
ಮರಿಯಾನೆಗಳಿಗೆ (baby elephants) ಕೆಸರು ಹಾಗೂ ನೀರಿನಲ್ಲಿ ಹೊರಳಾಡುವುದೆಂದರೆ ಪಂಚಪ್ರಾಣ. ಇಂತಹ ಆಟ ತುಂಟಾಟದ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಪುಟಾಣಿ ಆನೆಯು ಕೆಸರು ನೀರಿನಲ್ಲಿ ಮಿಂದೆದ್ದ ಕ್ಯೂಟ್ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ನಂಬೋಗೋ ಕ್ರಿಶ್ಚಿನ್ (Nambogo Christine) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಕೆಸರು ತುಂಬಿದ ನೀರಿನಲ್ಲಿ ಹೊರಳಾಡುತ್ತಿದ್ದರೆ ತಾಯಾನೆ ಪಕ್ಕದಲ್ಲಿ ನಿಂತು ನೋಡುತ್ತಿದೆ. ಈ ಪುಟಾಣಿ ಆನೆ ಮಾತ್ರ ಮೈಯೆಲ್ಲಾ ಕೆಸರು ಮಾಡಿಕೊಂಡು ಸಖತ್ ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ಮೊಬೈಲ್ ನೋಡುತ್ತಾ ಮಲಗಿದ್ದ ಮಾಲೀಕನ ಬೆನ್ನ ಮೇಲೆ ಒರಗಿದ ಮರಿಯಾನೆ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮಡ್ ಬಾತ್ ಸೂಪರ್ ಎಂದರೆ, ಮತ್ತೊಬ್ಬರು, ಎಷ್ಟು ಖುಷಿ ನೋಡಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ