AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

West Nile Fever: ಕೇರಳದಲ್ಲಿ ಐವರಿಗೆ ವೆಸ್ಟ್ ನೈಲ್ ಜ್ವರ ಪತ್ತೆ

ಕೇರಳದ ಉತ್ತರ ಜಿಲ್ಲೆಯಾದ ಕೋಝಿಕೋಡ್‌ನಲ್ಲಿ ವೆಸ್ಟ್ ನೈಲ್ ಜ್ವರದ 5 ಪ್ರಕರಣಗಳನ್ನು ಆರೋಗ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಈ ಸೋಂಕಿಗೆ ಒಳಗಾದವರೆಲ್ಲರೂ ಆರೋಗ್ಯವಂತರಾಗಿದ್ದರು, ಅವರಲ್ಲಿ ಯಾರಿಗೂ ಆರೋಗ್ಯ ಸಮಸ್ಯೆ ಇರಲಿಲ್ಲ ಎಂದು ತಿಳಿದುಬಂದಿದೆ.

West Nile Fever: ಕೇರಳದಲ್ಲಿ ಐವರಿಗೆ ವೆಸ್ಟ್ ನೈಲ್ ಜ್ವರ ಪತ್ತೆ
ಸೊಳ್ಳೆImage Credit source: istock
ಸುಷ್ಮಾ ಚಕ್ರೆ
|

Updated on: May 07, 2024 | 4:26 PM

Share

ಕೋಝಿಕ್ಕೋಡ್: ಕೇರಳದ ಕೋಝಿಕ್ಕೋಡ್​ನಲ್ಲಿ ವೆಸ್ಟ್ ನೈಲ್ ಜ್ವರದ (West Nile Fever) ಪ್ರಕರಣ ಪತ್ತೆಯಾಗಿದೆ. ಐವರಲ್ಲಿ ಈ ಸೋಂಕು ದೃಢಪಟ್ಟಿದ್ದು, ಸೋಂಕಿಗೆ ಒಳಗಾದವರೆಲ್ಲರೂ ಆರೋಗ್ಯವಂತರೆಂದು ತಿಳಿದುಬಂದಿದೆ. ಪುಣೆಗೆ ಕಳುಹಿಸಲಾದ ಮಾದರಿಗಳು ಕ್ಯುಲೆಕ್ಸ್ ಸೊಳ್ಳೆಗಳಿಂದ (Culex Mosquitoes) ಇದು ಹರಡುತ್ತವೆ ಎಂದು ತಿಳಿದುಬಂದಿದೆ. ಉಗಾಂಡಾದಲ್ಲಿ ಮೊದಲು ಈ ವೈರಸ್ ಪತ್ತೆಯಾಗಿತ್ತು. ನಂತರ ಕೇರಳದ ಮಲಪ್ಪುರಂ, ತ್ರಿಶೂರ್‌ನಲ್ಲಿ ವೆಸ್ಟ ನೈಲ್ ಜ್ವರದ ಪ್ರಕರಣಗಳು ಪತ್ತೆಯಾಗಿದೆ.

ಈ ವೈರಸ್ ಸೊಳ್ಳೆ ಕಡಿತದ ಮೂಲಕ ಮಾರಣಾಂತಿಕ ರೋಗವನ್ನು ಉಂಟುಮಾಡುತ್ತದೆ. ಕೆಲವರಲ್ಲಿ ಈ ಸೋಂಕು ಲಕ್ಷಣರಹಿತವಾಗಿರುತ್ತದೆ. ಕೋಝಿಕ್ಕೋಡ್ ಜಿಲ್ಲಾ ಕಣ್ಗಾವಲು ತಂಡದ ಅಧಿಕಾರಿಯ ಪ್ರಕಾರ, ಮಕ್ಕಳು ಸೇರಿದಂತೆ ಸೋಂಕಿತ ವ್ಯಕ್ತಿಗಳು ಇದೀಗ ಚೇತರಿಸಿಕೊಂಡಿದ್ದಾರೆ. ಡಿಸ್ಚಾರ್ಜ್ ಆಗಿ ಅವರ ಮನೆಗಳಿಗೆ ಮರಳಿದ್ದಾರೆ. ಅವರ ಪ್ರದೇಶಗಳಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ.

ಇದನ್ನೂ ಓದಿ: Bird Flu: ಹಕ್ಕಿ ಜ್ವರ ಬಂದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳಿವು

ಈ ರೋಗದ ಲಕ್ಷಣಗಳು ಉಂಟಾದ ಮತ್ತು ಚಿಕಿತ್ಸೆ ಪಡೆದವರ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ. ಕ್ಯುಲೆಕ್ಸ್ ಜಾತಿಯ ಸೊಳ್ಳೆಗಳು ವೆಸ್ಟ್ ನೈಲ್ ಜ್ವರವನ್ನು ಹರಡಲು ಕಾರಣವಾಗಿವೆ. ಇದನ್ನು ಮೊದಲು 1937ರಲ್ಲಿ ಉಗಾಂಡಾದಲ್ಲಿ ಗುರುತಿಸಲಾಯಿತು.

2011ರಲ್ಲಿ ಕೇರಳದಲ್ಲಿ ಮೊದಲ ಬಾರಿಗೆ ಜ್ವರದ ಪ್ರಕರಣ ಪತ್ತೆಯಾಯಿತು. 2019ರಲ್ಲಿ ಮಲಪ್ಪುರಂನ 6 ವರ್ಷದ ಬಾಲಕ ಈ ರೋಗಕ್ಕೆ ಬಲಿಯಾದನು. ಮೇ 2022ರಲ್ಲಿ ತ್ರಿಶೂರ್ ಜಿಲ್ಲೆಯ 47 ವರ್ಷದ ವ್ಯಕ್ತಿ ಕೂಡ ಜ್ವರದಿಂದ ಸಾವನ್ನಪ್ಪಿದರು.

ಇದನ್ನೂ ಓದಿ: ಪ್ರತಿದಿನ ಕುಡಿಯುವ ಟೀಗೆ ಚಿಟಿಕೆ ಉಪ್ಪು ಸೇರಿಸಿ; ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ

ರಾಜ್ಯ ಆರೋಗ್ಯ ಇಲಾಖೆಯ ಪ್ರಕಾರ, ವೆಸ್ಟ್ ನೈಲ್ ವೈರಸ್ ಮಾನವರಲ್ಲಿ ಮಾರಣಾಂತಿಕ ನರವೈಜ್ಞಾನಿಕ ಕಾಯಿಲೆಗೆ ಕಾರಣವಾಗಬಹುದು. ಹೆಚ್ಚಿನ ಸೋಂಕಿತ ವ್ಯಕ್ತಿಗಳು ಯಾವುದೇ ರೋಗಲಕ್ಷಣಗಳನ್ನು ಪ್ರದರ್ಶಿಸುವುದಿಲ್ಲ. ವೈರಸ್ ಪ್ರಾಥಮಿಕವಾಗಿ ಸೋಂಕಿತ ಸೊಳ್ಳೆಗಳ ಕಡಿತದ ಮೂಲಕ ಹರಡುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್