ಲಿಫ್ಟ್​​​ನಲ್ಲಿ ಬಾಲಕಿಯ ಮೇಲೆ ದಾಳಿ ಮಾಡಿದ ನಾಯಿ, ನಿಮಗೆ ನಿಯಂತ್ರಣ ಮಾಡಲು ಸಾಧ್ಯವಾಗದಿದ್ದರೆ ಸಾಕಬೇಡಿ

|

Updated on: May 08, 2024 | 10:03 AM

ನೋಯ್ಡಾದಲ್ಲಿ ಬಾಲಕಿಯ ಮೇಲೆ ಸಾಕು ಶ್ವಾನವೊಂದು ದಾಳಿ ಮಾಡಿದೆ. ಈ ದಾಳಿಯಿಂದ ಬಾಲಕಿಗೆ ಆಘಾತವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಜತೆಗೆ ಅಕ್ಕ-ಪಕ್ಕದ ಜನರು ಕೂಡ ಅಕ್ರೋಶ ವ್ಯಕ್ತಪಡಿಸಿದ್ದಾರೆ. ನಾಯಿಯನ್ನು ನಿಯಂತ್ರಣ ಮಾಡಲು ಸಾಧ್ಯವಾಗದಿದ್ದರೆ, ಸಾಕಬೇಡಿ ಎಂದು ಹೇಳಿದ್ದಾರೆ

ಲಿಫ್ಟ್​​​ನಲ್ಲಿ ಬಾಲಕಿಯ ಮೇಲೆ ದಾಳಿ ಮಾಡಿದ ನಾಯಿ, ನಿಮಗೆ ನಿಯಂತ್ರಣ ಮಾಡಲು ಸಾಧ್ಯವಾಗದಿದ್ದರೆ ಸಾಕಬೇಡಿ
Follow us on

ಸಾಕು ನಾಯಿಗಳ ದಾಳಿ ಮಾಡುವ ಪ್ರಕರಣ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ, ಅದರಲ್ಲೂ ಅಪಾರ್ಟ್ಮೆಂಟ್​​ಗಳಲ್ಲಿ ಇಂತಹ ಘಟನೆ ಹೆಚ್ಚು ಕಂಡು ಬರುತ್ತಿದೆ. ಇದೀಗ ನೋಯ್ಡಾದ ಲೋಟಸ್​ 300 ರೆಸಿಡಿನ್ಶಿಯಲ್​​ ಸೊಸೈಟ್​​​ನಲ್ಲಿ ಆಘತಕಾರಿ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಲಿಫ್ಟ್​​​ನಲ್ಲಿ ಬಾಲಕಿಯೊಬ್ಬಳ ಮೇಲೆ ಅನೀರಿಕ್ಷಿತವಾಗಿ ನಾಯಿಯೊಂದು ದಾಳಿ ಮಾಡಿದೆ. ಇದೀಗ ಈ ವಿಡಿಯೋ ಎಕ್ಸ್​​​ನಲ್ಲಿ ವೈರಲ್​​​ ಆಗುತ್ತಿದೆ. ಮೇ 3ರಂದು ಈ ಘಟನೆ ನಡೆದಿದೆ. ಬಾಲಕಿಯೊಬ್ಬಳು ಲಿಫ್ಟ್​​​ನ ಒಳಗೆ ಇರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಲಿಫ್ಟ್​​​​​ ಓಪನ್​​​ ಆಗುತ್ತಿದ್ದಂತೆ ಶ್ವಾನ ಲಿಫ್ಟ್​​​​ನ ಒಳಗೆ ಬಂದು ಬಾಲಕಿಯ ಮೇಲೆ ದಾಳಿ ಮಾಡಿದೆ.

ಶ್ವಾನ ದಾಳಿ ಮಾಡಿದಾಗ ಬಾಲಕಿ ಮೇಲಕ್ಕೆ ನೆಗೆದಿದ್ದಾಳೆ. ಈ ವೇಳೆ ನಾಯಿ ಕಚ್ಚಿದೆ ಎಂದು ಹೇಳಲಾಗಿದೆ. ಇದೇ ವೇಳೆ ವ್ಯಕ್ತಿಯೊಬ್ಬರು ಬಂದು ಬಾಲಕಿಯನ್ನು ನಾಯಿಯಿಂದ ಕಾಪಾಡಿದ್ದಾರೆ. ಇನ್ನು ಕಾಪಾಡಲು ಬಂದ ವ್ಯಕ್ತಿಯನ್ನು ನಾಯಿಯ ಮಾಲೀಕ ಎಂದು ಹೇಳಲಾಗಿದೆ. ನಾಯಿ ಬಾಲಕಿಯ ಮೇಲೆ ದಾಳಿ ಮಾಡಿದಾಗ ಈ ವ್ಯಕ್ತಿ ನಾಯಿಯನ್ನು ಒದ್ದು ಹೊರಗೆ ಕಳುಹಿಸಿದ್ದಾರೆ. ಆದರೆ ಬಾಲಕಿ ಇದೀಗ ನಾಯಿ ದಾಳಿಯಿಂದ ತುಂಬಾ ಭಯಗೊಂಡಿದ್ದಾಳೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಕೇರಳದಲ್ಲಿ ಐವರಿಗೆ ವೆಸ್ಟ್ ನೈಲ್ ಜ್ವರ ಪತ್ತೆ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇನ್ನು ಈ ಘಟನೆಯಿಂದ ಅಕ್ಕ ಪಕ್ಕದ ಜನರು ಅಕ್ರೋಶಗೊಂಡಿದ್ದು. ಸಾಕು ನಾಯಿಗಳನ್ನು ಹೀಗೆ ಸಾರ್ವಜನಿಕ ಪ್ರದೇಶದಲ್ಲಿ ಬಿಡುವುದು ಸರಿಯಲ್ಲ, ಇದನ್ನು ನಿಮಗೆ ನಿಯಂತ್ರಣ ಮಾಡಲು ಸಾಧ್ಯವಾಗದಿದ್ದರೆ. ಯಾಕೆ ಸಾಕಬೇಕು ಎಂದು ಕೇಳಿದ್ದಾರೆ. ಇದೀಗ ಬಾಲಕಿಯ ಪೋಷಕರು ಈ ಘಟನೆ ಬಗ್ಗೆ ನೋಯ್ಡಾ ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ