ಗುಜರಾತ್: ಸಾಲ ತೀರಿಸಲು ಪತ್ನಿಯ ₹4.5 ಲಕ್ಷ ಮೌಲ್ಯದ ಕಾರು ಕಳ್ಳತನಕ್ಕೆ ಸಂಚು ರೂಪಿಸಿದ ವ್ಯಕ್ತಿ ಬಂಧನ
ಗೋವರ್ಧನ್ ನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ದೊಡ್ಡ ಸಾಲ ತೀರಿಸಬೇಕಿದ್ದ ಕಾರಣ ತನ್ನ ಸ್ನೇಹಿತ ಇಕ್ಬಾಲ್ ಪಠಾಣ್ ಜತೆಗೂಡಿ ಕಳ್ಳತನಕ್ಕೆ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಪರಾಧದಲ್ಲಿ ಭಾಗಿಯಾಗಿರುವ ಇಕ್ಬಾಲ್ ಮತ್ತು ಆತನ ಸ್ನೇಹಿತನನ್ನು ಪೊಲೀಸರು ಇನ್ನೂ ಬಂಧಿಸಿಲ್ಲ.
ಸೂರತ್ ಜನವರಿ 19: ಸಾಲ ತೀರಿಸಲು ಪತ್ನಿಯ ಕಾರು ಕಳ್ಳತನ ಮಾಡಲು ಸಂಚು ರೂಪಿಸಿದ್ದ ವ್ಯಕ್ತಿಯನ್ನು ಗುಜರಾತ್‌ನ (Gujarat) ಉದ್ನಾ ಪೊಲೀಸರು (Udhna police) ಬಂಧಿಸಿದ್ದಾರೆ. ವಿವರಗಳ ಪ್ರಕಾರ, ಕಾಂಚನ್ ರಜಪೂತ್ ಎಂಬವರು ಜನವರಿ 16 ರಂದು ಪತ್ನಿಯ ಕಾರು ಕಳುವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಗಾಯತ್ರಿ ಕುರ್ಪಾ-2 ಸೊಸೈಟಿಯಲ್ಲಿರುವ ತನ್ನ ಮನೆಯ ಹೊರಭಾಗದಿಂದ ಜ.6ರಂದು ರಾತ್ರಿ ಸ್ವಿಫ್ಟ್ ಡಿಜೈರ್ ಕಾರನ್ನು ಕಳವು ಮಾಡಲಾಗಿದೆ ಎಂದು ದೂರಿದ ಅವರು, ಕಾಂಚನ್ ಕಾರಿನ ಮೌಲ್ಯ 4.5 ಲಕ್ಷ ರೂ. ಎಂದು ಹೇಳಿದ್ದಾರೆ.
ಈ ಬಗ್ಗೆ ಪೊಲೀಸ್ ಇನ್ಸ್ ಪೆಕ್ಟರ್ ಎಸ್ ಎನ್ ದೇಸಾಯಿ ತನಿಖೆ ಆರಂಭಿಸಿದ್ದರು. ಮೊದಲು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದಾಗ ಈ ಕೃತ್ಯದಲ್ಲಿ ಕಾಂಚನ್ ಅವರ ಪತಿ ಗೋವರ್ಧನ್ ಕೈವಾಡವಿರುವುದಾಗಿ ಅವರು ಶಂಕಿಸಿದ್ದಾರೆ. ಗೋವರ್ಧನ್ ನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ದೊಡ್ಡ ಸಾಲ ತೀರಿಸಬೇಕಿದ್ದ ಕಾರಣ ತನ್ನ ಸ್ನೇಹಿತ ಇಕ್ಬಾಲ್ ಪಠಾಣ್ ಜತೆಗೂಡಿ ಕಳ್ಳತನಕ್ಕೆ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.
ತಾನು ಕಾರಿನ ಮೇಲೆ ಟಾಪ್-ಅಪ್ ಸಾಲ ತೆಗೆದುಕೊಂಡಿದ್ದೇನೆ.ಕಂತುಗಳನ್ನು ಪಾವತಿಸಲು ಸಾಧ್ಯವಾಗದಿದ್ದಾಗ, ಅದನ್ನು ಕದಿಯಲು ಸಂಚು ರೂಪಿಸಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಕಳ್ಳತನದ ಬಳಿಕ ಪತ್ನಿಗೆ ದೂರು ನೀಡುವಂತೆ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಗೋವರ್ಧನ್ ಅವರನ್ನು ಬಂಧಿಸಿ ಅವರ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಗುಜರಾತ್‌ನಲ್ಲಿ ಉತ್ತರಾಯಣ ಪತಂಗ್ ಮಹೋತ್ಸವದಲ್ಲಿ ಗಾಳಿಪಟ ಹಾರಿಸಿದ ಅಮಿತ್ ಶಾ
ಕಳ್ಳತನಕ್ಕೆ ಹತ್ತು ದಿನ ಮುಂಚಿತವಾಗಿ, ರಜಪೂತ್ ನಕಲಿ ಕೀಲಿಯನ್ನು ತಯಾರಿಸಿ ಕಳ್ಳತನಕ್ಕಾಗಿ ಇಕ್ಬಾಲ್ ಕೈಗೆ ಕೊಟ್ಟಿದ್ದನ. ತನ್ನ ಮೇಲೆ ಯಾರಿಗೂ ಅನುಮಾನ ಬರದಂತೆ ರಜಪೂತ್ ಜನವರಿ 6 ರಂದು ರಾಜಸ್ಥಾನಕ್ಕೆ ತೆರಳಿದ್ದ. ಕಾರನ್ನು ಕದ್ದ ತನ್ನ ಸ್ನೇಹಿತನೊಂದಿಗೆ ಅದೇ ದಿನ ರಾತ್ರಿ 11 ಗಂಟೆಗೆ ಪಠಾಣ್, ರಜಪೂತ್ ಅವರ ಸೊಸೈಟಿಗೆ ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಾಧದಲ್ಲಿ ಭಾಗಿಯಾಗಿರುವ ಇಕ್ಬಾಲ್ ಮತ್ತು ಆತನ ಸ್ನೇಹಿತನನ್ನು ಪೊಲೀಸರು ಇನ್ನೂ ಬಂಧಿಸಿಲ್ಲ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ