Ram Mandir: ಅಯೋಧ್ಯೆ ರಾಮನ ಪ್ರಾಣಪ್ರತಿಷ್ಠೆ ಕುರಿತು ಟೀಕಿಸುತ್ತಿದ್ದಂತೆ ಕುಸಿದು ಬಿದ್ದ ವೇದಿಕೆ; ಇಲ್ಲಿದೆ ವಿಡಿಯೋ
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮುಖಂಡರೊಬ್ಬರು ಅಯೋಧ್ಯೆಯ ರಾಮಮಂದಿರದ 'ಪ್ರಾಣ ಪ್ರತಿಷ್ಠಾ' ಕಾರ್ಯಕ್ರಮವನ್ನು ಟೀಕಿಸಲು ಪ್ರಾರಂಭಿಸುತ್ತಿದ್ದಂತೆ ಹಠಾತ್ ವೇದಿಕೆ ಕುಸಿದುಬಿದ್ದಿದೆ. ಈ ಘಟನೆಗೆ ಸಂಬಂಧಿಸಿದ ದೃಶ್ಯಾವಳಿಗಳು ಇದೀಗಾ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಗುರುವಾರ (ಜನವರಿ 18), ಬಿಹಾರದ ದಿಹುರಿ ಗ್ರಾಮದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮುಖಂಡರೊಬ್ಬರು ಅಯೋಧ್ಯೆಯ ರಾಮಮಂದಿರದ ‘ಪ್ರಾಣ ಪ್ರತಿಷ್ಠಾ’ ಕಾರ್ಯಕ್ರಮವನ್ನು ಟೀಕಿಸಲು ಪ್ರಾರಂಭಿಸುತ್ತಿದ್ದಂತೆ ಹಠಾತ್ ವೇದಿಕೆ ಕುಸಿದುಬಿದ್ದಿದೆ. ಈ ಘಟನೆಗೆ ಸಂಬಂಧಿಸಿದ ದೃಶ್ಯಾವಳಿಗಳು ಇದೀಗಾ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಸ್ವಾತಂತ್ರ್ಯ ಹೋರಾಟಗಾರ ಅಬ್ದುಲ್ಲಾ ಅನ್ಸಾರಿ ಅವರ 51 ನೇ ಪುಣ್ಯಸ್ಮರಣೆಯನ್ನು ಸ್ಮರಿಸುವ ಸಲುವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಇದಾಗಿದ್ದು, ಆರ್‌ಜೆಡಿ ಮಾಜಿ ಸಂಸದ ಅಲಿ ಅನ್ವರ್ ಅನ್ಸಾರಿ ಸೇರಿ ಸಾಕಷ್ಟು ಗಣ್ಯರು ಭಾಗಿಯಾಗಿದ್ದರು.
ಕಾರ್ಯಕ್ರಮ ನಡೆಯುತ್ತಿದ್ದಂತೆ ಸ್ಥಳೀಯ ಮುಖಂಡರೊಬ್ಬರು ಜನವರಿ 22 ರಂದು ನಡೆಯುವ ಅಯೋಧ್ಯೆ ರಾಮನ ಪ್ರಾಣಪ್ರತಿಷ್ಠ ಕಾರ್ಯಕ್ರಮವನ್ನು ಟೀಕಿಸಲು ಶುರು ಮಾಡಿದ್ದಾರೆ. ಶ್ರೀ ರಾಮನ ಪ್ರಾಣಪ್ರತಿಷ್ಠಾಪನೆ ಕೇವಲ ಮುಂದಿನ ಚುನಾವಣೆಯಲ್ಲಿ ಮತ ಸೆಳೆಯಲು ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಕಾರ್ಯಕ್ರಮವನ್ನು ಟೀಕಿಸಲು ಪ್ರಾರಂಭಿಸುತ್ತಿದ್ದಂತೆ ಹಠಾತ್ ವೇದಿಕೆ ಕುಸಿದುಬಿದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ವೈರಲ್ ವಿಡಿಯೋ ಇಲ್ಲಿದೆ:
A gathering to pay tribute to freedom fighter Qaiyum Ansari in presence of former MP Ali Anwar Ansari was going on in gaya.
As soon as questions on credibility of Prana Pratishtha of Ram Mandir were raised- The Stage collapsed pic.twitter.com/0w1fBeHQ4p
— साबू 2.0 ठाकुर साहब 2.0💯 ✌️#Parody Account (@Sabu4mjupitor) January 19, 2024
ಇದನ್ನೂ ಓದಿ: ಆಫ್ರಿಕಾದಲ್ಲಿ ಶ್ರೀರಾಮ ಘೋಷ; ಅಯೋಧ್ಯೆಗೆ ಭೇಟಿ ನೀಡಲು ಉತ್ಸುಕರಾದ ಕಿಲಿ ಪೌಲ್
ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಜೆಪಿ ಮಾಜಿ ಗಯಾ ಜಿಲ್ಲಾಧ್ಯಕ್ಷ ಧನರಾಜ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ. “ಶ್ರೀರಾಮನ ಹೆಸರು ರಾಜಕೀಯ ಲಾಭಕ್ಕಾಗಿ ಅಲ್ಲ. ಹಿಂದೂ ಸನಾತನ ಧರ್ಮ ದೇಶದ ಹೆಮ್ಮೆ. ಮೊಘಲರು ಭಗವಾನ್ ಶ್ರೀರಾಮನ ಜನ್ಮಸ್ಥಳವನ್ನು ಕೆಡವಿ ಕಟ್ಟಡವನ್ನು ನಿರ್ಮಿಸಿದರು. ವರ್ಷಗಳ ಹೋರಾಟದ ನಂತರ, ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಂತೆ ಭವ್ಯವಾದ ಮತ್ತು ದೈವಿಕ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22 ರಂದು ‘ಪ್ರಾಣ ಪ್ರತಿಷ್ಠಾ’ ನಡೆಸಲಿದ್ದಾರೆ” ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:59 am, Sun, 21 January 24