Viral video: ಕಾರಿನ ಇಂಜಿನ್ ಕಂಪಾರ್ಟ್ಮೆಂಟ್​​​ನಲ್ಲಿ ಸಿಲುಕಿಕೊಂಡ ಪುಟ್ಟ ನಾಯಿ, 30 ಮೈಲಿ ದೂರ ಕಾರ್ ಪ್ರಯಾಣಿಸಿದರು ಬದುಕುಳಿದ ಶ್ವಾನ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 24, 2023 | 4:54 PM

ಕಾರ್ ಇಂಜಿನ್ ಒಳಗೆ ಸಿಕ್ಕಿ ಹಾಕಿಕೊಂಡ್ಡಿದ ನಾಯಿ ಮರಿಯನ್ನು ಸುರಕ್ಷಿತವಾಗಿ ಕಾರ್ ಇಂಜಿನ್ ಕಂಪಾರ್ಟ್ಮೆಂಟ್​​​ನಿಂದ ಹೊರತೆಗೆಯಲಾಯಿತು. ಈ ವಿಡಿಯೋವನ್ನು ಕ್ಯಾರಿ ಲಿಪರ್ಟ್ ಗಿಲ್ಲಾಸ್ಪಿ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Viral video: ಕಾರಿನ ಇಂಜಿನ್ ಕಂಪಾರ್ಟ್ಮೆಂಟ್​​​ನಲ್ಲಿ ಸಿಲುಕಿಕೊಂಡ ಪುಟ್ಟ ನಾಯಿ, 30 ಮೈಲಿ ದೂರ ಕಾರ್ ಪ್ರಯಾಣಿಸಿದರು ಬದುಕುಳಿದ ಶ್ವಾನ
ಕಾರಿನ ಇಂಜಿನ್ ಕಂಪಾರ್ಟ್ಮೆಂಟ್​​​ ಒಳಗೆ ಸಿಲುಕಿಕೊಂಡ ಪುಟ್ಟ ನಾಯಿ
Follow us on

ನಾಯಿ ಮರಿಗಳು ಹಾಗೂ ಬೆಕ್ಕಿನ ಮರಿಗಳು ಆಟವಾಡುತ್ತಾ ತರ್ಲೆ ಮಾಡುತ್ತಾ ಇರುತ್ತವೆ. ಆಟವಾಡುತ್ತಾ ಎಲ್ಲೆಲ್ಲೋ ಅವಿತುಕೊಳ್ಳುತ್ತವೆ. ಆದರೆ ಅದು ಅಪಾಯದ ಸ್ಥಳವೇ ಎಂಬ ಬಗ್ಗೆ ಆ ಮುಗ್ಧ ಜೀವಿಗಳಿಗೆ ಅರಿವಿರುವುದಿಲ್ಲ. ಇದೇ ರೀತಿ ನಾಯಿ ಮರಿಯೊಂದು ಕಾರಿನ ಇಂಜಿನ್ ಕಂಪಾರ್ಟ್ಮೆಂಟ್ ಒಳಗೆ ಸಿಳುಕಿ ಪಜೀತಿಗೆ ಒಳಗಾಗಿದೆ. ಅದೃಷ್ಟವಶಾತ್ ಆ ನಾಯಿ ಮರಿಯನ್ನು ಸಂರಕ್ಷಿಸಲಾಗಿದೆ. ಅಮೇರಿಕಾದಲ್ಲಿ ನಡೆದ ಘಟನೆ ಇದಾಗಿದ್ದು, ಕಾರೊಂದರ ಇಂಜಿನ್ ಕಂಪಾಂರ್ಟ್ಮೆಂಟ್​​​ನಲ್ಲಿ ಸಿಲುಕಿಕೊಂಡಿದ್ದ ನಾಯಿಯೊಂದು 30 ಮೈಲಿ ದೂರದವರಿಗಿನ ಕಾರ್​ ಪ್ರಯಾಣದಲ್ಲಿ ಪವಾಡ ಸದೃಶವಾಗಿ ಬದುಕುಳಿದಿದೆ. ನಾಯಿಯೊಂದು ಕಾರಿನ ಇಂಜಿನ್ ಮೇಲೆ ಏರಿ, ಅಲ್ಲಿಯೇ ಸಿಕ್ಕಿಹಾಕಿಕೊಂಡಿತು. ಆದರೆ ಈ ವಿಷಯ ಕಾರ್ ಚಾಲಕನ ಅರಿವಿಗೆ ಬರಲಿಲ್ಲ. ಆತ ಅದೇ ಕಾರಿನಲ್ಲಿ ಅಮೆರಿಕಾದ ಕನ್ಸಾಸ್ ನಿಂದ ಮಿಸೌರಿಗೆ 30 ಮೈಲಿ ಪ್ರಯಾಣಿಸಿದ್ದನು. ಆದರೂ ನಾಯಿಯ ಪ್ರಾಣಕ್ಕೆ ಯಾವುದೇ ರೀತಿಯ ಕುತ್ತು ಬರಲಿಲ್ಲ.

ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಕನ್ಸಾಸ್ ಸಿಟಿ ರಾಯಲ್ಸ್​​​ನ ಹೋಸ್ಟ್ ಮತ್ತು ಡಿಜಿಟಲ್ ವರದಿಗಾರ ಕ್ಯಾರಿ ಗಿಲ್ಲಾಸ್ಪಿ ಅವರು ಇಂಜಿನ್​​​ನಲ್ಲಿ ಸಿಲುಕಿಕೊಂಡಿದ್ದ ನಾಯಿಯನ್ನು ಗುರುತಿಸಿದ್ದಾರೆ. ಅವರು ಗುರುವಾರದ ದಿನ ಕೌಫ್ ಮನ್ ಸ್ಡೇಡಿಯಂನ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ವಾಹನವೊಂದರಿಂದ ಪಿಸುಗುಡುವ ಧ್ವನಿಯೊಂದು ಕೇಳಿ ಬಂದಿದೆ. ನಂತರ ಕಾರ್ ಮಾಲೀಕರಾದ ಆಶ್ಲೇ ನ್ಯೂಮನ್ ಅವರನ್ನು ಪಾರ್ಕಿಂಗ್ ಸ್ಥಳಕ್ಕೆ ಕರೆಸಲಾಯಿತು.

ಇದನ್ನೂ ಓದಿ:ರಾಷ್ಟ್ರಧ್ವಜ ಬಳಸಿ ಚಿಕನ್ ಕ್ಲೀನ್ ಮಾಡುತ್ತಿರುವ ವಿಡಿಯೊ ವೈರಲ್; ಸಿಲ್ವಾಸ್ಸಾದ ವ್ಯಕ್ತಿಯ ಬಂಧನ

ಆ ಕಾರ್ ಇಂಜಿನ್​​​ನಲ್ಲಿ ಪುಟ್ಟ ನಾಯಿ ಸಿಲುಕಿಕೊಂಡಿರುವುದು ಅವರ ಅರಿವೆ ಬರುತ್ತದೆ. ಆ ನಾಯಿಯನ್ನು ಸುರಕ್ಷಿತವಾಗಿ ಹೊರ ತೆಗೆಯಲು ಮೆಕ್ಯಾನಿಕ್ ಒಬ್ಬರನ್ನು ಕರೆಸಲಾಯಿತು. ರಾಯಲ್ಸ್ ಲೀಡ್ ಮೆಕ್ಯಾನಿಕಲ್ ತಂತ್ರಜ್ಞ ಡೆನ್ನಿಸ್ ಮಿಲ್ಲರ್ ನಡೆಸಿದ ರಕ್ಷಣಾ ಕಾರ್ಯಚರಣೆಯ ನಂತರ ಪುಟ್ಟ ನಾಯಿಯನ್ನು ಸುರಕ್ಷಿತವಾಗಿ ಕಾರ್ ಇಂಜಿನ್ ಕಂಪಾರ್ಟ್ಮೆಂಟ್ ನಿಂದ ಹೊರತೆಗೆಯಲಾಯಿತು. ಈ ವೈರಲ್ ವಿಡಿಯೋವನ್ನು ಕ್ಯಾರಿ ಲಿಪರ್ಟ್ ಗಿಲ್ಲಾಸ್ಪಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ಮಾಡಿ

Published On - 4:54 pm, Mon, 24 April 23