
ಪಾರ್ಲೆ-ಜಿ (Parle-G) ಬಿಸ್ಕೆಟ್ ಒಮ್ಮೆಯಾದ್ರೂ ಎಲ್ಲರೂ ಸವಿದಿರುತ್ತೀರಿ. ಈ ಬಿಸ್ಕೆಟ್ ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಇವತ್ತಿಗೂ ಸಣ್ಣ ಪುಟ್ಟ ಅಂಗಡಿಗಳಿಂದ ಹಿಡಿದು ಪಾರ್ಟಿ ಹಾಲ್‌ಗಳಲ್ಲೂ ಈ ಬಿಸ್ಕೆಟ್ ಇದ್ದೆ ಇರುತ್ತದೆ. ಆದರೆ ಇದೀಗ ವಿದೇಶಿ ಮಹಿಳೆ ಪಾರ್ಲೆ-ಜಿ ಬಿಸ್ಕೆಟ್ ಸವಿದು ಅದರ ರುಚಿಗೆ ಫಿದಾ ಆಗಿದ್ದಾಳೆ. ಕೆನಡಿಯನ್ ಮಹಿಳೆ ಮೊದಲ ಬಾರಿಗೆ ಬಿಸ್ಕೆಟ್ ಸವಿದಿರುವ ವಿಡಿಯೋ ವೈರಲ್ ಆಗಿದೆ. ಈ ಕ್ಲಿಪ್ ನೋಡಿದ ನೆಟ್ಟಿಗರು ಬಾಲ್ಯದ ದಿನಗಳು ನೆನಪಾದವು ಎಂದು ಕಾಮೆಂಟ್ ಮಾಡಿದ್ದಾರೆ.
ವೆಗ್ ಮೊಮೋ (Veggmomo) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಕೆನಡಿಯನ್ ಮಹಿಳೆಯ ಮುಂದೆ ಪಾರ್ಲೆ-ಜಿ ಬಿಸ್ಕೆಟ್ ಇಟ್ಟಿರುವುದನ್ನು ಕಾಣಬಹುದು. ಮೊದಲ ಬಾರಿಗೆ ಪಾರ್ಲೆ-ಜಿ ಬಿಸ್ಕೆಟ್ ಸವಿದು ಟೇಸ್ಟ್ ಚೆನ್ನಾಗಿದೆ ಎನ್ನುವಂತೆ ರಿಯಾಕ್ಷನ್ ನೀಡಿದ್ದಾಳೆ.
ಇದನ್ನೂ ಓದಿ: ದುಬೈ ಮೆಟ್ರೋದಂತಿದೆ; ಜೈಪುರ ಮೆಟ್ರೋ ಸೇವೆ ಕಂಡು ಅಚ್ಚರಿ ವ್ಯಕ್ತಪಡಿಸಿದ ರಷ್ಯನ್ ಮಹಿಳೆ
ಈ ವಿಡಿಯೋ ಅರವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಪಾರ್ಲೆ ಜಿ ಬಿಸ್ಕೆಟ್ ಜತೆಗೆ ನೀರು ಬೆಸ್ಟ್ ಕಾಂಬಿನೇಶನ್ ಎಂದಿದ್ದಾರೆ. ಇನ್ನೊಬ್ಬರು, ಇದರ ರುಚಿ ತಿಳಿದವರೇ ಬಲ್ಲರು ಎಂದು ಹೇಳಿದ್ದಾರೆ. ಮತ್ತೊಬ್ಬರು, ಡಾಗ್ ಬಿಸ್ಕೆಟ್ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:11 pm, Wed, 30 September 26