Viral Video: ಚಕ್ರಗಳಿಲ್ಲದೆ ಹಾವಿನಂತೆ ತೆವಳಿಕೊಂಡು ಹೋಗುವ ಪುಟ್ಟ ಕಾರು, ಇದು ವಿಚಿತ್ರ ಎಂದ ನೆಟ್ಟಿಗರು

ಸಾಮಾಜಿಕ ಮಾಧ್ಯಮದಲ್ಲಿ ವಿಶ್ವದ ಅತ್ಯಂತ ಪುಟಾಣಿ ಕಾರೊಂದರ ವೀಡಿಯೋ ವೈರಲ್ ಆಗಿದೆ. ಈ ಕಾರು ಚಕ್ರಗಳಿಲ್ಲದೆ ಹಾವಿನಂತೆ ತವಳಿಕೊಂಡು ಹೋಗುವುದನ್ನು ಕಂಡ ನೆಟ್ಟಿಗರು, ಈ ಕಾರಿನಲ್ಲಿ ಚಾಲಕ ಕುಳಿತುಕೊಂಡು ಕಾರು ಚಲಾಯಿಸುತ್ತಾನೋ ಅಥವಾ ಮಲಗಿಕೊಂಡು ಕಾರು ಚಲಾಯಿಸುತ್ತಾನೋ ಎಂದು ಪ್ರಶ್ನಿಸಿದ್ದಾರೆ.

Viral Video: ಚಕ್ರಗಳಿಲ್ಲದೆ ಹಾವಿನಂತೆ ತೆವಳಿಕೊಂಡು ಹೋಗುವ ಪುಟ್ಟ ಕಾರು, ಇದು ವಿಚಿತ್ರ ಎಂದ ನೆಟ್ಟಿಗರು
ವೈರಲ್​​ ವೀಡಿಯೊ
Edited By:

Updated on: Jun 29, 2023 | 5:10 PM

ತಂತ್ರಜ್ಞಾನವು ಸುಧಾರಿಸಿದಂತೆ ಜನರು ಹೊಸ ಆವಿಷ್ಕಾರಗಳನ್ನು ಆವಿಷ್ಕರಿಸುತ್ತಿದ್ದಾರೆ. ಅದರಲ್ಲೂ ಯುವಜನತೆ ಮೋಟಾರು ಸಂಬಂಧಿತ ಆವಿಷ್ಕಾರ ಮಾಡುವುದರಲ್ಲಿ ನಿಸ್ಸಿಮರು. ಇತ್ತೀಚಿಗೆ ರಾಜಸ್ಥಾನದ ಯುವಕನೊಬ್ಬ ಮಲಗುವ ಮಂಚವನ್ನು ಬಳಸಿಕೊಂಡು ಮೋಟಾರು ವಾಹನವನ್ನು ತಯಾರಿಸಿರುವ ಸುದ್ದಿಯನ್ನು ಕೇಳಿರಬಹುದು. ಇಂತಹ ವಿಶಿಷ್ಟ ಆವಿಷ್ಕಾರಗಳ ಕುರಿತ ಸುದ್ದಿ ಜನರನ್ನು ಹೆಚ್ಚು ಆಕರ್ಷಿಸುತ್ತದೆ. ಇದೇ ರೀತಿ ಇಲ್ಲೊಂದು ಯುವಕರ ತಂಡ ವಿಶಿಷ್ಟವಾದ ಕಾರೊಂದನ್ನು ವಿನ್ಯಾಸಗೊಳಿಸಿದ್ದು, ಇದರ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಚಕ್ರಗಳಿಲ್ಲದೆ ಹಾವಿನಂತೆ ತೆವಳಿಕೊಂಡು ಹೋಗುವ ಈ ಕಾರಿನ ವೀಡಿಯೋವನ್ನು ಕಂಡು ನೆಟ್ಟಿಗರು ಇದೆಂತಹ ವಿಚಿತ್ರ ಕಾರು ಎಂದು ಬೆರಗಾಗಿದ್ದಾರೆ.

ವೀಡಿಯೋದಲ್ಲಿ ಕಾರಿನ ಮೇಲ್ಭಾಗ ಮಾತ್ರ ಗೋಚರಿಸುತ್ತದೆ. ಹಾಗೂ ಕಾರು ನೆಲದಡಿ ಅರ್ಧ ಮುಳುಗಿ ಹೋಗಿದೆ ಎಂಬಂತೆ ಭಸವಾಗುತ್ತದೆ. ಆದರೆ ಕಾರಿನಲ್ಲಿ ಇತರ ಕಾರಿನಲ್ಲಿ ಇರುವಂತೆ ಇಂಜಿನ್ ಅಥವಾ ಚಕ್ರಗಳು ಇರುವುದು ಕಾಣಿಸುವುದಿಲ್ಲ. ಈ ವೀಡಿಯೋವನ್ನು ಮೆಸ್ಸಿಮೊ (@Rainmaker1973) ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಚಕ್ರಗಳಿಲ್ಲದೆ ಕಾರು ಹಾವಿನಂತೆ ತೆವಳಿಕೊಂಡು ಹೋಗುವುದನ್ನು ಕಾಣಬಹುದು. ಇದನ್ನು ನೋಡಿ ಅನೇಕರು ಈ ಪುಟಾಣಿ ಕಾರನ್ನು ಚಲಾಯಿಸುವುದಾರೂ ಹೇಗೆ, ಇದನ್ನು ನಿಜವಾಗಿಯೂ ಚಾಲಕನೆ ಚಲಾಯಿಸುತ್ತಿದ್ದಾನಾ ಅಥವಾ ರಿಮೋಟ್ ಕಂಟ್ರೋಲ್ ಕಾರ್ ಇರಬಹುದೇ ಎಂದು ಗೊಂದಲಕ್ಕಿಡಾಗಿದ್ದಾರೆ. ಈ ಕಾರನ್ನು ವಿನ್ಯಾಸಗೊಳಿಸಿದ ಯುವಕರ ತಂಡ ತಮ್ಮ ಯೂಟ್ಯೂಬ್ ಚಾನಲ್​​ನಲ್ಲಿ (@Carmagheddon) ಈ ಕಾರನ್ನು ವಿಶಿಷ್ಟವಾಗಿ ಹೇಗೆ ವಿನ್ಯಾಸಗೊಳಿಸಲಾಯಿತು, ಇದನ್ನು ಯಾವ ರೀತಿ ಚಲಾಯಿಸಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಈ ಕಾರು ಇಂಜಿನ್ ಮತ್ತು ಟೈರ್​​ಗಳನ್ನು ಹೊಂದಿದೆಯೇ ಎಂಬ ನಿಮ್ಮ ಗೊಂದಲಕ್ಕೂ ಉತ್ತರ ನೀಡುತ್ತದೆ.

ಇದನ್ನೂ ಓದಿ: Video Viral: ದೆಹಲಿ ಮೆಟ್ರೋವನ್ನು ರಣರಂಗ ಮಾಡಿಕೊಂಡ ಇಬ್ಬರು ವ್ಯಕ್ತಿಗಳು, ಇವರ ಗುದ್ದಾಟಕ್ಕೆ ಇತರ ಪ್ರಯಾಣಿಕರು ಹೈರಾಣ

ಮೆಸ್ಸಿಮೊ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವೀಡಿಯೋ 36.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಲೈಕ್ಸ್​​​ಗಳನ್ನು ಪಡೆದುಕೊಂಡಿದೆ. ಹಾಗೂ ಈ ಕಾರನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ, ಇದು ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಾದ ಯುಟ್ಯೂಬ್ ವೀಡಿಯೋ 5 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ವಿಶಿಷ್ಟ ಆವಿಷ್ಕಾರವನ್ನು ಹಲವರು ಹೊಗಳಿದರೆ, ಇನ್ನೂ ಕೆಲವರು ಇಂತಹ ವಾಹನದ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ;

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us