
ಸೋಶಿಯಲ್ ಮೀಡಿಯಾದಲ್ಲಿ(social media) ವೈರಲ್ ಆಗುವ ಕೆಲ ವಿಡಿಯೋಗಳನ್ನು ಕಂಡಾಗ ಅಚ್ಚರಿಯಾಗುತ್ತದೆ. ಇದೇನಪ್ಪಾ ಹೀಗೆ ಎಂದೇನಿಸುತ್ತದೆ. ಈ ವಿಡಿಯೋ ನೋಡಿದ ಮೇಲೂ ನಿಮಗೂ ಹಾಗೆಯೇ ಅನಿಸದೇ ಇರದು. ಹೌದು, ಕುಟುಂಬವೊಂದು ಮೂರು ಟ್ರೇನಷ್ಟು ಮೊಟ್ಟೆಗಳನ್ನು ತಂದು ಮನೆಯಲ್ಲಿಟ್ಟಿದ್ದು, ಎರಡು ತಿಂಗಳ ಕಾಲ ಟ್ರಿಪ್‌ಗೆ (trip) ಹೋಗಿದೆ. ಮನೆಗೆ ಬಂದು ನೋಡಿದ್ರೆ ಅಚ್ಚರಿಯೊಂದು ಕಾದಿತ್ತು. ಅಷ್ಟಕ್ಕೂ ಆಗಿದ್ದೇನು, ಈ ಕುರಿತಾದ ಮಾಹಿತಿ ಇಲ್ಲಿದೆ.
ಟ್ರಿಪ್‌ಗೆ ಹೊರಡುವ ಮುನ್ನ ಮೂರು ಟ್ರೇ ಮೊಟ್ಟೆಗಳನ್ನು ತಂದಿಟ್ಟಿದ್ದರಂತೆ. ಈ ಮೊಟ್ಟೆಗಳಿಂದ ಮರಿಗಳು ಹೊರಬಂದಿವೆ. ಹೌದು, ಪ್ರವಾಸ ಮುಗಿಸಿ ಬರುವ ವೇಳೆಗೆ ಮನೆ ತುಂಬಾ ಓಡಾಡುತ್ತಿದ್ದ ಕೋಳಿ ಮರಿಗಳನ್ನು ಕಂಡು ಮನೆ ಮಂದಿ ಶಾಕ್ ಆಗಿದ್ದಾರೆ.
घर पे अंडा रख कर गए छुटी मनाने 2 महीने घर से बाहर गए,
सभी अंडे में से चूजे निकल गए देखिये अब लग रहा है चिकन बनाना होगा,कुदरत का करिश्मा हो गया अंडे में से बच्चे निकल गया pic.twitter.com/NSIA7EnEyD
— Ranjan Singh 🇮🇳 (@RanjanSinghh_) November 29, 2025
@RanjanSingh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಮನೆ ತುಂಬಾ ಕೋಳಿ ಮರಿಗಳು ಓಡಾಡುತ್ತಿರುವುದನ್ನು ನೋಡಬಹುದು.
ಇದನ್ನೂ ಓದಿ:ಟಿಫಿನ್ ಬಾಕ್ಸ್ ಕಂಡೊಡನೆ ಓಡೋಡಿ ಬಂದ ಅಳಿಲು, ಮುಂದೇನಾಯ್ತು ನೋಡಿ
ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಇದು ನಿಜವೇ ಎಂದು ಕೇಳಿದ್ದಾರೆ. ಇನ್ನೊಬ್ಬರು, ತುಂಬಾ ದುಃಖಕರವಾದ ಸಂಗತಿ ಎಂದರೆ, ಮತ್ತೊಬ್ಬರು ಮನೆಯಲ್ಲಿ ಫ್ರಿಡ್ಜ್ ಇರಲಿಲ್ಲವೇ ಎಂದು ಕೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ