
ಖಾಸಗಿ ಹಾಗೂ ಕಾರ್ಪೊರೇಟ್ (Corporate) ಜಗತ್ತೇ ಹಾಗೆ, ಕೈ ತುಂಬಾ ಸಂಬಳ ಸಿಕ್ಕಿದ್ರು ಒತ್ತಡ ಮಾತ್ರ ಹೆಚ್ಚೇ ಆಗುತ್ತದೆ ಹೊರತು ಕಡಿಮೆಯಾಗಲ್ಲ. ಕೆಲವೊಮ್ಮೆ 8 ಗಂಟೆ ಕೆಲಸದ ಸಮಯವಾಗಿದ್ರೂ ಹೆಚ್ಚುವರಿಯಾಗಿ ದುಡಿಸಿಕೊಳ್ಳುತ್ತಾರೆ. ಇಲ್ಲೊಬ್ಬರು ಉದ್ಯೋಗಿಯೂ ದಿನಕ್ಕೆ 8 ಗಂಟೆ ಬದಲು 14 ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ. ಇದು ಒಂದೆರಡು ದಿನವಲ್ಲ, ಸರಿಸುಮಾರು ಎರಡು ವರ್ಷಗಳ ಕಾಲ ಅಂದ್ರೆ ನೀವು ನಂಬಲೇಬೇಕು. ಆದರೆ ಈ ಉದ್ಯೋಗಿಗೆ ತಾನು ಮಾಡುವ ಕೆಲಸ ಕಂಪನಿದ್ದಲ್ಲ. ಅದು ಮ್ಯಾನೇಜರ್ ಪತಿಯ ಬ್ರ್ಯಾಂಡ್‌ಗೆ ಸಂಬಂಧಿಸಿದ್ದೆಂದು ತಿಳಿದು ಶಾಕ್ ಆಗಿದೆ. ತಮಗಾದ ಕಹಿ ಅನುಭವದ ಬಗ್ಗೆ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಈ ಪೋಸ್ಟ್ ಆನ್ಲೈನ್ ನಲ್ಲಿ ಚರ್ಚೆಗೆ ನಾಂದಿ ಹಾಡಿದೆ.
(r/ToxicWorkplace) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಉದ್ಯೋಗಿಯೊಬ್ಬರು ಹೆಚ್ಚುವರಿ ತಾನು ದುಡಿಸಿಕೊಂಡ ಕಹಿ ಅನುಭವ ಹಂಚಿಕೊಂಡಿದ್ದಾರೆ.
ಕೆಲಸಕ್ಕೆ ಸೇರಿದ ಒಂದೇ ತಿಂಗಳಲ್ಲೇ ಮ್ಯಾನೇಜರ್ ಹೆಚ್ಚುವರಿ ಕೆಲಸಗಳನ್ನು ನೀಡಲು ಶುರು ಮಾಡಿದ್ರು. ಪ್ರಾರಂಭದ ದಿನಗಳಲ್ಲಿ ಕಂಪನಿ ಕೆಲಸ ಎಂದು ಮಾಡುತ್ತಿದ್ದೆ. ದಿನ ಕಳೆಯುತ್ತಿದ್ದಂತೆ ಮ್ಯಾನೇಜರ್ ವೈಯುಕ್ತಿಕ ಕೆಲಸ ಎನ್ನುವುದು ಅರಿವಿಗೆ ಬಂದಿತು ಎಂದಿದ್ದಾರೆ.
working beyond working hours and recently discovered that overtime was for her personal brand lol how to ban her instagram account she scammed me
by
u/Ok_Fruit_9791 in
ToxicWorkplace
ಮ್ಯಾನೇಜರ್ ನೀಡುತ್ತಿದ್ದ ಹೆಚ್ಚುವರಿ ಕೆಲಸವನ್ನು 9 ಗಂಟೆವರೆಗೆ ಮಾಡಿದ್ರೂ ಸಾಲುತ್ತಿರಲಿಲ್ಲ. ಹೀಗಾಗಿ ಕೆಲಸ ಮುಗಿಸೋದು ರಾತ್ರಿ 10 -11 ಗಂಟೆಯೂ ಆಗುತ್ತಿತ್ತು. ಪ್ರಾರಂಭದಲ್ಲಿ ಹೊಸದಾಗಿ ಸೇರಿದ್ದ ಉದ್ಯೋಗಿಗಳಿಗೆ ಇದು ಸಾಮಾನ್ಯ ಎಂದೇ ಭಾವಿಸಿದ್ದೆ. ಆ ಬಳಿಕ ಕೆಲಸದ ಒತ್ತಡ ದುಪ್ಪಟ್ಟು ಆಯ್ತು. ದಿನಕ್ಕೆ ಸರಿಸುಮಾರು 14 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ. ನಂಗೆ ಯಾಕೆ ಹೆಚ್ಚುವರಿ ಕೆಲಸ ಎನ್ನುವುದು ಅರಿವಿಗೆ ಬರುವಾಗಲೇ ಸಮಯ ಮೀರಿತ್ತು ಎಂದು ಹೇಳಿದ್ದಾರೆ.
ಎರಡು ವರ್ಷಗಳ ಕಾಲ ಕೆಲಸ ಮಾಡಿದ್ರು ಕಂಪನಿಯಿಂದ ಕಳಪೆ ರೇಟಿಂಗ್, ಹೆಚ್ಚುವರಿ ಕೆಲಸಕ್ಕೆ ಸಂಬಳವೂ ಸಿಗಲಿಲ್ಲ. ಈ ಕೆಲಸ ಪೂರ್ಣಗೊಳಿಸದ
ಕಾರಣ ಕಳಪೆ ರೇಟಿಂಗ್ ನೀಡಲಾಗಿದೆ. ಮ್ಯಾನೇಜರ್‌ನ ಪತಿಯ ವೈಯಕ್ತಿಕ ಬ್ರ್ಯಾಂಡ್‌ಗೆ ಸಂಬಂಧಿಸಿದ್ದ ಕೆಲಸವನ್ನು ಎರಡು ವರ್ಷಗಳ ಕಾಲ ಸಂಬಳ ಪಡೆಯದೇ ಮಾಡಿದೆ. ಅಷ್ಟೇ ಅಲ್ಲದೇ, ನನ್ನ ಮ್ಯಾನೇಜರ್ ದಿನಕ್ಕೆ ನಲವತ್ತಕ್ಕೂ ಹೆಚ್ಚು ಕ್ರಿಯೇಟಿವ್‌ಗಳನ್ನು ಸಿದ್ಧಪಡಿಸುವಂತೆ ನನ್ನ ಮೇಲೆ ಒತ್ತಡ ಹಾಕಿದ್ರು. ನಂಗೆ ವೀಕ್ ಆಫ್ ಹಾಗೂ ರಜೆ ಕೊಡದೇ ಸತಾಯಿಸುತ್ತಿದ್ದರು. ರಜೆಯ ದಿನಗಳಲ್ಲಿ ನನ್ನನ್ನು ದುಡಿಸಿಕೊಳ್ಳುತ್ತಿದ್ದರು. ನನ್ನ ಮ್ಯಾನೇಜರ್‌ನ ಪತಿಯ ಬ್ರ್ಯಾಂಡ್‌ಗೆ ಸಂಬಂಧ ಪಟ್ಟ ಖಾತೆ ಇನ್‌ಸ್ಟಾಗ್ರಾಂನಲ್ಲಿದೆ. ನಾನು ಈಗ ಏನು ಮಾಡಬೇಕು. ಅವರ ಬ್ರಾಂಡ್ ಖಾತೆಯನ್ನು ಬ್ಯಾನ್ ಮಾಡಿಸಬೇಕೇ ಎಂದು ಕೇಳಿದ್ದಾರೆ.
ಇದನ್ನೂ ಓದಿ: ಆರೋಗ್ಯ ಸರಿಯಿಲ್ಲ, ವರ್ಕ್ ಫ್ರಮ್ ಹೋಮ್ ಮಾಡ್ತೇನೆ; ಉದ್ಯೋಗಿಯ ಮಾತಿಗೆ ಮ್ಯಾನೇಜರ್ ಏನಂದ್ರು ನೋಡಿ
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ಕೆಲಸಕ್ಕೆ ಮೊದ್ಲು ರಿಸೈನ್ ಕೊಡಿ ಎಂದಿದ್ದಾರೆ. ಇನ್ನೊಬ್ಬರು, ಮ್ಯಾನೇಜರ್ ನಿಮ್ಮನ್ನು ಬಳಸಿಕೊಂಡರು, ಇನ್ನಾದರೂ ಸ್ವಲ್ಪ ಹುಷಾರಾಗಿರಿ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು, ನಿಮ್ಮ ಬಳಿ ಸಾಕ್ಷಿಯಿದ್ದರೆ ನೀವು ಅವರ ವಿರುದ್ಧ ಹೆಚ್ ಆರ್ ಗೆ ದೂರು ನೀಡುವುದು ಉತ್ತಮ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:52 pm, Sun, 6 September 26