ಮನೆ ಮಂದಿಗೆ, ಸ್ನೇಹಿತರಿಗೆ ಹುಟ್ಟುಹಬ್ಬದ ಸರ್ಪ್ರೈಸ್ ನೀಡುವುದು ಕಾಮನ್. ಆದ್ರೆ ಇಲ್ಲೊಂದು ಯುವಕರ ತಂಡ ಬಹಳ ವಿಶೇಷವಾಗಿ ಗುರುವಿನ ಸ್ಥಾನದಲ್ಲಿರುವ ಆಶ್ರಮದ ಅನ್ನದಾತನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಹೌದು ತಾವು ನಡೆಸಿಕೊಂಡು ಬರುತ್ತಿರುವ ಆಶ್ರಮದಲ್ಲಿ ಅಡುಗೆಭಟ್ಟರಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಯ ಹುಟ್ಟುಹಬ್ಬವನ್ನು ಯುವಕರು ಸರ್ಪ್ರೈಸ್ ಆಗಿ ಆಚರಿಸಿದ್ದಾರೆ. ಈ ವಿಶೇಷ ಹುಟ್ಟುಹಬ್ಬದ ಆಚರಣೆಯನ್ನು ಕಂಡು ಅನ್ನದಾತ ಭಾವುಕರಾಗಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ನಮ್ಮ ಬೆಂಗಳೂರಿನಲ್ಲಿರುವ ಆರೈಕೆ ನಿರಾಶ್ರಿತ ಆಶ್ರಮದಲ್ಲಿ ಅಡುಗೆಭಟ್ಟರಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಗೆ ಆಶ್ರಮವನ್ನು ನಡೆಸುತ್ತಿರುವ ಯುವಕರು ಹುಟ್ಟುಹಬ್ಬದ ಸರ್ಪ್ರೈಸ್ ನೀಡಿದ್ದು, ವಿಶೇಷ ಉಡುಗೊರೆ ಮತ್ತು ಯುವಕರು ನೀಡಿದ ಪ್ರೀತಿಗೆ ಅಡುಗೆ ಭಟ್ಟರು ಭಾವುಕರಾಗಿದ್ದಾರೆ. ಹೌದು ಅಡುಗೆ ಭಟ್ಟರ ಮುಂದೆ ಮೊದಲಿಗೆ ಜಗಳವಾಡಿದಂತೆ ನಟಿಸಿ, ಆ ಜಗಳವನ್ನು ಬಿಡಿಸಲು ಬಂದ ಅವರಿಗೆ ಹುಟ್ಟುಹಬ್ಬದ ಸರ್ಪ್ರೈಸ್ ನೀಡಿ ಕೇಕ್ ಕಟ್ ಮಾಡಿಸುತ್ತಾರೆ. ನಂತರ ಸ್ಮಾರ್ಟ್‌ಫೋನ್ ಒಂದನ್ನು ಉಡುಗೊರೆಯಾಗಿ ನೀಡುತ್ತಾರೆ. ಈ ವಿಶೇಷ ಹುಟ್ಟುಹಬ್ಬ ಮತ್ತು ಯುವಕರ ಅಪಾರ ಪ್ರೀತಿಯನ್ನು ಕಂಡು ಅಡುಗೆ ಭಟ್ಟರು ಭಾವುಕರಾಗಿದ್ದಾರೆ.
ಈ ಕುರಿತ ವಿಡಿಯೋವನ್ನು ಆರೈಕೆ ನಿರಾಶ್ರಿತ ಆಶ್ರಮದ ಸ್ಥಾಪಕರಾದ ರಂಜಿತ್ ಶೆಟ್ಟಿ (aaraike_ranjith_shetty) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಆಶ್ರಮದ ಅಡುಗೆಭಟ್ಟರಿಗೆ ಯುವಕರ ತಂಡ ಹುಟ್ಟುಹಬ್ಬದ ಸರ್ಪ್ರೈಸ್ ನೀಡುವಂತಹ ದೃಶ್ಯವನ್ನು ಕಾಣಬಹುದು. ನಂತರ ಕೇಕ್ ಕಟ್ ಮಾಡಿಸಿ, ಮೊಬೈಲ್ ಒಂದನ್ನು ಉಡುಗೊರೆಯನ್ನು ನೀಡಿದ್ದಾರೆ. ಈ ವಿಶೇಷ ಹುಟ್ಟುಹಬ್ಬ ಮತ್ತು ಯುವಕರ ಅಪಾರ ಪ್ರೀತಿಯನ್ನು ಕಂಡು ಅಡುಗೆ ಭಟ್ಟರು ಭಾವುಕರಾಗಿದ್ದಾರೆ.
ಮತ್ತಷ್ಟು ಓದಿ:Viral Video: ಅಂಬೆಗಾಲು ಇಡುತ್ತಿರುವ ಕಂದಮ್ಮನಿಗೆ ಆಸರೆಯಾದ ಶ್ವಾನ, ವಿಡಿಯೋ ವೈರಲ್
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 7 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದ್ದಾರೆ. ಒಬ್ಬ ಬಳಕೆದಾರರು ʼಈ ವಿಡಿಯೋ ತುಂಬಾನೇ ಇಷ್ಟ ಆಯ್ತು. ನನಗೆ ಕಣ್ಣಲ್ಲಿ ಕಣ್ಣೀರು ಬಂತುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಸಮಾಜಕ್ಕೆ ಒಳ್ಳೆ ಸಂದೇಶ ನೀಡುವ ನಿಮಗೆ ತುಂಬಾ ಧನ್ಯವಾದಗಳುʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಈ ವಿಡಿಯೋಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ