ಅಸಾಮಾನ್ಯಳು! ಸಿಂಹಗಳೊಂದಿಗೆ ನಡೆಯುತ್ತಿರುವ ಯುವತಿಯ ವಿಡಿಯೋ ವೈರಲ್

Walking With Lions : ಕುರಿಗಳನ್ನು, ದನಗಳನ್ನು, ಕುದುರೆಗಳನ್ನು, ಕತ್ತೆಗಳನ್ನು ಮೇಯಲು ಕರೆದೊಯ್ಯುವಂತೆ ಈಕೆ ಸಿಂಹಗಳೊಂದಿಗೆ ಹೊರಟಿದ್ದಾಳೆ. ಸದ್ಯ ಇವುಗಳು ತಿರುಗಿ ಆಕೆಯನ್ನೆ ಮೇಯದಿದ್ದರೆ ಸಾಕು ಎನ್ನುತ್ತಿದ್ದಾರೆ ನೆಟ್ಟಿಗರು.

ಅಸಾಮಾನ್ಯಳು! ಸಿಂಹಗಳೊಂದಿಗೆ ನಡೆಯುತ್ತಿರುವ ಯುವತಿಯ ವಿಡಿಯೋ ವೈರಲ್
ಮೂರು ಸಿಂಹಗಳೊಂದಿಗೆ ನಡೆಯುತ್ತಿರುವ ಈ ಯುವತಿ
Edited By: ಶ್ರೀದೇವಿ ಕಳಸದ

Updated on: Dec 06, 2022 | 6:42 PM

Viral Video : ನಾಯಿಗಳನ್ನು ನೀವು ವಾಕ್​ ಕರೆದುಕೊಂಡು ಹೋಗುತ್ತೀರಿ. ದನಗಳನ್ನು, ಕುರಿಗಳನ್ನು, ಕತ್ತೆಗಳನ್ನು ಕುದುರೆಗಳನ್ನು ಮೇಯಲು ಕರೆದುಕೊಂಡು ಹೋಗುತ್ತೀರಿ. ಆದರೆ ಸಿಂಹಗಳನ್ನು? ಈತನಕ ನೋಡಿಲ್ಲ ಅಲ್ಲವಾ? ಹಾಗಿದ್ದರೆ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಎಮ್ಮೆಗಳನ್ನು ಮೇಯಿಸಲು ಕರೆದುಕೊಂಡು ಹೋಗುತ್ತಿದ್ದಾಳೋ ಏನೋ ಎಂಬಂತೆ ಅತ್ಯಂತ ಸಹಜವಾಗಿ ಈ ಯುವತಿ ನಡೆಯುತ್ತಿದ್ದಾಳೆ.

ಈ ವಿಡಿಯೋ ಅನ್ನು ಈತನಕ 6 ಮಿಲಿಯನ್​ ಜನರು ನೋಡಿದ್ದಾರೆ. ಸಿಂಹದ ಗರ್ಜನೆ ಕೇಳಿಯೇ ನಡುಕ ಬರುತ್ತದೆ. ಅಂಥದ್ದರಲ್ಲಿ ಈ ಯುವತಿ ಹೇಗೆ ಇಷ್ಟೊಂದು ನಿರಾಯಾಸವಾಗಿ ನಡೆಯುತ್ತ ಹೋಗುತ್ತಿದ್ದಾಳೆ. ಈ ಸಿಂಹಗಳು ಹೇಗೆ ಆಕೆಯೊಂದಿಗೆ ಸುಮ್ಮನೆ ನಡೆಯುತ್ತಿವೆ? ಆಕೆ ಬಹಳ ಧೈರ್ಯಶಾಲಿ ಎಂದು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಸಿಂಹವನ್ನೇ ಪಳಗಿಸಿದ ಮಹಿಳೆ ಎಂದು ಹೇಳುತ್ತಿದ್ದಾರೆ. ಆದರೆ ಎಷ್ಟೇ ತರಬೇತಿ ನೀಡಿ ಪಳಗಿಸಿದರೂ ವನ್ಯಪ್ರಾಣಿಗಳು ಯಾವಾಗ ತಿರುಗಿ ಬೀಳಬಹುದು ಎಂದು ಹೇಳಲಾಗದು ಎಂದಿದ್ದಾರೆ ಇನ್ನೊಬ್ಬರು. ಒಂದೇ ಸೆಕೆಂಡ್​ ಸಾಕು ನಿಮ್ಮನ್ನು ಸೀಳಿ ಎಸೆಯಲು ಎಂದಿದ್ದಾರೆ ಮಗದೊಬ್ಬರು. ಹೀಗೆಲ್ಲ ವಿಡಿಯೋ ಮಾಡುವುದು ಮೂರ್ಖತನ ಎಂದಿದ್ದಾರೆ ಹಲವರು.

ಈ ವಿಡಿಯೋ ಅಪ್​ಲೋಡ್ ಮಾಡಿದ ಜೆನ್​ ಎಂಬ ಈ ಯುವತಿ ತಾನು ಒಬ್ಬ ಡಿಜಿಟಲ್​ ಕ್ರಿಯೇಟರ್ ಎಂದು ಹೇಳಿಕೊಂಡಿದ್ದಾರೆ. ಅವರ ಅಕೌಂಟಿನಲ್ಲಿ ಸಾಕಷ್ಟು ಪ್ರಾಣಿಗಳೊಂದಿಗೆ ಒಡನಾಡಿರುವ ವಿಡಿಯೋಗಳಿವೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ

 

Published On - 6:31 pm, Tue, 6 December 22

Web contact

TV9 Kannada

Read More
Follow Us