
ಬದುಕು (life) ಯಾವಾಗ ಹೇಗೆ ತಿರುವು ಪಡೆದುಕೊಳ್ಳುತ್ತದೆ ಎಂದು ಹೇಳಲಾಗದು. ಕೆಲವೊಮ್ಮೆ ಒಂಟಿಯಾಗಿ ತಮ್ಮ ಮಕ್ಕಳ ಜವಾಬ್ದಾರಿ ಹೊತ್ತು ಕೊಂಡು ಅವರುಗಳಿಗೆ ಉತ್ತಮ ಭವಿಷ್ಯ ಕಟ್ಟಿ ಕೊಡಬೇಕಾಗುತ್ತದೆ. ಇಲ್ಲೊಬ್ಬ ಆಟೋ ಡ್ರೈವರ್‌ನದ್ದು (auto driver) ಅದೇ ಕಥೆ. ಪತ್ನಿಯನ್ನು ಕಳೆದುಕೊಂಡ ಆಟೋ ಡ್ರೈವರ್ ತನ್ನ ಮಗಳಿಗೆ ತಂದೆ ಮಾತ್ರವಲ್ಲ ತಾಯಿಯೂ ಆಗಿದ್ದಾನೆ. ಹೀಗಾಗಿ ಆಟೋದಲ್ಲೇ ತನ್ನ ಪುಟ್ಟ ಪ್ರಪಂಚವನ್ನು ಮಲಗಿಸಿಕೊಂಡು ದುಡಿಮೆಯನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದಾನೆ. ಈ ವ್ಯಕ್ತಿಯ ಬದುಕಿನ ಕಣ್ಣೀರಿನ ಕಥೆಯನ್ನು ಪ್ರಯಾಣಿಕನೊಬ್ಬ ಬಿಚ್ಚಿಟ್ಟಿದ್ದಾನೆ.
@SaffronChargers ಹೆಸರಿನ ಎಕ್ಸ್ ಖಾತೆಯಲ್ಲಿ ಆಟೋ ಡ್ರೈವರ್ ನ ಕಥೆಯನ್ನು ಹಂಚಿಕೊಳ್ಳಲಾಗಿದೆ. ಈ ಆಟೋ ಚಾಲಕನನ್ನು ಭೇಟಿ ಮಾಡಿ, ಈತ ಒಬ್ಬ ಸಿಂಗಲ್ ಪೇರೆಂಟ್. ಹೆಂಡತಿ ತೀರಿಹೋದ ಬಳಿಕ ಈತನಿಗೆ ಮಗಳೇ ಪ್ರಪಂಚ. ಮಗಳನ್ನು ಎಲ್ಲೆಡೆ ಕರೆದೊಯ್ಯುತ್ತಾ, ಜೀವನೋಪಾಯಕ್ಕಾಗಿ ದುಡಿಯುತ್ತಾ ಆಕೆಯನ್ನು ಏಕಾಂಗಿಯಾಗಿ ಸಾಕುತ್ತಿದ್ದಾನೆ. ಪುರುಷನಾಗಿರುವುದು ಅಷ್ಟು ಸುಲಭವಲ್ಲ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
Meet this auto driver, a single parent. His wife passed away and since then he carries his little daughter everywhere, earning a living and raising her alone.
Being a man is not easy 💔 pic.twitter.com/JKVlNmtlg0
— Saffron Chargers (@SaffronChargers) February 9, 2026
ಈ ವಿಡಿಯೋದಲ್ಲಿ ಆಟೋ ಚಾಲಕನೊಬ್ಬ ತನ್ನ ಪುಟ್ಟ ಮಗಳನ್ನು ಆಟೋದಲ್ಲಿ ಮಲಗಿಸಿರುವುದನ್ನು ಕಾಣಬಹುದು. ಈ ಆಟೋದಲ್ಲಿದ್ದ ಪ್ರಯಾಣಿಕರೊಬ್ಬ ‘ಆಟೋದಲ್ಲಿ ಮಗುವನ್ನು ಏಕೆ ಮಲಗಿಸಿದ್ದೀರಿ? ಯಾರಿದು ಮಗು? ಎಂದು ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಆಟೋ ಚಾಲಕನು ಇವಳು ನನ್ನ ಮಗಳು. ಇತ್ತೀಚೆಗಷ್ಟೇ ನನ್ನ ಹೆಂಡತಿ ತೀರಿಕೊಂಡಳು. ಮಗಳನ್ನು ಮನೆಯಲ್ಲಿ ಒಬ್ಬಳೇ ಬಿಟ್ಟು ಆಟೋ ಓಡಿಸಲು ಬರಲು ನನಗೆ ಸಾಧ್ಯವಿಲ್ಲ. ನಾನು ಮಗುವನ್ನು ನೋಡಿಕೊಳ್ಳಬೇಕು. ಜೊತೆಗೆ ಕೆಲಸಕ್ಕೆ ಹೋಗದಿದ್ದರೆ ನಮ್ಮ ಜೀವನ ನಡೆಯುವುದು ಕಷ್ಟವಾಗುತ್ತದೆ. ನಾನು ಈಗ ಸಿಂಗಲ್ ಪೇರೆಂಟ್ ಆಗಿರುವ ಕಾರಣ, ಮಗಳನ್ನು ಆಟೋದಲ್ಲೇ ಮಲಗಿಸಿಕೊಂಡು ಕೆಲಸಕ್ಕೆ ಕರೆತರುತ್ತೇನೆ ಎಂದು ಹೇಳಿದ್ದಾನೆ. ಈ ಆಟೋ ಪ್ರಯಾಣಿಕನ ಕಥೆ ಕೇಳಿ ಮನದಲ್ಲೇ ನೊಂದುಕೊಂಡ ಪ್ರಯಾಣಿಕ, ಮಗು ಎಚ್ಚರಗೊಂಡಾಗ ಜ್ಯೂಸ್ ಕೊಡಿಸಿ ಎಂದು ಹಣ ನೀಡಿರುವುದನ್ನು ಕಾಣಬಹುದು.
ಇದನ್ನೂ ಓದಿ: ರೈಲಿನಲ್ಲಿ ಬ್ರೇಸ್ಲೆಟ್ ಮಾರಿ ಸ್ವಾಭಿಮಾನದ ಬದುಕು ಕಟ್ಟಿಕೊಂಡ ಅಜ್ಜಿ, ವೈರಲ್ ಆಯ್ತು ದೃಶ್ಯ
ಈ ವಿಡಿಯೋ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದು ಕೊಂಡಿವೆ. ಒಬ್ಬ ಬಳಕೆದಾರ, ಅಪ್ಪ ಯಾವತ್ತಿದ್ದರೂ ಹೀರೋನೇ ಎಂದಿದ್ದಾರೆ. ಮತ್ತೊಬ್ಬರು, ಕಷ್ಟಪಟ್ಟು ದುಡಿಯುತ್ತಾ ಮಗಳನ್ನು ಏಕಾಂಗಿಯಾಗಿ ಸಾಕುವುದು ಅಷ್ಟು ಸುಲಭವಲ್ಲ. ಇವರೇ ನಿಜವಾದ ಹೀರೋಗಳು, ಈ ಕಥೆ ಹೃದಯಸ್ಪರ್ಶಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಅಪ್ಪನ ಪ್ರೀತಿಗೆ ಬೆಲೆ ಕಟ್ಟಲು ಅಸಾಧ್ಯ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ