Video: ಕಾರ್ ವಾಶ್ ಮಾಡುತ್ತಿದ್ದ ವೃದ್ಧ ಮಹಿಳೆಗೆ ಸಹಾಯ ಮಾಡಿ ನಗು ಮೂಡಿಸಿದ ವ್ಯಕ್ತಿ

ಇಳಿ ವಯಸ್ಸಿನಲ್ಲಿ ತಾವೇ ದುಡಿದು ತಿನ್ನುವ ವ್ಯಕ್ತಿಗಳನ್ನು ನೀವು ನೋಡಿರುತ್ತೀರಿ. ರಸ್ತೆ ಬದಿಯಲ್ಲಿ ಕಾರನ್ನು ತೊಳೆಯುವ ಕಾಯಕವನ್ನೇ ನಂಬಿಕೊಂಡ ಅಜ್ಜಿಯ ಮೊಗದಲ್ಲಿ ವ್ಯಕ್ತಿಯೊಬ್ಬರು ನಗು ಮೂಡಿಸಿದ್ದಾರೆ. ತಮ್ಮ ಕೈಲಾದಷ್ಟು ಹಣ ನೀಡಿ ಸಹಾಯ ಮಾಡಿದ್ದಾರೆ. ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಕಾರ್ ವಾಶ್ ಮಾಡುತ್ತಿದ್ದ ವೃದ್ಧ ಮಹಿಳೆಗೆ ಸಹಾಯ ಮಾಡಿ ನಗು ಮೂಡಿಸಿದ ವ್ಯಕ್ತಿ
ವೈರಲ್‌ ವಿಡಿಯೋ
Image Credit source: Instagram

Updated on: Sep 01, 2026 | 10:41 AM

ಸ್ವಾಭಿಮಾನದ ಬದುಕೇ ಹಾಗೆ, ತಮ್ಮ ಇಳಿ ವಯಸ್ಸಿನಲ್ಲಿ ಯಾರ ಮುಂದೆ ಕೈ ಚಾಚದೇ ಕಷ್ಟ ಪಟ್ಟು ದುಡಿದು ತಿಂತಾರೆ. ಇದಕ್ಕೆ ಉದಾಹರಣೆಯಂತಿದ್ದಾರೆ ಈ ವೃದ್ಧ ಮಹಿಳೆ. ಮುಂಬೈನ ರಸ್ತೆ ಬದಿಯಲ್ಲಿ ಕಾರು ತೊಳೆದು, ದುಡಿಮೆಯಲ್ಲಿ ಬಂದ ಹಣದಿಂದಲೇ ಬದುಕು ಸಾಗಿಸುವ ವೃದ್ಧೆಗೆ (old woman) ವ್ಯಕ್ತಿಯೊಬ್ಬ ಸಹಾಯ ಮಾಡಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈ ವ್ಯಕ್ತಿಯ ಒಳ್ಳೆತನವನ್ನು ಮೆಚ್ಚಿಕೊಂಡಿದ್ದಾರೆ.

ವೃದ್ಧ ಮಹಿಳೆಯ ಪಾಲಿಗೆ ದೇವರಾದ ವ್ಯಕ್ತಿ

ಹುಸೇನ್ ಮನ್ಸೂರಿ (Hussian Mansuri) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಅಜ್ಜಿಯೊಬ್ಬರು ಮುಂಬೈ ರಸ್ತೆಯಲ್ಲಿ ಧೂಳು ಹಿಡಿದು ನಿಂತಿರುವ ಕಾರನ್ನು ತೊಳೆಯುತ್ತಿರುವುದನ್ನು ಕಾಣಬಹುದು. ಕಷ್ಟ ಪಟ್ಟು ದುಡಿಯುವ ಅಜ್ಜಿಯನ್ನು ಗಮನಿಸಿದ ಹುಸೇನ್ ಮನ್ಸೂರಿ ಎಂಬುವವರು ತಮ್ಮ ಕಾರನ್ನು ಬೇಕಂತಲೇ ಗಲೀಜು ಮಾಡಿ ಅಜ್ಜಿಯ ಮುಂದೆ ನಿಲ್ಲಿಸಿ ಸ್ವಚ್ಛಗೊಳಿಸುವಂತೆ ಹೇಳಿದ್ದಾರೆ. ಈ ವೃದ್ಧ ಮಹಿಳೆ ಕಾರು ಸ್ವಚ್ಛಗೊಳಿಸುತ್ತಿದ್ದಂತೆ ಕೈಗೆ ಒಂದಿಷ್ಟು ಹಣ ವಿಟ್ಟು, ಉಡಲು ಸೀರೆ, ಮನೆಗೆ ಬೇಕಾದ ಅಗತ್ಯ ದಿನಸಿ ವಸ್ತುಗಳನ್ನು ನೀಡಿದ್ದಾರೆ. ಕೊನೆಗೆ ಆಕೆಯ ಕೈಗೆ ಮುತ್ತನ್ನಿಟ್ಟ ವ್ಯಕ್ತಿ ಮೊಗದಲ್ಲಿ ನಗು ಮೂಡಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: Video: ಯುವಕರು ನಾಚುವಂತೆ ಯೋಗ ಮಾಡಿದ 100 ರ ಹರೆಯದ ಅಜ್ಜಿ

ಈ ವಿಡಿಯೋ 4 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮಗೆ ಆರೋಗ್ಯ ಶಕ್ತಿ ಕೊಟ್ಟು ಭಗವಂತ ಕಾಪಾಡಲಿ ಎಂದಿದ್ದಾರೆ. ಇನ್ನೊಬ್ಬರು, ಬಿಗ್ ಬ್ರದರ್ಸ್ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮ ಒಳ್ಳೆತನಕ್ಕೆ ದೇವರು ಒಳ್ಳೆಯದು ಮಾಡುತ್ತಾನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us