Twitter Followers ನಿಮ್ಮ ಟ್ವಿಟ್ಟರ್​ ಫಾಲೋವರ್ಸ್​ ಸಂಖ್ಯೆ ಕುಸಿಯಬಹುದು: ಎಲಾನ್ ಮಸ್ಕ್ ಎಚ್ಚರಿಕೆ

ನಿಮ್ಮ ಟ್ವಿಟ್ಟರ್​ ಫಾಲೋವರ್ಸ್​ ಸಂಖ್ಯೆ ಕುಸಿಯಬಹುದು ಎಂದು ಮಾಲೀಕ ಇಲಾನ್ ಮಸ್ಕ್ ಎಚ್ಚರಿಕೆ ನೀಡಿದ್ದಾರೆ. ಇದರ ಜೊತೆ ಫಾಲೋವರ್ಸ್​ ಸಂಖ್ಯೆ ಏಕೆ ಕುಸಿಯಬಹುದು ಎನ್ನುವುದಕ್ಕೆ ಸೂಕ್ತ ಕಾರಣವನ್ನೂ ಸಹ ಕೊಟ್ಟಿದ್ದಾರೆ.

Twitter Followers ನಿಮ್ಮ ಟ್ವಿಟ್ಟರ್​ ಫಾಲೋವರ್ಸ್​ ಸಂಖ್ಯೆ ಕುಸಿಯಬಹುದು: ಎಲಾನ್ ಮಸ್ಕ್ ಎಚ್ಚರಿಕೆ
ಎಲಾನ್ ಮಸ್ಕ್​
Updated By: ರಮೇಶ್ ಬಿ. ಜವಳಗೇರಾ

Updated on: Dec 01, 2022 | 7:12 PM

ನವದೆಹಲಿ: ಟೆಸ್ಲಾ (Tesla) ಮುಖ್ಯಸ್ಥ ಎಲಾನ್ ಮಸ್ಕ್ (Elon Musk )ಜನಪ್ರಿಯ ಮೈಕ್ರೋಬ್ಲಾಗಿಂಗ್ ಜಾಲತಾಣವಾದ ಟ್ವಿಟ್ಟರ್ (Twitter)​ ಖರೀದಿಸಿದ ಬಳಿಕ ಅನೇಕ ಬದಲಾವಣೆಗಳನ್ನು ತರಲು ಮುಂದಾಗಿದ್ದಾರೆ. ಇದೀಗ ಸ್ಕ್ಯಾಮ್ ಹಾಗೂ ಸ್ಪ್ಯಾಮ್​ ಖಾತೆಗಳ ಕಡಿವಾಣಕ್ಕೆ ಮುಂದಾಗಿದ್ದಾರೆ. ಇದರಿಂದ ನಿಮ್ಮ ಫಾಲೋರ್ಸ್ ಸಂಖ್ಯೆ (Twitter Followers) ಕುಸಿಯಬಹುದು ಎಂದು ಟ್ವಿಟ್ಟರ್ ಮಾಲೀಕ ಎಲಾನ್ ಮಸ್ಕ್ ಎಚ್ಚರಿಸಿದ್ದಾರೆ.

ಇದನ್ನೂ ಓದಿ: Twitter Character Limit: ಟ್ವಿಟರ್​ ಅಕ್ಷರ ಮಿತಿ 1,000ಕ್ಕೆ ಹೆಚ್ಚಳ; ಎಲಾನ್ ಮಸ್ಕ್ ಸುಳಿವು

ಈ ಕುರಿತು ಟ್ವೀಟ್ ಮಾಡಿರುವ ಎಲಾನ್ ಮಸ್ಕ್, ಅನೇಕ ಸ್ಪ್ಯಾಮ್​ ಹಾಗೂ ಸ್ಕ್ಯಾಮ್​ ಟ್ವಟ್ಟರ್​​ ಖಾತೆಗಳನ್ನು ತೆಗೆದು ಹಾಕಲಾಗುತ್ತಿದೆ. ಹೀಗಾಗಿ ಫಾಲೋವರ್ಸ್​ ಸಂಖ್ಯೆ ಕುಸಿಯಬಹುದು ಎಂದು ಟ್ವಿಟ್ಟರ್ ಬಳಕೆದಾರರಿಗೆ ತಿಳಿಸಿದ್ದಾರೆ.

ಟ್ವಿಟ್ಟರ್​ ಖರೀದಿಸಿದ ಬಳಿಕ ಎಲಾನ್ ಮಾಸ್ಕ್ ಕೆಲ ಬದಲಾವಣೆಗಳನ್ನು ತರುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಟ್ವಿಟ್ಟರ್​ ಅಕ್ಷರ ಮಿತಿಯನ್ನು 280ರಿಂದ 1000ಕ್ಕೆ ಹೆಚ್ಚಿಸುವ ಸುಳಿವು ಕೊಟ್ಟಿದ್ದಾರೆ. ದ್ದರು. ಅಲ್ಲದೇ ಬ್ಲೂ ಟಿಕ್  ಟ್ವಿಟ್ಟರ್​ ಖಾತೆಗಳಿಗೆ ಕೆಲ ನಿಯಮಳನ್ನ ಜಾರಿಗೆ ತರಲು ಮುಂದಾಗಿದ್ದಾರೆ. ಇದರ ಜೊತೆಗೆ ಹೊಸದಾಗಿ ಗೋಲ್ಡನ್​ ಮತ್ತು ಗ್ರೇ ಟಿಕ್​ ಫೀಚರ್ ಜಾರಿಗೊಳಿಸುವುದಾಗಿ ಹೇಳಿದ್ದಾರೆ.

ಸರ್ಕಾರ, ಕಂಪೆನಿಗಳಿಗೆ ಹಾಗೂ ವ್ಯಕ್ತಿಗಳಿಗೆ (ಸೆಲೆಬ್ರಿಟಿಗಳು ಮತ್ತು ಸಾಮಾನ್ಯ ಜನರು) ವಿವಿಧ ಬಣ್ಣದಲ್ಲಿ ‘ಟಿಕ್’ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಮಸ್ಕ್ ಕಾರ್ಯಭಾರದ ಬೆನ್ನಲ್ಲೇ ಹಲವು ಬದಲಾವಣೆ

ಮಸ್ಕ್ ಅವರು ಟ್ವಿಟರ್ ಮಾಲೀಕತ್ವ ವಹಿಸಿಕೊಂಡ ಬೆನ್ನಲ್ಲೇ ಸಿಇಒ ಪರಾಗ್ ಅಗರ್​ವಾಲ್ ಸೇರಿದಂತೆ 3,500ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ್ದರು. ಬಳಿಕ ಟ್ವಿಟರ್​ನ ಬ್ಲೂಟಿಕ್​ಗೆ ಶುಲ್ಕ ವಿಧಿಸುವ ನೀತಿ ರೂಪಿಸಿದ್ದರು. ಆದರೆ, ನಕಲಿ ಖಾತೆಗಳ ಹಾವಳಿ ತಡೆಯುವಲ್ಲಿ ವಿಫಲವಾದ ಕಾರಣ ಅದನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದರು. ಶೇಕಡಾ 75ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ ಬಳಿಕ, ವಜಾ ಪ್ರಕ್ರಿಯೆ ಮುಗಿದಿದೆ. ಇನ್ನು ನೇಮಕಾತಿ ಆರಂಭಿಸಲಾಗುವುದು ಎಂದು ಮಸ್ಕ್ ಕಳೆದ ವಾರ ಹೇಳಿದ್ದರು. ಆದರೆ ಮತ್ತೆ ಕೆಲವರನ್ನು ವಜಾಗೊಳಿಸಿ ಸುದ್ದಿಯಾಗಿದ್ದರು. ಇದೀಗ ಅಕ್ಷರ ಮಿತಿ ಹೆಚ್ಚಿಸುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುವ ಸುಳಿವು ನೀಡಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 5:49 pm, Thu, 1 December 22