Viral Video: ಕಳ್ಳರ ಕರಾಮತ್ತು; ಕಾರಿನಲ್ಲಿ ಬಂದು ಮೇಕೆಯನ್ನು ಹೊತ್ತೊಯ್ದ ಹೈಟೆಕ್ ಕಳ್ಳರು
ಕಳ್ಳರು ಹೆಚ್ಚಾಗಿ ರಾತ್ರಿಯ ವೇಳೆಯಲ್ಲಿ ತಮ್ಮ ಕರಾಮತ್ತನ್ನು ತೋರಿಸುತ್ತಿರುತ್ತಾರೆ. ಆದ್ರೆ ಇಲ್ಲೊಂದು ಚಾಲಾಕಿ ಕಳ್ಳರ ಗುಂಪೊಂದು ಹಾಡು ಹಗಲೇ ಕಳ್ಳತನ ಮಾಡಿದ್ದಾರೆ. ಹೌದು ಬಿಹಾರದಲ್ಲಿ ಹೈಟೆಕ್ ಕಳ್ಳರ ಗುಂಪೊಂದು ಐಷಾರಾಮಿ ಕಾರಿನಲ್ಲಿ ಬಂದು ಹಾಡು ಹಗಲೇ ಮೇಕೆಯನ್ನು ಕದ್ದೊಯ್ದಿದ್ದಾರೆ. ಈ ದೃಶ್ಯ ಸಿಸಿ ಟಿಯಲ್ಲಿ ಸೆರೆಯಾಗಿದ್ದು, ಹೈಟೆಕ್ ಕಳ್ಳರ ಖತರ್ನಾಕ್ ಪ್ಲಾನ್ ಕಂಡು ನೆಟ್ಟಿಗರು ಶಾಕ್ ಅಗಿದ್ದಾರೆ.
ಚಿನ್ನಾಭರಣ, ಹಣ, ವಾಹನಗಳನ್ನು ಕಳ್ಳತನ ಮಾಡಿರುವ ಘಟನೆಯ ಬಗ್ಗೆ ನೀವು ಕೇಳಿರಬಹುದು. ಆದ್ರೆ ಇಲ್ಲೊಂದು ಚಾಲಾಕಿ ಕಳ್ಳರ ತಂಡ ಐಷಾರಾಮಿ ಕಾರಿನಲ್ಲಿ ವಿ.ಐ.ಪಿಗಳಂತೆ ಬಂದಿಳಿದು ಹಾಡು ಹಗಲೇ ಮೇಕೆಯನ್ನು ಕದ್ದೊಯ್ದಿದ್ದಾರೆ. ಹೌದು ಈ ಘಟನೆ ನಡೆದಿರುವಂತಹದ್ದು, ಬಿಹಾರದ ಬೇಗುಸರೈ ಜಿಲ್ಲೆಯ ಪಟೇಲ್ ಚೌಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ. ಐಷಾರಾಮಿ ಕಾರಿನಲ್ಲಿ ಬಂದಂತಹ ಮೂವರು ಖದೀಮರು ಸಾರ್ವಜನಿಕರು ಓಡಾಡುತ್ತಿರುವಂತಹ ಸ್ಥಳದಲ್ಲಿಯೇ ಯಾರ ಭಯವೂ ಇಲ್ಲದೆ, ಮೇಕೆಯನ್ನು ಕದ್ದೊಯ್ದಿದ್ದಾರೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಹೈಟೆಕ್ ಕಳ್ಳರ ಖತರ್ನಾಕ್ ಪ್ಲಾನ್ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಅಲ್ಲದೆ ಈ ಮೇಕೆ ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಈ ವಿಡಿಯೋ ಕ್ಲಿಪ್ ಅನ್ನು X ಖಾತೆಯಲ್ಲಿ ಹಂಚಿಕೊಂಡಿದ್ದು, “ಐಷಾರಾಮಿ ಕಾರಿನಲ್ಲಿ ಮೇಕೆ ಕಳ್ಳತನ; ಬಿಹಾರದ ಬೇಗುಸರೈನಲ್ಲಿ ಐಷಾರಾಮಿ ಕಾರಿನಲ್ಲಿ ಬಂದ ಖದೀಮರು ಮೇಕೆಯನ್ನು ಕಳ್ಳತನ ಮಾಡಿದ್ದು, ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವಿಡಿಯೋದಲ್ಲಿ ಕಾರಿನಲ್ಲಿ ಬಂದಂತಹ ಖದೀಮರ ತಂಡವೊಂದು ಮೇಕೆಯನ್ನು ಯಾವ ರೀತಿ ಕಳ್ಳತನ ಮಾಡಿದ್ದಾರೆ ಎಂಬ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ‘ಜಾನಿ ಜಾನಿ ಯೆಸ್ ಪಾಪ’ ಇಂಗ್ಲಿಷ್ ಹಾಡನ್ನು ಶಾಸ್ತ್ರೀಯ ಶೈಲಿಯಲ್ಲಿ ಹಾಡಿದ ವ್ಯಕ್ತಿ
ವೈರಲ್ ವಿಡಿಯೋದಲ್ಲಿ ಐಷಾರಾಮಿ ಕಾರಿನಲ್ಲಿ ಬಂದಂತಹ ಹೈಟೆಕ್ ಕಳ್ಳರ ತಂಡವೊಂದು ರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸಿ, ಅದ್ರಲ್ಲಿ ಒಬ್ಬ ಕಳ್ಳ ಯಾರಿಗೂ ಸಂಶಯ ಬಾರದಂತೆ ಫೋನಿನಲ್ಲಿ ಮಾತನಾಡುತ್ತಿರುವಂತೆ ನಾಟಕವಾಡುತ್ತಾ ನಿಂತಿರುತ್ತಾನೆ. ಇನ್ನೊಬ್ಬ ಕಳ್ಳ ಕಾರಿನ ಹಿಂದಿನ ಡೋರ್ ಓಪನ್ ಮಾಡಿ, ಕಾರ್ ಒಳಗೆ ಕೂರುತ್ತಾನೆ. ಅಷ್ಟರಲ್ಲಿ ಕಾರಿನ ಬಳಿ ಬಂದಂತಹ ಮೇಕೆಯನ್ನು ಕಾರಿನ ಒಳಗೆ ಎಳೆದು ಕೂರಿಸಿ, ಅಬ್ಬಾ ದೇವ್ರೆ ನಮ್ಮ ಪ್ಲಾನ್ ಸಕ್ಸಸ್ ಆಯಿತು, ಮೇಕೆ ಕದ್ದಿರುವುದನ್ನು ಯಾರು ನೋಡಿಲ್ಲ ಎನ್ನುತ್ತಾ, ಯಾರಿಗೂ ಸಂಶಯ ಬಾರದಂತೆ, ಮೇಕೆಯನ್ನು ಕಳ್ಳತನ ಮಾಡಿ ಪರಾರಿಯಾಗುವಂತಹ ದೃಶ್ಯವನ್ನು ಕಾಣಬಹುದು. ಇತ್ತೀಚಿಗೆ ಬಿಹಾರದಲ್ಲಿ ಈ ಮೇಕೆ ಕಳ್ಳತನದ ಪ್ರಕರಣಗಳು ಹೆಚ್ಚಾಗಿವೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:08 pm, Sun, 21 January 24