
ತಾಯಿ ಪ್ರೀತಿಯೇ ಹಾಗೆ, ಅದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಇದೀಗ ತಾಯಾನೆಯೊಂದು (mother elephant) ತನ್ನ ಕಂದಮ್ಮನ ಮೇಲೆ ತೋರಿದ ಪ್ರೀತಿ ಇಂಟರ್ನೆಟ್‌ನಲ್ಲಿ ಎಲ್ಲರ ಗಮನ ಸೆಳೆದಿದೆ. ತಾಯಾನೆ ಸೊಂಡಿಲಿನಲ್ಲಿ ನೀರು ಕುಡಿಯುವುದು ಹೇಗೆಂದು ಮರಿಯಾನೆಗೆ ಕಲಿಸಿಕೊಟ್ಟಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೀವಾಯ್ಸ್‌ಆಫ್‌ಭಾರತ್.ಇನ್ (mevoiceofbharat.in) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಾಯಿ – ಕಂದಮ್ಮನ ಬಾಂಧವ್ಯ ಸಾರುವ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ತಾಯಾನೆಯೊಂದು ಬಕೆಟ್ ನಲ್ಲಿಟ್ಟ ನೀರು ಕುಡಿಯುತ್ತಿದೆ. ಮರಿಯಾನೆಯು ತನ್ನ ಅಮ್ಮನ ಬಳಿಗೆ ಬಂದು ನೀರು ಬೇಕು ಎನ್ನುವಂತೆ ಸನ್ನೆ ಮಾಡಿದೆ. ಇದನ್ನರಿತ ತಾಯಾನೆ ತನ್ನ ಕಂದಮ್ಮನಿಗೆ ಸೊಂಡಿಲಿನಿಂದ ನೀರು ಹೇಗೆ ಕುಡಿಯಬೇಕೆಂದು ಕಲಿಸಿ ಕೊಟ್ಟಿದೆ. ತದನಂತರದಲ್ಲಿ ಮರಿಯಾನೆ ತನ್ನ ಪುಟಾಣಿ ಸೊಂಡಿಲಿನಿಂದ ನೀರು ಕುಡಿಯುವುದನ್ನು ನೋಡಬಹುದು.
ಇದನ್ನೂ ಓದಿ: ಮರದ ಕಡ್ಡಿ ಬಳಸಿ ಕಿವಿ ಸ್ವಚ್ಛಗೊಳಿಸಿದ ಗಜರಾಜ
ಈ ವಿಡಿಯೋ ಇದುವರೆಗೆ ಮೂವತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತುಂಬಾ ಮುದ್ದಾಗಿದೆ ಎಂದಿದ್ದಾರೆ. ಇನ್ನೊಬ್ಬರು, ತಾಯಿ ಪ್ರೀತಿಗೆ ಬೇರೆ ಹೋಲಿಕೆ ಇಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಮೂಕ ಪ್ರಾಣಿಗಳ ಕಾಳಜಿ ನೋಡಿ ಕಣ್ಣಲ್ಲಿ ನೀರು ಬಂತು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ