Viral Video: ಇದು ಎತ್ತಿನ ಗಾಡಿ ಅಲ್ಲ….. ಮತ್ತೇನು?; ವಿಡಿಯೋ ವೈರಲ್
ಎತ್ತುಗಳಿಗೆ ಗಾಲಿ ಬಂಡಿಯನ್ನು ಕಟ್ಟಿದಂತೆ ಇಲ್ಲೊಬ್ಬ ಬಾಲಕ ತನ್ನ ಮನೆಯ ಶ್ವಾನಗಳಿಗೆ ಪುಟಾಣಿ ಗಾಲಿ ಬಂಡಿಯನ್ನು ಕಟ್ಟಿ, ಈ ಶ್ವಾನ ಬಂಡಿಯಲ್ಲಿ ಜಾನುವಾರುಗಳಿಗೆ ಮೇವು ತಂದಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ನಾವು ಎತ್ತಿನ ಗಾಡಿಯನ್ನು ನೋಡಿದ್ದೇವೆ, ಇದ್ಯಾವುದಪ್ಪಾ ಹೊಸ ಬಗೆಯ ಗಾಡಿ ಎಂದು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಹಿಂದೆ ಗ್ರಾಮೀಣ ಭಾಗದಲ್ಲಿ ರೈತರು ಬಹತೇಕ ಎತ್ತಿನಗಾಡಿಗಳನ್ನೇ ಆಶ್ರಯಿಸಿಕೊಂಡಿದ್ದರು. ದೈನಂದಿನ ಕೃಷಿ ಕಾರ್ಯಗಳಿಗೆ ಬೇಸಾಯಗಳ ಸಾಮಾನುಗಳನ್ನು ಸಾಗಿಸುವುದರಿಂದ ಹಿಡಿದು, ಧಾನ್ಯಗಳನ್ನು ಮನೆಗೆ ಸಾಗಿಸಲು, ಮಾರಕಟ್ಟೆಗೆ ಹೋಗಲು, ಜಾನುವಾರುಗಳಿಗೆ ಮೇವು ತರಲು, ಊಟ ಬೇಯಿಸಲು ಕಟ್ಟಿಗೆ ತರಲು ಹೀಗೆ ಪ್ರತಿಯೊಂದಕ್ಕೂ ಎತ್ತಿನ ಗಾಡಿ ಅನಿವಾರ್ಯವಾಗಿತ್ತು. ಆದರೆ ಇಂದು ಆಧುನೀಕರಣದ ಭರಾಟೆಯಲ್ಲಿ ಎತ್ತಿನ ಗಾಡಿ ಕಾಣಸಿಗವುದೇ ಅಪರೂಪವಾಗಿಬಿಟ್ಟಿದ್ದೆ. ಹೀಗಿರುವಾಗ ಇಲ್ಲೊಬ್ಬ ಬಾಲಕ ಎತ್ತಿನ ಬಂಡಿ ಇಲ್ಲದಿದ್ದರೇನಂತೆ, ನಮ್ಮ ಮನೆ ಶ್ವಾನಗಳಿದೆಯಲ್ವಾ, ಅವುಗಳಿಗೆ ಗಾಲಿ ಬಂಡಿ ಕಟ್ಟಿ ಅದರಲ್ಲಿಯೇ ದನಗಳಿಗೆ ಮೇವು ತರುವೆನೆಂದು, ವಿಶೇಷ ಶ್ವಾನ ಬಂಡಿಯನ್ನು ತಯಾರಿಸಿದ್ದಾನೆ. ಆ ಬಾಲಕ ಶ್ವಾನ ಬಂಡಿಯಲ್ಲಿ ಜಾನುವಾರುಗಳಿಗೆ ಮೇವು ತರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಅಪ್ಪಾ ದೇವ್ರೆ ಮನೆಯ ನಾಯಿಗಳನ್ನು ಈ ರೀತಿಯೂ ಬಳಸಿಕೊಳ್ಳಬಹುದು ಎಂಬ ವಿಷ್ಯನೇ ನಮ್ಗೆ ಗೊತ್ತಿರ್ಲಿಲ್ವೇ ಎನ್ನುತ್ತಾ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಈ ವಿಡಿಯೋವನ್ನು @banoth.babu.18 ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ಬಾಲಕನೊಬ್ಬ ಶ್ವಾನ ಬಂಡಿಯಲ್ಲಿ ಜಾನುವಾರುಗಳಿಗೆ ಮೇವು ತರುತ್ತಿರುವ ತಮಾಷೆಯ ದೃಶ್ಯವನ್ನು ಕಾಣಬಹುದು.
View this post on Instagram
ಇದನ್ನೂ ಓದಿ: ಗಜರಾಜರ ಫುಟ್ಬಾಲ್ ಪಂದ್ಯಾಟವನ್ನು ಎಂದಾದರೂ ನೋಡಿದ್ದೀರಾ; ಇಲ್ಲಿದೆ ನೋಡಿ ವೈರಲ್ ವಿಡಿಯೋ
ವೈರಲ್ ವಿಡಿಯೋದಲ್ಲಿ ಹಿಂದಿನ ಕಾಲದಲ್ಲಿ ದೂರದೂರುಗಳಿಂದ ಜಾನುವಾರುಗಳಿಗೆ ಮೇವು ತರಲು ಎತ್ತಿನ ಬಂಡಿಯನ್ನು ಬಳಸಿದಂತೆ, ಇಲ್ಲೊಬ್ಬ ಬಾಲಕ ಎತ್ತುಗಳಿಗೆ ಗಾಲಿ ಬಂಡಿ ಕಟ್ಟಿದಂತೆ, ಎರಡು ಶ್ವಾನಗಳಿಗೆ ಗಾಲಿ ಬಂಡಿ ಕಟ್ಟಿ, ಆ ಶ್ವಾನ ಬಂಡಿಯಲ್ಲಿ ಮನೆಯ ಜಾನುವಾರುಗಳಿಗೆ ಮೇವನ್ನು ತರುತ್ತಿರುವ ದೃಶ್ಯವನ್ನು ಕಾಣಬಹುದು.
ಆರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 44.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1.8 ಮಿಲಿಯನ್ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ʼಇತ್ತೀಚಿನ ದಿನಗಳಲ್ಲಿ ಶ್ವಾನಗಳಿಗೂ ಉದ್ಯೋಗ ಲಭಿಸಿವೆʼ ಅಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಶ್ವಾನಗಳನ್ನು ಈ ರೀತಿಯಲ್ಲೂ ಉಪಯೋಗಿಸಬಹುದೆಂದು ನನ್ಗೆ ಗೊತ್ತೇ ಇರ್ಲಿಲ್ವೇʼ ಅಂತ ತಮಾಷೆ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಕಲಿಯುಗ, ಏನು ಬೇಕಾದರೂ ಆಗಬಹುದುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಂತಹ ಪ್ರತಿಭೆಗಳು ಭಾರತದಲ್ಲಿ ಮಾತ್ರ ಕಾಣಸಿಗಲು ಸಾಧ್ಯʼ ಎಂದು ಹಾಸ್ಯ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:10 pm, Sun, 21 January 24