AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮೊಬೈಲ್ ನೋಡುತ್ತಾ ಮಲಗಿದ್ದ ಮಾಲೀಕನ ಬೆನ್ನ ಮೇಲೆ ಒರಗಿದ ಮರಿಯಾನೆ

ಪ್ರಾಣಿ ಪ್ರಪಂಚದ ಕ್ಯೂಟ್ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಮರಿಯಾನೆ ಕೇರ್ ಟೇಕರ್ ಜತೆಗೆ ತುಂಟಾಟಕ್ಕಿಳಿಗಿದೆ. ಓಡೋಡಿ ಬಂದ ಮರಿಯಾನೆ ಮಾಲೀಕನ ಬೆನ್ನ ಮೇಲೆ ಒರಗಿಕೊಂಡ ಮುದ್ದಾದ ವಿಡಿಯೋ ವೈರಲ್ ಆಗಿದೆ. ಪುಟಾಣಿ ಆನೆಯ ತುಂಟಾಟವನ್ನು ಕಣ್ತುಂಬಿಸಿಕೊಂಡಿದ್ಧಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಮೊಬೈಲ್ ನೋಡುತ್ತಾ ಮಲಗಿದ್ದ ಮಾಲೀಕನ ಬೆನ್ನ ಮೇಲೆ ಒರಗಿದ ಮರಿಯಾನೆ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on:Nov 14, 2026 | 1:21 PM

Share

ಮರಿಯಾನೆಗಳು (baby elephants) ಮಾಲೀಕನ ಜತೆಗೆ ಮಗುವಾಗುತ್ತವೆ. ನೀವು ಪುಟಾಣಿ ಆನೆಗಳು ಹಾಗೂ ಕೇರ್ ಟೇಕರ್‌ನ ಆಟ ತುಂಟಾದ ದೃಶ್ಯಗಳನ್ನು ನೋಡಿರುತ್ತೀರಿ. ಇದೀಗ ಕೇರ್ ಟೇಕರ್ ಜತೆಗೆ ಮರಿಯಾನೆ ಆಟ ಆಡಿದೆ. ಓಡೋಡಿ ಬಂದ ಮರಿಯಾನೆಯು ಮೊಬೈಲ್ ನೋಡುತ್ತಾ ಮಲಗಿದ್ದ ಮಾಲೀಕನ ಬೆನ್ನ ಮೇಲೆ ಮಲಗಿಕೊಂಡಿದೆ. ಈ ಕ್ಯೂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ದೃಶ್ಯ ನೋಡಿ ಫುಲ್ ಫಿದಾ ಆಗಿದ್ದಾರೆ.

ಕೇರ್‌ ಟೇಕರ್‌ ಜತೆಗೆ ಮರಿಯಾನೆಯ ತುಂಟಾಟ

ವಿವಿನ್ ಚೆಂಪಕ (Wiwienchempaka) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಕೇರ್ ಟೇಕರ್ ಮೊಬೈಲ್ ನೋಡುತ್ತಾ ಮಲಗಿದ್ದಾನೆ. ಓಡುತ್ತಾ ಬಂದ ಮರಿಯಾನೆ ಯುವಕ ಬೆನ್ನ ಮೇಲೆ ಒರಗಿಕೊಂಡು ತುಂಟಾಟ ಆಡಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತಾಯಿಯ ಅಪ್ಪುಗೆಯಲ್ಲಿ ಸುಖ ನಿದ್ರೆಗೆ ಜಾರಿದ ಮರಿಯಾನೆ

ಈ ವಿಡಿಯೋ ಅಧಿಕ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕ್ಯೂಟ್ ಎಲಿಫೆಂಟ್ ಎಂದಿದ್ದಾರೆ. ಇನ್ನೊಬ್ಬರು, ಎಷ್ಟು ನೋಡಿದ್ರೂ ಸಾಲಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಎಷ್ಟು ಮುದ್ದಾಗಿದೆ ಈ ಪುಟಾಣಿ ಆನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:19 pm, Sat, 14 November 26

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More