶಿಪ್ ಹಾರ್ಡ್‌ವೇರ್ ಅನ್ನು ಒಳಗೊಂಡಿದೆ. ಜೊತೆಗೆ ಹಿಂದಿನಂತೆ ಈ ಬಾರಿ ಕೂಡ ತನ್ನ ರಿಯರ್ ಕ್ಯಾಮೆರಾಗಳಿಗೆ ಲೈಕಾ ಜೊತೆಗಿನ ಪಾಲುದಾರಿಕೆಯನ್ನು ಮುಂದುವರೆಸಿದೆ. ಈ ಫೋನ್ ಕ್ವಾಲ್ಕಂ ಸ್ನಾಪ್​ಡ್ರಾಗನ್ 8 Gen 2 ಪ್ರೊಸೆಸರ್ ಅನ್ನು ಹೊಂದಿದೆ.

ಶವೋಮಿಯ ಹೊಸ ಫೋಲ್ಡೆಬಲ್ ಸ್ಮಾರ್ಟ್​ಫೋನ್ ಬಿಡುಗಡೆ: ಫೀಚರ್ಸ್ ಕೇಳಿ ದಂಗಾದ ಜನರು
Xiaomi launches Mix Fold 3
Follow us on

ಶವೋಮಿ ಅಧಿಕೃತವಾಗಿ ತನ್ನ ಹೊಸ ತಲೆಮಾರಿನ ಶವೋಮಿ ಮಿಕ್ಸ್ ಫೋಲ್ಡ್ 3 (Xiaomi Mix Fold 3) ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ಸ್ಯಾಮ್​ಸಂಗ್ ಗ್ಯಾಲಕ್ಸಿ Z ಫೋಲ್ಡ್ 4 ಮತ್ತು ಗೂಗಲ್ ಪಿಕ್ಸೆಲ್ ಫೋಲ್ಡ್ ಹೋಲುವ ನೋಟ್‌ಬುಕ್ ತರಹದ ಫೋಲ್ಡಿಂಗ್ ವಿನ್ಯಾಸವನ್ನು ಹೊಂದಿದೆ. ಆದರೆ, ಈ ಫೋನ್ ತನ್ನ ಹಿಂದಿನ ಫೋಲ್ಡ್ ಫೋನ್‌ಗಳಂತೆಯೇ ಚೀನಾದ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿದೆ. ಆದಾಗ್ಯೂ, ಶವೋಮಿ ತನ್ನ ನೂತನ ಫೋನ್​ ಅನ್ನು ಪ್ರತಿಸ್ಪರ್ಧಿಗಳಿಗಿಂತ ತೆಳ್ಳಗಿನ ರೂಪದಲ್ಲಿ ಬಿಡುಗಡೆ ಮಾಡಿದೆ. ಇದು ಮಡಿಸಿದಾಗ 10.86mm ದಪ್ಪ ಮತ್ತು ತೆರೆದಾಗ 5.26mm ಅಳತೆ ಇದೆ. ಆದರೆ, ಇತ್ತೀಚಿನ ಸ್ಯಾಮ್​ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 ಮಡಿಸಿದಾಗ 13.4mm, ಪಿಕ್ಸೆಲ್ ಫೋಲ್ಡ್ 12.1mm ದಪ್ಪವನ್ನು ಹೊಂದಿದೆ.

ಶವೋಮಿ ಮಿಕ್ಸ್ ಫೋಲ್ಡ್ 3 ಫ್ಲಾಗ್​ಶಿಪ್ ಹಾರ್ಡ್‌ವೇರ್ ಅನ್ನು ಒಳಗೊಂಡಿದೆ. ಜೊತೆಗೆ ಹಿಂದಿನಂತೆ ಈ ಬಾರಿ ಕೂಡ ತನ್ನ ರಿಯರ್ ಕ್ಯಾಮೆರಾಗಳಿಗೆ ಲೈಕಾ ಜೊತೆಗಿನ ಪಾಲುದಾರಿಕೆಯನ್ನು ಮುಂದುವರೆಸಿದೆ. ಈ ಫೋನ್ ಕ್ವಾಲ್ಕಂ ಸ್ನಾಪ್​ಡ್ರಾಗನ್ 8 Gen 2 ಪ್ರೊಸೆಸರ್ ಅನ್ನು ಹೊಂದಿದೆ. ಇದು 67W ವೈರ್ಡ್ ಟರ್ಬೊ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಅಮೆಜಾನ್​ನಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್​ಫೋನ್ ಯಾವುದು ಗೊತ್ತೇ?: ರಿವೀಲ್ ಆಗಿದೆ ನೋಡಿ

ಇದನ್ನೂ ಓದಿ
ಕೇವಲ 99 ರೂ. ರಿಚಾರ್ಜ್ ಮಾಡಿದ್ರೆ ಅನ್ಲಿಮಿಟೆಡ್ 5G ಡೇಟಾ: ಏರ್ಟೆಲ್ ಆಫರ್​ಗೆ ದಂಗಾದ ಜಿಯೋ
Google Pixel 7 Pro: ಪ್ರೊ ಕ್ಯಾಮೆರಾ ರೇಂಜ್​ನ ಗೂಗಲ್‌ ಪಿಕ್ಸೆಲ್‌ ಸ್ಮಾರ್ಟ್​ಫೋನ್
ಕೇವಲ 8,999 ರೂ.: ಹೊಸ ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ ಮೋಟೋ E13 ಫೋನ್
Jio Independence Day Offer: ರಿಲಯನ್ಸ್ ಜಿಯೋ ವಿಶೇಷ ರೀಚಾರ್ಜ್ ಆಫರ್ ಇಲ್ಲಿದೆ..

ಶವೋಮಿ ಮಿಕ್ಸ್ ಫೋಲ್ಡ್ 3 ಬೆಲೆ:

ಶವೋಮಿ ಮಿಕ್ಸ್ ಫೋಲ್ಡ್ 3 ನ ಬೆಲೆ 12GB RAM + 256GB ಸ್ಟೋರೇಜ್ ಮಾದರಿಗೆ CNY 8,999 (ಭಾರತದಲ್ಲಿ ಸುಮಾರು 1,03,000 ರೂ. ಎನ್ನಬಹುದು). ಮಧ್ಯ ಶ್ರೇಣಿಯ 16GB RAM ಮತ್ತು 512GB ಸಂಗ್ರಹಣೆಯ ಆಯ್ಕೆಗೆ CNY 9,999 (ಸುಮಾರು ರೂ 1,14,500). 16GB RAM ಮತ್ತು 1TB ಸ್ಟೋರೇಜ್ ಹೊಂದಿರುವ ಟಾಪ್-ಎಂಡ್ ಮಾಡೆಲ್ ಬೆಲೆ CNY 10,999 (ಸುಮಾರು ರೂ 1,26,600) ಆಗಿದೆ. ಈ ಫೋನ್ ಮೂನ್ ಶ್ಯಾಡೋ ಬ್ಲಾಕ್ ಮತ್ತು ಕ್ಸಿಂಗ್ಯಾವೋ ಗೋಲ್ಡ್ ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ.

ಶವೋಮಿ ಮಿಕ್ಸ್ ಫೋಲ್ಡ್ 3 ಫೀಚರ್ಸ್:

ಶವೋಮಿ ಮಿಕ್ಸ್ ಫೋಲ್ಡ್ 3 ಸ್ಮಾರ್ಟ್​ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 ಮತ್ತು ಪಿಕ್ಸೆಲ್ ಫೋಲ್ಡ್ ಅನ್ನು ಹೋಲುತ್ತದೆ. ಈ ಹೊಸ ಫೋನ್ 6.56-ಇಂಚಿನ ಅಮೊಲೊಡ್ ಡಿಸ್ ಪ್ಲೇ ಮತ್ತು 8.025-ಇಂಚಿನ ಮುಖ್ಯ ಡಿಸ್ ಪ್ಲೇಯನ್ನು ಹೊಂದಿದೆ. ಎರಡೂ ಡಿಸ್ ಪ್ಲೇಗಳು ಸ್ಯಾಮ್​ಸಂಗ್​ನ E6 ಪ್ಯಾನೆಲ್ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿದೆ. ಹೊರಗಿನ ಡಿಸ್ ಪ್ಲೇ 2,520×1,080 ಪಿಕ್ಸೆಲ್ ರೆಸಲ್ಯೂಶನ್ ಮತ್ತು 2600 ನಿಟ್ಸ್ ಗರಿಷ್ಠ ಬ್ರೈಟ್​ನೆಸ್ ಅನ್ನು ಹೊಂದಿದೆ. ಮೈನ್ ಡಿಸ್ ಪ್ಲೇ 2,160×1,916 ಪಿಕ್ಸೆಲ್ ರೆಸಲ್ಯೂಶನ್​ನಲ್ಲಿದೆ.

ಈ ಫೋನಿನ ಹಿಂಭಾಗ ನಾಲ್ಕು ಕ್ಯಾಮೆರಾಗಳನ್ನು ಒಳಗೊಂಡಿದೆ. ಇದು 50-ಮೆಗಾಪಿಕ್ಸೆಲ್ ಸೋನಿ IMX 800 ಪ್ರಾಥಮಿಕ ಕ್ಯಾಮೆರಾ, 13-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್, 10-ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಮತ್ತು 10-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಲೆನ್ಸ್ ಅನ್ನು ಒಳಗೊಂಡಿದೆ. ಕವರ್ ಪರದೆಯು ಮೇಲೆ 20-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಕ್ವಾಲ್ಕಂನ ಸ್ನಾಪ್​ಡ್ರಾಗನ್ 8 Gen 2 ಪ್ರೊಸೆಸರ್ ಮತ್ತು 4,800mAh ಬ್ಯಾಟರಿಯಿಂದ ಈ ಫೋನ್ ಆವೃತ್ತವಾಗಿದೆ. ಈ ಬ್ಯಾಟರಿಯು 67W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಶವೋಮಿ ಮಿಕ್ಸ್ ಫೋಲ್ಡ್ 3 ನ ಇತರ ಪ್ರಮುಖ ವೈಶಿಷ್ಟ್ಯಗಳೆಂದರೆ NFC, MIUI 14 ಆಧಾರಿತ Android 13, ಮತ್ತು 5G ಆಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ