ಚತುರ ಆನೆ! ವಿದ್ಯುತ್ ತಂತಿ ಬೇಲಿಯನ್ನು ಮುರಿದು ರಸ್ತೆ ದಾಟಿದ ಹಳೆಯ ವಿಡಿಯೋ ವೈರಲ್
Elephant : ತಂತಿಯನ್ನು ಮುಟ್ಟಿದರೆ ವಿದ್ಯುತ್ ಶಾಕ್ ಹೊಡೆಯುತ್ತದೆಯಾ? ಮುಟ್ಟಿ ಮುಟ್ಟಿ ನೋಡುತ್ತದೆ ಆನೆ. ಹಾಗಿದ್ದರೆ ಹೇಗೆ ಈ ಬೇಲಿಯನ್ನು ದಾಟುವುದು? ನೋಡಿ ಆನೆ ಏನು ಉಪಾಯ ಮಾಡುತ್ತದೆ...
Viral Video : ಆನೆ ನಾಡಿಗೆ ಬಂದಿತು, ಆನೆ ದಾಳಿ ಮಾಡಿತು ಎನ್ನುತ್ತೇವೆ. ಆದರೆ ಆನೆಗೇನು ನಾಡಿಗೆ ಬರಬೇಕೆಂಬ ಖಯಾಲಿ ಇರುವುದಿಲ್ಲ. ಅದು ಓಡಾಡು ಜಾಗವನ್ನೇ ನಾವು ಆಕ್ರಮಿಸಿಕೊಂಡಿರುವುದು. ಆನೆಯ ದಾರಿಯಲ್ಲಿ ರಸ್ತೆಗಳನ್ನು, ಊರುಗಳನ್ನು ಅಭಿವೃದ್ಧಿಪಡಿಸಿದರೆ ಅದು ಎಲ್ಲಿ ಓಡಾಡಿಕೊಂಡಿರಬೇಕು? ಅದರಲ್ಲಿಯೂ ಬೇಲಿ ಹಾಕಿದರೆ ಅದೇನು ಮಾಡಬೇಕು? ಏನು ಮಾಡಬೇಕೋ ಅದನ್ನೇ ಮಾಡುತ್ತದೆ. ಈ ವಿಡಿಯೋದಲ್ಲಿ ಹಾಕಿರುವ ಬೇಲಿ ಎಲೆಕ್ಟ್ರಿಕ್. ಆದರೆ ಆನೆಯ ಓಡಾಡುವ ಜಾಗವನ್ನು ಮಾನವ ಆಕ್ರಮಿಸಿಕೊಂಡಾಗ ಅದೇನು ಮಾಡಬೇಕು? ಜಾಣ ಆನೆ ಆ ಬೇಲಿಯನ್ನು ಮುರಿದು ತನ್ನ ದಾರಿಯಲ್ಲಿ ಸಾಗುತ್ತದೆ. ನೋಡಿ ಈ ಹಳೆಯ ವಿಡಿಯೋ ಮತ್ತೆ ವೈರಲ್ ಆಗಿದೆ.
We are too smart hooman !! See how this elephant is smartly breaking power fence. With patience. pic.twitter.com/0ZLqWvmxdu
ಇದನ್ನೂ ಓದಿ— Parveen Kaswan, IFS (@ParveenKaswan) December 5, 2022
ನೋಡಿ ಹೇಗೆ ಕಾಲಿನಿಂದ ವಿದ್ಯುತ್ ತಂತಿಯನ್ನು ಮುಟ್ಟಿಮುಟ್ಟಿ ಪರೀಕ್ಷಿಸುತ್ತದೆ. ತಂತಿಯನ್ನು ಮುಟ್ಟಿದರೆ ವಿದ್ಯುತ್ ಶಾಕ್ ಹೊಡೆಯುತ್ತದೆ ಎನ್ನುವ ಅರಿವಿನೊಂದಿಗೆ ಕಟ್ಟಿಗೆಯ ಕಂಬವನ್ನು ಒದ್ದು ಬೇಲಿಯನ್ನು ಮುರಿಯುತ್ತದೆ. ನಂತರ ಆರಾಮಾಗಿ ರಸ್ತೆ ದಾಟಿಕೊಂಡು ಹೋಗುತ್ತದೆ. ಈ ವಿಡಿಯೋ ಚಿತ್ರೀಕರಿಸಿದ್ದು 2019ರಲ್ಲಿ. ಇದೀಗ ಈ ವಿಡಿಯೋ ಅನ್ನು ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಹಂಚಿಕೊಂಡಿದ್ದಾರೆ. ನೆಟ್ಟಿಗರು ಆನೆಯ ಬುದ್ಧಿವಂತಿಕೆಯನ್ನು ಅಚ್ಚರಿಯಿಂದ ನೋಡುತ್ತಿದ್ದಾರೆ. ಈತನಕ 76,000 ಜನರು ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.
ಮನುಷ್ಯ ಭೂಮಿಯ ಇಂಚಿಂಚನ್ನೂ ಆವರಿಸಿಕೊಳ್ಳುತ್ತಿರುವಾಗ ಆನೆಗಳು ಬುದ್ದಿವಂತಿಕೆ ಉಪಯೋಗಿಸಲೇಬೇಕಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ