
1980 ದಶಕದ ರೆಟ್ರೋ ಲುಕ್ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ಹೌದು, ಸಾಮಾಜಿಕ ಜಾಲತಾಣಗಳಲ್ಲಿ 80ರ ದಶಕದ ಎಐ ಫೋಟೋ ಟ್ರೆಂಡ್ (80s AI Photo Trend) ಭಾರಿ ವೈರಲ್ ಆಗುತ್ತಿದೆ. ಬಳಕೆದಾರರು ತಾವೇ ಸ್ವತಃ 1980ರ ಕಾಲದಲ್ಲಿದ್ದರೆ ಹೇಗೆ ಕಾಣಿಸುತ್ತಿದ್ದರು ಎಂಬುದನ್ನು ನೋಡಲು ಚಾಟ್ ಜಿಪಿಟಿ (ChatGPT) ಬಳಸುತ್ತಿದ್ದಾರೆ. ಇದೀಗ ಈ ರೆಟ್ರೋ ಲುಕ್‌ನ ಫೋಟೋಗಳು ನೆಟ್ಟಿಗರ ಮನಸ್ಸನ್ನು ಗೆದ್ದಿವೆ. ತಮ್ಮ ಫೋಟೋವನ್ನು ಅಪ್‌ಲೋಡ್ ಮಾಡಿದಾಗ ಉಡುಗೆ – ತೊಡುಗೆ, ಕೇಶವಿನ್ಯಾಸ, ಬ್ಯಾಕ್ ಗ್ರೌಂಡ್ , ಬೆಳಕು ಹಾಗೂ ಛಾಯಾಗ್ರಹಣದ ವಿನ್ಯಾಸವನ್ನೇ 80 ರ ದಶಕದ ಶೈಲಿಗೆ ಬದಲಾಗುತ್ತದೆ. ನೀವು 80 ರ ದಶಕದಲ್ಲಿ ಇದ್ದಿದ್ರೆ ಯಾವ ರೀತಿ ಕಾಣ್ತಾ ಇದ್ರಿ ಎಂದು ನೋಡಬೇಕೆ? ಹಾಗಾದ್ರೆ ಚಾಟ್‌ಜಿಪಿಟಿಯಲ್ಲಿ ರೆಟ್ರೋ ಲುಕ್ ಫೋಟೋ ಈ ರೀತಿ ರಚಿಸಿ.
ಹಂತ 1: ಮೊದಲಿಗೆ ನಿಮ್ಮ ಮುಖ ಸ್ಪಷ್ಟವಾಗಿ ಕಾಣಿಸುವ ಫೋಟೋವನ್ನು ಚಾಟ್ ಜಿಪಿಟಿಗೆ ಗೆ ಅಪ್‌ಲೋಡ್ ಮಾಡಿ.
ಹಂತ 2: 1980ರ ದಶಕದ ಶೈಲಿಗೆ ಮರುಸೃಷ್ಟಿಸಲು ಪ್ರಾಂಪ್ಟ್ ನೀಡಿ.
ಹಂತ 3: ಇಲ್ಲಿ ನಿಮ್ಮ ಉಡುಗೆ – ತೊಡುಗೆ, ಕೇಶವಿನ್ಯಾಸ, ಹಿನ್ನೆಲೆ ಹಾಗೂ ಚಿತ್ರದ ವಿನ್ಯಾಸ ಸೇರಿದಂತೆ ನೀವು ಬಯಸುವ 80ರ ದಶಕದ ನೋಟವನ್ನು ವಿವರವಾದ ಮಾಹಿತಿಯೊಂದಿಗೆ ತಿಳಿಸಿ.
ಹಂತ 4: ಒಂದು ವೇಳೆ ನಿಮ್ಮ ಮೊದಲ ಪಯತ್ನದಲ್ಲಿ ಬದಲಾಯಿಸಲು ಆಗದಿದ್ದರೆ ನೀವು ಅದೇ ಚಾಟ್‌ನಲ್ಲಿ ಚಿತ್ರವನ್ನು ನಿರ್ದಿಷ್ಟ ಬದಲಾವಣೆಗೆ ವಿನಂತಿಸಿಕೊಳ್ಳಿ.
ಹಂತ 5: ನಿಮ್ಮ 80 ದಶಕದ ರೆಟ್ರೋ ಲುಕ್ ಪೋಟೋ ನಿಮಗೆ ಸಿಕ್ಕಿದ ತಕ್ಷಣ ಅದನ್ನು ಇನ್ಸ್ಟಾಗ್ರಾಮ್ ಸ್ಟೋರಿ ಗೆ ಅಪ್‌ಲೋಡ್ ಮಾಡಿ.
ಚಾಟ್ ಜಿಪಿಟಿ ಪ್ರಾಂಪ್ಟ್ ಗಳನ್ನು ಬಳಸಿ 1980ರ ದಶಕದ ಭಾರತೀಯ ಮದುವೆಯ ಶೈಲಿಯನ್ನು ಮರುಸೃಷ್ಟಿಸಿಕೊಳ್ಳಲು ಅವಕಾಶವಿದೆ. 80 ದಶಕದ ಮದುವೆಯ ಉಡುಪು, ಆಭರಣ, ಕೇಶವಿನ್ಯಾಸ ಮತ್ತು ಮೃದುವಾದ ಅನಾಲಾಗ್ ಫಿಲ್ಮ್ ಗ್ರೇನ್ ಬಣ್ಣಗಳನ್ನು ಬಳಸಿ ಎಂದು ಕೇಳಿದರೆ ನಿಮ್ಮ ಫೋಟೋ 80 ದಶಕದ ಭಾರತೀಯ ಮದುವೆಯ ಶೈಲಿಯಲ್ಲಿ ರೆಡಿಯಾಗುತ್ತದೆ.
ಫೋಟೋ 1987ರ ಭಾರತದ ಬೀದಿಯಲ್ಲಿ ತೆಗೆದಂತೆ ಬದಲಾಯಿಬಹುದು. ಚಾಟ್ ಜಿಪಿಟಿಯಲ್ಲಿ ನನ್ನ ಮುಖದ ಗುರುತು ಹಾಗೆಯೇ ಇರಲಿ. ಬ್ಯಾಕ್ ಗ್ರೌಂಡ್ ನಲ್ಲಿ 80ರ ದಶಕದ ವಾಹನಗಳು, ಬೋರ್ಡ್‌ಗಳು, ನೈಸರ್ಗಿಕ ಬೆಳಕು ಮತ್ತು ಹಳೆಯ ಫೋಟೋದ ವಿನ್ಯಾಸದಂತೆ ಇರಲಿ ಎಂದು ಟೈಪ್ ಹೇಳಿದರೆ ರೆಟ್ರೋ ಸ್ಟ್ರೀಟ್ ಲುಕ್ ಫೋಟೋ ನಿಮಗೆ ಸಿಗುತ್ತದೆ.
1980ರ ದಶಕದ ಭಾರತೀಯ ಕುಟುಂಬದ ಆಲ್ಬಮ್ ಫೋಟೋದಂತೆ ಇದನ್ನು ಬದಲಾಯಿಸಿ. ನೈಸರ್ಗಿಕ ಮುಖಭಾವ, ಸರಳವಾದ ಒಳಾಂಗಣ ಸೆಟ್ಟಿಂಗ್, ಮೃದುವಾದ ಬೆಳಕು ಹಾಗೂ ಹಳೆಯ ಕ್ಯಾಮೆರಾದ ಫಿನಿಶಿಂಗ್ ಇರಲಿ ಎಂದು ನೀವು ಚಾಟ್ ಜಿಪಿಟಿಗೆ ತಿಳಿಸಿದರೆ ಈ ಲುಕ್ ನಲ್ಲಿ ಫೋಟೋ ರೆಡಿಯಾಗುತ್ತದೆ.
ಈ ಫೋಟೋವನ್ನು 1980 ರ ದಶಕದ ಬಾಲಿವುಡ್ ನಾಯಕಿ ಭಾವಚಿತ್ರವಾಗಿ ಪರಿವರ್ತಿಸಿ. ನನ್ನ ಮುಖವನ್ನು ಗುರುತಿಸುವಂತೆ ಇರಿಸಿ. ನನಗೆ 1980 ರ ದಶಕದ ಬೃಹತ್ ಕೇಶವಿನ್ಯಾಸ, ವರ್ಣರಂಜಿತ ಸೀರೆ ಮತ್ತು ಸ್ಟೇಟ್‌ಮೆಂಟ್ ಆಭರಣವನ್ನು ನೀಡಿ. ನೈಜ ಬೆಳಕು, ಕ್ಲಾಸಿಕ್ ಭಾರತೀಯ ಸ್ಟುಡಿಯೋ ಸೆಟ್ಟಿಂಗ್‌ನಲ್ಲಿ ನನ್ನನ್ನು ಇರಿಸಿ ಎಂದು ನೀವು ತಿಳಿಸಬೇಕು. ಇನ್ನು ನೀವು ಫೋಟೋವನ್ನು 1980 ರ ದಶಕದ ಬಾಲಿವುಡ್ ನಾಯಕನ ಭಾವಚಿತ್ರವಾಗಿ ಮರುಸೃಷ್ಟಿಸಿ ಎಂದು ಹೇಳಿದರೆ ನಿಮ್ಗೆ ಆ ದಶಕದ ನಾಯಕನ ಫೋಟೋ ಸಿಗುತ್ತದೆ. ಇಲ್ಲಿ ಮುಖದ ಗುರುತನ್ನು ಬದಲಾಗದೆ ಇರಿಸಿಕೊಳ್ಳಿ ಎಂದು ತಿಳಿಸಿ. ಅದರ ಜತೆಗೆ ಆ ಕಾಲಘಟ್ಟದ ಕೇಶವಿನ್ಯಾಸ, ಕ್ಲಾಸಿಕ್ ಶರ್ಟ್, ಎತ್ತರದ ಸೊಂಟದ ಪ್ಯಾಂಟ್ ಹಾಗೂ ಟ್ರೆಡಿಷನಲ್ ಸ್ಟುಡಿಯೋ ಹಿನ್ನೆಲೆಯನ್ನು ಸೇರಿಸಿ. ಮೃದುವಾದ ಬೆಳಕು, ಸ್ವಲ್ಪ ಮಸುಕಾದ ಬಣ್ಣಗಳು ಇರಲಿ ಚಾಟ್ ಜಿಪಿಟಿಗೆ ತಿಳಿಸಿ.
ನೀವು ಚಾಟ್ ಜಿಪಿಟಿ ಪ್ರಾಂ ಪ್ಟ್ ನಲ್ಲಿ ಈ ಫೋಟೋವನ್ನು 1980 ರ ದಶಕದ ಭಾರತೀಯ ನಿಯತಕಾಲಿಕೆ ಭಾವಚಿತ್ರವನ್ನಾಗಿ ಪರಿವರ್ತಿಸಿ ಎಂದು ತಿಳಿಸಬೇಕು. ನನ್ನ ಮುಖದ ಗುರುತು ಬದಲಾಗದೆ ಇರಲಿ. ಆ ಕಾಲಕ್ಕೆ ಹೊಂದುವಂತಹ ಕೂದಲು, ಬಟ್ಟೆ, ಆಭರಣ ಮತ್ತು ಮೇಕಪ್ ಬಳಸಿ. ಸರಳ ಸ್ಟುಡಿಯೋ ಹಿನ್ನೆಲೆ, ನೈಸರ್ಗಿಕ ಬೆಳಕು ಹಾಗೂ ಕ್ಯಾಮೆರಾ ಫಿನಿಶಿಂಗ್ ಇರಲಿ ಎಂದು ಟೈಪ್ ಮಾಡಿದರೆ ನಿಮ್ಮ ಸುಂದರವಾದ ಭಾವಚಿತ್ರ ಸಿದ್ಧವಾಗುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:04 pm, Wed, 9 September 26