Viral Video : ಯಾರಾದರೂ ತಮ್ಮದೇ ಮೊಟ್ಟೆ ಅಥವಾ ಎಳೇಮರಿಗಳನ್ನು ಮುಟ್ಟಿದರೆ ಅವುಗಳನ್ನು ದೂರ ಸರಿಸಿಬಿಡುತ್ತವೆ ಪ್ರಾಣಿ ಪಕ್ಷಿಗಳು. ಇಷ್ಟು ಸೂಕ್ಷ್ಮವಿರು ಇವುಗಳು ಬೇರೆ ಮರಿಗಳನ್ನು ಹತ್ತಿರಕ್ಕೆ ಎಳೆದುಕೊಳ್ಳುತ್ತವೆಯೇ? ಅಪರೂಪಕ್ಕೆ ಇದು ಸಾಧ್ಯವಾಗುತ್ತದೆ. ಪ್ರಾಣಿಗಳೂ ಮನುಷ್ಯರಂತೆ ವಿವಿಧ ಸ್ವಭಾವವನ್ನು ಹೊಂದಿರುತ್ತವೆ. ಇದೀಗ ವೈರಲ್ ಆಗಿರುವ ಈ ಕೆಳಗಿನ ವಿಡಿಯೋ ನೋಡಿ.
Mother Cat Adopts Two Orphaned Kittens
by u/RunKind4141 in AnimalsBeingBros
ಅಲೆಕ್ಸಾ ಎಂಬ ಬೆಕ್ಕಿನ ಪೋಷಕಿ ಎರಡು ಅನಾಥ ಮರಿಗಳನ್ನು ಅದರ ಬಳಿ ಇಡುವ ಪ್ರಯತ್ನ ಮಾಡುತ್ತಿದ್ದಾಳೆ. ಅಲೆಕ್ಸಾಳ ಬ್ಲ್ಯಾಂಕೆಟ್ನೊಳಗೆ ಆ ಮರಿಗಳನ್ನು ಸುತ್ತಿ, ಅವಳದೇ ಮೈವಾಸನೆ ಬರುವಂತೆ ಉಪಾಯ ಹೂಡುತ್ತಾಳೆ. ಆದರೂ ಬೆಕ್ಕು ಬೆಕ್ಕೇ ವಾಸನೆ ಗ್ರಹಿಸುವಲ್ಲಿ! ಮೊದಲು ಆರಂಭದಲ್ಲಿ ಹಿಂಜರಿಯುತ್ತದೆ. ಆದರೆ ಅದೇನೆನ್ನಿಸಿತೋ ಏನೋ… ಅವುಗಳನ್ನು ಮೆಲ್ಲಗೆ ತನ್ನ ಮಡಿಲೊಳಗೆ ಬೆಚ್ಚಗೆ ಇರಿಸಿಕೊಳ್ಳುತ್ತದೆ. ತನ್ನ ಮರಿಗಳೊಂದಿಗೆ ಇವೂ ತನ್ನ ಮರಿಗಳೇ ಎಂಬಂತೆ ಸಲುಹಲು ಶುರುಮಾಡುತ್ತದೆ.
ಇದನ್ನೂ ಓದಿ : ಡೋಲೋ 650 ಶಶಿರೇಖಾ; ನಿಮ್ಮ ಮನೆಮಗಳೀಗ ಮಾಡೆಲಿಂಗ್ಗೂ ಸೈ?
ಎರಡು ದಿನಗಳ ಹಿಂದೆ ಈ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಸುಮಾರು 30,000 ದಷ್ಟು ಜನರು ಇಷ್ಟಪಟ್ಟಿದ್ದಾರೆ. ಅನೇಕರು ಹೃದಯತುಂಬಿ ಪ್ರಕ್ರಿಯಿಸಿದ್ದಾರೆ. ಇನ್ನೂ ಕೆಲವರು ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ನಾಯಿ ಕರುವಿನ ಬಾಂಧವ್ಯ; ಸ್ವಜಾತಿ ಸ್ನೇಹ ಸಹಜ ಆದರೆ…
ಬೆಕ್ಕುಗಳು ಅನ್ಯಜಾತಿಯ ಪ್ರಾಣಿಗಳಿಗೂ ತಾಯಿಯಾಗುತ್ತದೆ ಎಂದು ಒಬ್ಬರು ಹೇಳಿದ್ದಾರೆ. ಅಯ್ಯೋ ಆ ಎಳೆಕೂಸುಗಳು ಎಷ್ಟೊಂದು ಸೂಕ್ಷ್ಮ ಮತ್ತು ಮುದ್ದು ಎಂದಿದ್ದಾರೆ. ಈ ಬೆಕ್ಕು ನಿಜಕ್ಕೂ ಮಹಾತಾಯಿಯೇ ಎಂದು ಮತ್ತೊಬ್ಬರು ಹೇಳಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:28 pm, Sat, 6 May 23