Video: ಕರ್ತವ್ಯದಲ್ಲಿದ್ದ ಪೊಲೀಸ್​ಗೆ ಹಿಂದಿನಿಂದ ಬಂದು ಗುದ್ದಿದ ಗೂಳಿ; ಹಾರಿಬಿದ್ದು ಗಾಯಗೊಂಡ ಕಾನ್​ಸ್ಟೆಬಲ್​

| Updated By: Lakshmi Hegde

Updated on: Apr 03, 2022 | 3:07 PM

ಪೊಲೀಸ್​ ಕಾನ್​ಸ್ಟೆಬಲ್​ ಜ್ಞಾನ್ ಸಿಂಗ್ ಅವರಿಗೆ ಅದೃಷ್ಟವಶಾತ್​ ಹೆಚ್ಚೇನೂ ಅಪಾಯ ಆಗಲಿಲ್ಲ ಎಂದು ಹೇಳಲಾಗಿದ್ದು, ಚಿಕಿತ್ಸೆ ಪಡೆದ ಅವರು ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿದ್ದಾರೆ.

Video: ಕರ್ತವ್ಯದಲ್ಲಿದ್ದ ಪೊಲೀಸ್​ಗೆ ಹಿಂದಿನಿಂದ ಬಂದು ಗುದ್ದಿದ ಗೂಳಿ; ಹಾರಿಬಿದ್ದು ಗಾಯಗೊಂಡ ಕಾನ್​ಸ್ಟೆಬಲ್​
ಪೊಲೀಸ್​ಗೆ ಗೂಳಿ ಗುದ್ದಿರುವುದು
Follow us on

ದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಹಲವು ವಿಡಿಯೋಗಳು ಮೈ ನಡುಗಿಸುತ್ತವೆ. ಅದರಲ್ಲೊಂದು ಈಗ ವೈರಲ್​ ಆಗಿರೋ ಈ ವಿಡಿಯೋ. ದೆಹಲಿಯ ದಯಾಳ್​​ಪುರ ಎಂಬಲ್ಲಿರುವ ಶೇರ್​ಪುರದಲ್ಲಿ ಪೊಲೀಸ್​ ಕಾನ್​ಸ್ಟೆಬಲ್​ ಜ್ಞಾನ್ ಸಿಂಗ್ ಎಂಬುವರು ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಪಾಡಿಗೆ ಕೆಲಸ ಮಾಡುತ್ತಿದ್ದ ಕಾನ್​ಸ್ಟೆಬಲ್​​ಗೆ ಹಿಂದಿನಿಂದ ಬಂದ ಗೂಳಿಯೊಂದು ಗುದ್ದಿದೆ. ಅವರಿಗೆ ಗೂಳಿ ಬಂದು ಗುದ್ದುವವರೆಗೂ ಅಲ್ಲಿ ಗೂಳಿ ಇದ್ದಿದ್ದೇ ಗೊತ್ತಿಲ್ಲ. ಅದೆಷ್ಟರ ಮಟ್ಟಿಗೆ ಜೋರಾಗಿ ಗುದ್ದಿದೆಯೆಂದರೆ, ಜ್ಞಾನ್ ಸಿಂಗ್ ಗಾಳಿಯಲ್ಲಿ ಸ್ವಲ್ಪ ದೂರ ಹಾರಿ ಹೋಗಿ ಕೆಳಗೆ ಬಿದ್ದಿದ್ದಾರೆ. ಬಳಿಕ ಅಲ್ಲಿಯೇ ಸುತ್ತಲೂ ಇದ್ದ ಜನರು, ಡ್ಯೂಟಿಯಲ್ಲಿದ್ದ ಇತರ ಪೊಲೀಸರು ಆಗಮಿಸಿ ಜ್ಞಾನ್ ಸಿಂಗ್​ರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಪೊಲೀಸ್​ ಕಾನ್​ಸ್ಟೆಬಲ್​ ಜ್ಞಾನ್ ಸಿಂಗ್ ಅವರಿಗೆ ಅದೃಷ್ಟವಶಾತ್​ ಹೆಚ್ಚೇನೂ ಅಪಾಯ ಆಗಲಿಲ್ಲ ಎಂದು ಹೇಳಲಾಗಿದ್ದು, ಚಿಕಿತ್ಸೆ ಪಡೆದ ಅವರು ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿದ್ದಾರೆ. ಹೀಗೆ ಬೀಡಾಡಿ ಗೂಳಿಗಳು ದಾಳಿ ಮಾಡುವುದು ಇದೇ ಮೊದಲೇನೂ ಅಲ್ಲ. ಕಳೆದ ವರ್ಷ ಗುಜರಾತ್​​ನ ಭಾವನಗರದಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು. ವ್ಯಕ್ತಿಯೊಬ್ಬನ ಮೇಲೆ ಗೂಳಿ ದಾಳಿ ನಡೆಸಿ ಅವರೂ ಕೂಡ ಗಂಭೀರ ಗಾಯಗೊಂಡಿದ್ದರು.

ಇದನ್ನೂ ಓದಿ: ಫ್ಲ್ಯಾಶ್ ಮಾಬ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಖತ್​ ಹೆಜ್ಜೆ ಹಾಕಿದ ಕೇರಳ ಜಿಲ್ಲಾಧಿಕಾರಿ; ಇಲ್ಲಿದೆ ವೈರಲ್ ವಿಡಿಯೋ