
ಮರಿಯಾನೆ (baby elephants) ತುಂಟಾಟ ಮಾಡುತ್ತಿದ್ರೆ ತಾಯಾನೆ ಗದರುವುದನ್ನು ನೀವು ನೋಡಿರುತ್ತೀರಿ. ತನ್ನ ಕಂದಮ್ಮ ಅಪಾಯದಲ್ಲಿದ್ದಾಗ ತಾಯಾನೆ ರಕ್ಷಣೆಗೆ ನಿಲ್ಲುತ್ತವೆ. ಇದೀಗ ಮರಿಯಾನೆಯೊಂದು ನದಿಯಲ್ಲಿ ನೀರು ಕುಡಿಯಲು ಹೋಗಿ ಬಿದ್ದಿದೆ. ಅಲ್ಲೇ ಇದ್ದ ತಾಯಾನೆಯೂ ತನ್ನ ಕಂದನನ್ನು ಮೆಲ್ಲನೆ ಮೇಲೆತ್ತಿ ರಕ್ಷಿಸಿದೆ. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ದೃಶ್ಯವನ್ನು ಕಣ್ತುಂಬಿಸಿಕೊಂಡಿದ್ದಾರೆ.
ವೈಲ್ಡ್ ಲೈಫ್ ಡಾಕ್ಯುಮೆಂಟರಿ (wildlifedocumentary) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮರಿಯಾನೆ ನದಿ ನೀರನ್ನು ಕುಡಿಯಲು ಪ್ರಯತ್ನಿಸುತ್ತಿದೆ. ಇದೇ ವೇಳೆ ನದಿಗೆ ಜಾರಿ ಬಿದ್ದಿದೆ. ತಾಯಾನೆಯು ನದಿಗೆ ಬಿದ್ದ ಕಂದಮ್ಮನನ್ನು ಸೊಂಡಿಲಿನಿಂದ ನಿಧಾನವಾಗಿ ಮೇಲೆತ್ತುವ ದೃಶ್ಯವನ್ನು ನೀವು ನೋಡಬಹುದು.
ಇದನ್ನೂ ಓದಿ: ಸಣ್ಣ ಕೋಲಿನಿಂದ ಮೈ ಕೆರೆದುಕೊಂಡ ಮರಿಯಾನೆ, ವೈರಲ್ ಆಯ್ತು ದೃಶ್ಯ
ಈ ವಿಡಿಯೋ ಎಂಟು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅದ್ಭುತ ವಿಡಿಯೋ ಎಂದರೆ, ಮತ್ತೊಬ್ಬರು, ತಾಯಿಯ ಕಾಳಜಿಗೆ ಇದುವೇ ಸಾಕ್ಷಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ತಾಯಿ ಅಂದ್ರೆ ಹೀಗೆ ಅಲ್ಲವೇ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:36 am, Mon, 24 August 26