ಅಯೋಧ್ಯೆಯಲ್ಲಿ ಭಕ್ತರ ಹಣೆಗೆ ತಿಲಕವಿಡುತ್ತಾ ಈ ಬಾಲಕ ಗಳಿಸುತ್ತಿರುವುದು ಎಷ್ಟು ಗೊತ್ತಾ? ವಿಡಿಯೋ ನೋಡಿ

ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಹಣೆಯ ಮೇಲೆ ಬೊಟ್ಟು ಇಡುತ್ತಾ ದುಡಿಯುತ್ತಾನಂತೆ ಆ ಬಾಲಕ. ಇದರಿಂದ ಚಿನ್ನಾರಿ ಬಾಲಕ ದಿನಕ್ಕೆ ಸುಮಾರು 1500 ರೂ. ಗಳಿಸುತ್ತಾನಂತೆ. ಇದನ್ನು ಕೇಳಿದ ಅಮಿತ್ ಶಾಕ್ ಆಗಿದ್ದಾರೆ. ಗೋಲು ನೀನು ಯಾವುದೇ ವೃತ್ತಿಪರ ವ್ಯಕ್ತಿಯಂತೆ ಒಳ್ಳೆಯ ಗಳಿಕೆ ಸಂಪಾದಿಸುತ್ತಿದ್ದೀಯಪ್ಪಾ ಎಂದು ಪ್ರತಿಕ್ರಿಯಿಸಿದರಂತೆ. ಅಮಿತ್ ತಮ್ಮ ಪೋಸ್ಟ್ ನಲ್ಲಿ ಇದನ್ನೆಲ್ಲಾ ವಿಡಿಯೋ ಸ್ಟೋರಿ ಮಾಡಿ ಹಾಕಿಕೊಂಡಿದ್ದಾರೆ.

ಅಯೋಧ್ಯೆಯಲ್ಲಿ ಭಕ್ತರ ಹಣೆಗೆ ತಿಲಕವಿಡುತ್ತಾ ಈ ಬಾಲಕ ಗಳಿಸುತ್ತಿರುವುದು ಎಷ್ಟು ಗೊತ್ತಾ? ವಿಡಿಯೋ ನೋಡಿ
ಭಕ್ತರ ಹಣೆಗೆ ತಿಲಕವಿಡುತ್ತಾ ಈ ಬಾಲಕ ಗಳಿಸುತ್ತಿರುವುದು ಎಷ್ಟು?
Follow us
TV9 Web
| Updated By: ಸಾಧು ಶ್ರೀನಾಥ್​

Updated on: May 07, 2024 | 2:32 PM

ಅಯೋಧ್ಯೆಯಲ್ಲಿ ಬಾಲ ರಾಮ ಮಂದಿರ (Ayodhya Ram Mandir) ಸ್ಥಾಪನೆಗೊಂಡಿದ್ದೇ ತಡ ಯಾರು ಯಾರಿಗೆ ಎಷ್ಟೆಲ್ಲಾ ಭಾಗ್ಯದ ಬಾಗಿಲು ತೆರೆದಿದೆ ಎಂಬುದು ಊಹಿಸಿಕೊಳ್ಳೋಕು ಆಗ್ತಿಲ್ಲ, ಗಳಿಕೆ ಎಂಬುದು ಲೆಕ್ಕಕ್ಕೂ ಸಿಗ್ತಿಲ್ಲ. ಇನ್ನು ರಾಜಕೀಯ ಮೇಲಾಟದಲ್ಲಿ ಲಾಭ-ನಷ್ಟದ ಬಾಬ್ತು ಎಷ್ಟು ಎಂಬುದು ಪ್ರಚಲಿತ ಲೋಕಸಭಾ ಚುನಾವಣೆ ಫಲಿತಾಂಶಗಳನ್ನು ನೋಡಿ ಜೂನ್​ ಮೊದಲ ವಾರದಲ್ಲಿ ಹೇಳಬಹುದು! ಇದರಾಚೆಗೆ ನೋಡುವುದಾದರೆ ಈಗಂತೂ ಬಿಡಿ ಇದು ಸಾಮಾಜಿಕ ಜಾಲತಾಣಗಳ ಯುಗ. ಇಲ್ಲಿ ಜನಪ್ರಿಯವಾಗುವುದು ದೊಡ್ಡ ವಿಷಯವಲ್ಲ. ನಿಮ್ಮಲ್ಲಿ ನಿಜಕ್ಕೂ ಒಂದಷ್ಟು ವಿಶೇಷ ಕಲೆ ಅಥವಾ ಕೆಲವು ವಿಚಿತ್ರ ಗುಣಗಳು ಇದ್ದು ಅದನ್ನು ಪ್ರದರ್ಶನಕ್ಕೆ ಇಟ್ಟರೆ ದಿನಬೆಳಗಾಗೋದರೊಳಗೆ ಜನಪ್ರಿಯತೆಯ ಶಿಖರವನ್ನೇರಿರುತ್ತೀರಿ. ಅದಕ್ಕೆ ತಕ್ಕಂತೆ ಲಾಭ/ ಪ್ರಯೋಜನಗಳನ್ನು ಹೋಂದಿರುತ್ತೀರಿ. ಒಟ್ಟು ಜನರನ್ನು ಆಕರ್ಷಿಸಬೇಕು ಅಷ್ಟೇ – ಇಲ್ಲಿನ ನಿಯಮ. ಅದನ್ನು ಅಂತರ್ಜಾಲದಲ್ಲಿ ಶೇರ್ ಮಾಡುವ ಮೂಲಕ ಸದ್ದು ಮಾಡುತ್ತಾರೆ. ಮತ್ತು ಆ ವೀಡಿಯೊಗಳು ನಿಮ್ಮನ್ನು ರಾತ್ರೋರಾತ್ರಿ ಹೀರೋ ಮಾಡಿಬಿಡುತ್ತವೆ. ದೆಹಲಿಯ ವೈರಲ್ ವಡಾ ಪಾವ್ ಹುಡುಗಿಯಿಂದ ನಾಗ್ಪುರದ ಡಾಲಿ ಛಾಯ್​ವಾಲಾವರೆಗೆ, ಅನೇಕ ಸಾಮಾಜಿಕ ಮಾಧ್ಯಮದ ಜನಪ್ರಿಯ ತಾರೆಯರ ವೀಡಿಯೊಗಳನ್ನು ಇಂಟರ್ನೆಟ್‌ನಲ್ಲಿ ನೋಡಬಹುದು. ಸದ್ಯ ಅಂತಹ ಒಂದು ವಿಡಿಯೋ ನೆಟ್‌ನಲ್ಲಿ (instagram) ಹರಿದಾಡುತ್ತಿದೆ. ಅದು ಅಯೋಧ್ಯೆಯ ಗೋಲು ಎಂಬ ಬಾಲಕನ (Tilak) ಕುರಿತದ್ದಾಗಿದೆ. ಈ ವಿಡಿಯೋ (Viral Video) ನೆಟಿಜನ್‌ಗಳ ಗಮನ ಸೆಳೆದಿದೆ. ಬಾಲ ಗೋಲು ತನ್ನ ಉತ್ತರದಿಂದ ಅಪಾರ ಜನರ (Devotees) ಮನ ಗೆದ್ದಿದ್ದಾನೆ.

ಕ್ರಿಪ್ಟೋ ಶಿಕ್ಷಣತಜ್ಞ ಅಮಿತ್ ಸಿಂಗ್ ಅವರು ಆ ಹುಡುಗನ ವೀಡಿಯೊವನ್ನು ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಯೋಧ್ಯೆಯಲ್ಲಿ ವಾಸಿಸುವ ಬಾಲ ಗೋಲು, ದೇಶದ ಇತರೆ ಪ್ರೊಫೆಷನಲ್​ಗಳಿಗಿಂತ ಅಧಿಕ ಸಂಪಾದನೆ ಮಾಡುತ್ತಿದ್ದಾನೆ. ಅದಲ್ಲದೆ, ಹುಡುಗನ ಆತ್ಮವಿಶ್ವಾಸ ನೋಡಿದರೆ ಆತ ಉತ್ಸಾಹದ ಚಿಲುಮೆಯಾಗಿದ್ದಾನೆ ಎಂಬುದು ದೃಢಪಡುತ್ತದೆ. ಬಾಲ ರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ಭೇಟಿ ನೀಡಿರುವ ಅಮಿತ್ ಅವರು ಅಲ್ಲಿನ ರಸ್ತೆ ಬದಿಯಲ್ಲಿ ಭಕ್ತರ ಹಣೆಗೆ ಶ್ರೀಗಂಧದ ತಿಲಕದ ಬೊಟ್ಟು ಹಾಕುವ ಗೋಲು ಬಾಲಕ ಕಂಡಿದ್ದಾನೆ. ನಂತರ ಗೋಲುನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಮಿತ್ ಆ ಬಾಲಕನ ದಿನನಿತ್ಯದ ಗಳಿಕೆಯನ್ನು ತಿಳಿದುಕೊಳ್ಳಲು ಯತ್ನಿಸಿದ್ದಾರೆ. ಅದಕ್ಕೆ ಉತ್ಗರವಾಗಿ ಬಂದ ಆ ಮಗುವಿನ ಉತ್ತರ ಕೇಳಿ ಹುಬ್ಬೇರಿಸಿದ್ದಾರೆ!

ದಿನಕ್ಕೆ ರೂ.1500 ಗಳಿಸುತ್ತಾನಂತೆ ಗೋಲು!

ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಹಣೆಯ ಮೇಲೆ ಬೊಟ್ಟು ಇಡುತ್ತಾ ದುಡಿಯುತ್ತಾನಂತೆ ಆ ಬಾಲಕ. ಇದರಿಂದ ಚಿನ್ನಾರಿ ಬಾಲಕ ದಿನಕ್ಕೆ ಸುಮಾರು 1500 ರೂ. ಗಳಿಸುತ್ತಾನಂತೆ. ಇದನ್ನು ಕೇಳಿದ ಅಮಿತ್ ಶಾಕ್ ಆಗಿದ್ದಾರೆ. ಗೋಲು ನೀನು ಯಾವುದೇ ವೃತ್ತಿಪರ ವ್ಯಕ್ತಿಯಂತೆ ಒಳ್ಳೆಯ ಗಳಿಕೆ ಸಂಪಾದಿಸುತ್ತಿದ್ದೀಯಪ್ಪಾ ಎಂದು ಪ್ರತಿಕ್ರಿಯಿಸಿದರಂತೆ. ಅಮಿತ್ ತಮ್ಮ ಪೋಸ್ಟ್ ನಲ್ಲಿ ಇದನ್ನೆಲ್ಲಾ ವಿಡಿಯೋ ಸ್ಟೋರಿ ಮಾಡಿ ಹಾಕಿಕೊಂಡಿದ್ದಾರೆ. ಗೋಲು ಬಾಲಕನಲ್ಲಿ ಬುದ್ದಿವಂತಿಕೆ ಇದೆ. ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವಂತೆ, ಐಐಎಂ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದವರಂತೆ ಈತನಲ್ಲೂ ಅದೊಂದು ರೀತಿಯ ಪರಿಣಿತಿ ಇದೆ. ವಾಸ್ತವವಾಗಿ, ಭಾರತದ ಬೀದಿ ಬೀದಿಗಳಲ್ಲಿ ಅಸಂಖ್ಯಾತ ನುರಿತ ಜನರು ‘ಗೋಲು’ ರೂಪದಲ್ಲಿ ತಿರುಗುತ್ತಿದ್ದಾರೆ. ಅವರಲ್ಲಿ ಅದಮ್ಯ ಧೈರ್ಯ ಮತ್ತು ನಂಬಿಕೆ ಇದೆ. ಆದರೂ ಗೋಲು ಅಂತಹ ಬಾಲಕರು ಸೂಕ್ತ ಶಿಕ್ಷಣ, ಸಮರ್ಥ ಮಾರ್ಗದರ್ಶನ ಪಡೆದರೆ ಏನು ಬೇಕಾದರೂ ಮಾಡಬಲ್ಲರು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಏಪ್ರಿಲ್ 29 ರಂದು Insta ಹ್ಯಾಂಡಲ್ @guardians_of_the_cryptoverse ನೊಂದಿಗೆ ಹಂಚಿಕೊಳ್ಳಲಾದ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋ ಇದುವರೆಗೆ ಎರಡು ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ. ಸಾವಿರಾರು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಕಷ್ಟಪಟ್ಟು ದುಡಿಯುವ ಗೋಲುಗೆ ಸೆಲ್ಯೂಟ್ ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಆದರೆ, ಇನ್ನು ಕೆಲವರು ಹಾಗಾದರೆ ಇನ್ನು ಮುಂದೆ ದೇವಸ್ಥಾನ, ಫುಟ್​​​ಪಾತ್​​​ಗಳಲ್ಲಿ ಎಲ್ಲರೂ ತಿಲಕ ಪೆಟ್ಟಿಗೆ ಹಿಡಿದು ಕೆಲಸ ಆರಂಭಿಸಬೇಕಾ? ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್