Video: ಮೊದಲ ಬಾರಿಗೆ ದೋಸೆ ಸವಿದು ಕ್ಯೂಟ್ ರಿಯಾಕ್ಷನ್ ಕೊಟ್ಟ ವಿದೇಶಿಗ

ಭಾರತಕ್ಕೆ ಬರುವ ವಿದೇಶಿಗರು ಇಲ್ಲಿನ ಆಚಾರ ವಿಚಾರಕ್ಕೆ ಮಾತ್ರವಲ್ಲ ಆಹಾರ ಪದ್ಧತಿಗೂ ಫಿದಾ ಆಗ್ತಾರೆ. ಆದ್ರೆ ಇದೀಗ ವಿದೇಶಿಗನೊಬ್ಬ ಮೊದಲ ಬಾರಿಗೆ ದೋಸೆ ಸವಿದು ಕ್ಯೂಟ್ ರಿಯಾಕ್ಷನ್ ನೀಡಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ವಿದೇಶಿಗನ ರಿಯಾಕ್ಷನ್‌ಗೆ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಮೊದಲ ಬಾರಿಗೆ ದೋಸೆ ಸವಿದು ಕ್ಯೂಟ್ ರಿಯಾಕ್ಷನ್ ಕೊಟ್ಟ ವಿದೇಶಿಗ
ವೈರಲ್‌ ವಿಡಿಯೋ
Image Credit source: Instagram

Updated on: Sep 09, 2026 | 4:26 PM

ಇತ್ತೀಚಿನ ದಿನಗಳಲ್ಲಿ ಭಾರತೀಯ ಆಹಾರ ಪದ್ಧತಿ ಜಗತ್ತಿನಾದ್ಯಂತ ಭಾರಿ ಜನಪ್ರಿಯತೆ ಗಳಿಸುತ್ತಿದೆ.  ಹೀಗಾಗಿ ಭಾರತಕ್ಕೆ ಭೇಟಿ ನೀಡುವ ಅನೇಕ ವಿದೇಶಿ ಪ್ರವಾಸಿಗರು (foreign tourist) ಇಲ್ಲಿನ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಸವಿಯದೇ ಇರಲಾರರು. ಇದೀಗ ವಿದೇಶಿಗನೊಬ್ಬ ದೋಸೆ ರುಚಿಗೆ ಫುಲ್ ಫಿದಾ ಆಗಿದ್ದಾನೆ. ದೋಸೆ ತಿಂದ ಬಳಿಕ ಆತ ಕೊಟ್ಟ ಕ್ಯೂಟ್ ರಿಯಾಕ್ಷನ್ ನೆಟ್ಟಿಗರ ಹೃದಯ ಗೆದ್ದಿದೆ. ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಮೊದಲ ಬಾರಿಗೆ ದೋಸೆ ರುಚಿ ಸವಿದ ವಿದೇಶಿಗ

ಕ್ಲಿಟನ್ ಬಾಟ್ಸ್ (Clinton bates) ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಭಾರತೀಯ ಸ್ನೇಹಿತೆ ಈ ವಿದೇಶಿಗನನ್ನು ಹೋಟೆಲ್ ಗೆ ಕರೆದುಕೊಂಡು ದೋಸೆ ತಿನಿಸಿದ್ದಾಳೆ. ಫಸ್ಟ್ ಟೈಮ್ ದೋಸೆ ತಿನ್ನುತ್ತಿರುವುದಲ್ವಾ ಎನ್ನುತ್ತಿದ್ದಂತೆ ಈತ ಹೌದು ಎಂದು ತಲೆ ಅಲ್ಲಾಡಿಸಿದ್ದಾನೆ. ಕೊನೆಗೆ ಪ್ಲೇಟ್‌ನಲ್ಲಿ ದೋಸೆಯನ್ನು ಎರಡು ಕೈಯಲ್ಲಿಡಿದು ತಿಂದಿದ್ದಾನೆ. ಆ ರುಚಿ ಸವಿದ ಬಳಿಕ ಮೊದಲ ರಿಯಾಕ್ಷನ್ ಕೊಟ್ಟಿದ್ದು, ಇಷ್ಟ ಆಗಿಲ್ಲ ಎನ್ನುವಂತೆ ತಲೆ ಅಲ್ಲಾಡಿಸಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಭಾರತೀಯರೇ, ನೀವು ಎಲ್ಲವನ್ನೂ ವಿಶೇಷವಾಗಿಸಿದ್ದೀರಿ; ಕಣ್ಣೀರಿಡುತ್ತಾ ಭಾರತದಿಂದ ಹೊರಟ ವಿದೇಶಿ ಮಹಿಳೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ದೋಸೆ ಹೇಗೆ ತಿನ್ನುವುದೆಂದು ಕಲಿಸಿ ಕೊಡಿ ಎಂದಿದ್ದಾರೆ. ಇನ್ನೊಬ್ಬರು, ನೀವು ಮಾತಾಡೋ ಕನ್ನಡ ಭಾಷೆಯೇ ಚಂದ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಅವರಿಗೆ ದೋಸೆ ತಿನ್ನೋದು ಹೇಗೆಂದು ತಿಳಿದಿಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us