ಒಂದಲ್ಲಾ,ಎರಡಲ್ಲ ಬರೋಬ್ಬರಿ 27 ಮಹಿಳೆಯರ ವಿರುದ್ಧ ಕೇಸು ದಾಖಲಿಸಿದ ವ್ಯಕ್ತಿ; 623 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ

ವ್ಯಕ್ತಿಯೊಬ್ಬ ಸುಮಾರು 27 ಮಹಿಳೆಯರ ವಿರುದ್ಧ ಕೇಸು ದಾಖಲಿಸಿದ್ದಾನೆ. ಜೊತೆಗೆ ಅಷ್ಟೂ ಮಹಿಳೆಯ ವಿರುದ್ಧ 75 ಮಿಲಿಯನ್ ಡಾಲರ್ ಅಂದರೆ ಸುಮಾರು 623 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾನೆ.

ಒಂದಲ್ಲಾ,ಎರಡಲ್ಲ ಬರೋಬ್ಬರಿ 27 ಮಹಿಳೆಯರ ವಿರುದ್ಧ ಕೇಸು ದಾಖಲಿಸಿದ ವ್ಯಕ್ತಿ; 623 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ
Image Credit source: Pinterest

Updated on: Jan 21, 2024 | 6:46 PM

ನಿಕೋ ಡಿ ಅಂಬ್ರೋಸಿಯೊ ಎಂಬ ಅಮೇರಿಕನ್ ನಿವಾಸಿ  ಸುಮಾರು 27 ಮಹಿಳೆಯರ ವಿರುದ್ಧ ಕೇಸು ದಾಖಲಿಸಿದ್ದಾನೆ. ಜೊತೆಗೆ ಅಷ್ಟೂ ಮಹಿಳೆಯ ವಿರುದ್ಧ 75 ಮಿಲಿಯನ್ ಡಾಲರ್ ಅಂದರೆ ಸುಮಾರು 623 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾನೆ. ಅಷ್ಟಕ್ಕೂ ಆತನಿಗೆ ಈ ಮಹಿಳೆಯರ ಮೇಲೆ ಅಷ್ಟೊಂದು ಕೋಪ ಹುಟ್ಟಿಕೊಳ್ಳಲು ಕಾರಣ ಏನು ಗೊತ್ತಾ?

ಆಡಿಟಿ ಸೆಂಟ್ರಲ್ ವೆಬ್‌ಸೈಟ್‌ನ ವರದಿಯ ಪ್ರಕಾರ, 32 ವರ್ಷದ ನಿಕೊ ಡಿ’ಆಂಬ್ರೋಸಿಯೊ ಎಂಬ ವ್ಯಕ್ತಿ ತನ್ನೊಂದಿಗೆ ಡೇಟಿಂಗ್ ಮಾಡುವುದಾಗಿ ಹೇಳಿಕೊಂಡ ಹಲವಾರು ಮಹಿಳೆಯರು ಈತನ ವ್ಯಕ್ತಿತ್ವದ ಬಗ್ಗೆ ಅಸಭ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್​​​ ಮಾಡಿದ್ದಾರೆ ಎಂಬ ಕಾರಣಕ್ಕೆ ಕೋಪಗೊಂಡು ಈ ಮಹಿಳೆಯರ ಮೇಲೆ ಕೇಸು ದಾಖಲಿಸಿಕೊಂಡಿದ್ದಾನೆ. ಈ ಫೇಸ್ಬುಕ್ ಗುಂಪು ಅಮೇರಿಕಾದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಇದು ನ್ಯೂಯಾರ್ಕ್‌ನಲ್ಲಿ ಪ್ರಾರಂಭವಾದರೂ, ನಂತರ ಇದು ಇತರ ನಗರಗಳಿಗೂ ಹರಡಿತು. ಇದನ್ನು ಮುಖ್ಯವಾಗಿ ಮಹಿಳೆಯರು ತಮ್ಮ ಅನುಭವಗಳನ್ನು ಪುರುಷರೊಂದಿಗೆ ಹಂಚಿಕೊಳ್ಳಲು ಬಳಸುತ್ತಾರೆ.

ಇದನ್ನೂ ಓದಿ: ಸಿಂಗಲ್​​​ ಬಾಯ್ಸ್​​​ ​​​​ ನಿಮ್ಮ ಒಂಟಿತನವನ್ನು ಹೋಗಲಾಡಿಸಲು ಬಂದಿದ್ದಾಳೆ AI ಗೆಳತಿ

ಫೇಸ್‌ಬುಕ್ ಡೇಟಿಂಗ್ ಗ್ರೂಪ್‌ನಲ್ಲಿ ತನ್ನ ಬಗ್ಗೆ 27 ಮಹಿಳೆಯರು ಅಪಮಾನ ಮಾಡಿದಕ್ಕೆ 27 ಮಹಿಳೆಯರ ವಿರುದ್ಧ 75 ಮಿಲಿಯನ್ ಡಾಲರ್ ಅಂದರೆ ಸುಮಾರು 623 ಕೋಟಿಗೆ ಮೊಕದ್ದಮೆ ಹೂಡಿದ್ದಾನೆ. ಫೇಸ್‌ಬುಕ್ ಗುಂಪಿನಲ್ಲಿ ತನ್ನ ವೈಯಕ್ತಿಕ ಫೋಟೋಗಳನ್ನು ಹಂಚಿಕೊಳ್ಳುವುದರಿಂದ ಮತ್ತು ಹಲವಾರು ನನ್ನ ಬಗೆಗಿನ ಕಾಮೆಂಟ್‌ಗಳಿಂದಾಗಿ ತಾನು ‘ವೈಯಕ್ತಿಕ ಅವಮಾನ, ಮಾನಸಿಕ ವೇದನೆ, ಭಾವನಾತ್ಮಕ ತೊಂದರೆ, ಒತ್ತಡ, ಆತಂಕವನ್ನು ಅನುಭವಿಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾನೆ. ಹೀಗಾಗಿ 75 ಮಿಲಿಯನ್ ಡಾಲರ್ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾನೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ