Heart Wrenching Video: ಸಾಕು ನಾಯಿಯನ್ನು ರಸ್ತೆಯಲ್ಲೇ ಬಿಟ್ಟು ಓಡಿಹೋದ ಮಹಿಳೆ
ಸಾಕುಪ್ರಾಣಿಗಳು ನಮಗೆ ಜೀವಕ್ಕಿಂತ ಹೆಚ್ಚು. ಆದರೆ ಇಲ್ಲೊಬ್ಬ ಮಹಿಳೆ ತಾನು ಸಾಕಿದ ನಾಯಿಯನ್ನು ಬಿಟ್ಟು ಓಡಿಹೋಗುವ ವಿದ್ರಾವಕ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ.
ವಾಸ್ತವವದಲ್ಲಿ ನಮಗೆ, ನಮ್ಮ ಸಾಕುಪ್ರಾಣಿಗಳು ಎಂದರೆ ಕುಟುಂಬದ ಅವಿಭಾಜ್ಯ ಅಂಗವಿದ್ದಂತೆ ನಾವು ಅವುಗಳನ್ನು ನಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತೇವೆ. ಅವುಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಆದರೆ ಇಲ್ಲೊಬ್ಬ ಮಹಿಳೆ ತಾನು ಸಾಕಿದ ನಾಯಿಯನ್ನು ಬಿಟ್ಟು ಓಡಿಹೋಗುವ ವಿದ್ರಾವಕ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ. ಅಸಹಾಯಕ ಪ್ರಾಣಿ ಅವಳನ್ನು ಹಿಂಬಾಲಿಸಲು ಪ್ರಯತ್ನಿಸುತ್ತದೆ ಆದರೆ ಪ್ರಯತ್ನಕ್ಕೆ ಯಾವುದೇ ಪ್ರತಿಫಲ ದೊರೆಯುವುದಿಲ್ಲ.
The saddest video in the world???? … people are the most disgusting things on this planet? pic.twitter.com/D23wer46O8
— Interesting Channel (@ChannelInteres) April 22, 2023
ಈ ವೀಡಿಯೊಗೆ ಬಗ್ಗೆ ಹಲವಾರು ರೀತಿಯಲ್ಲಿ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕ ಪ್ರಶ್ನೆ, ಅನುಮಾನಗಳಿಗೆ ಕಾರಣವಾಗಿದೆ. ಜನರು ತಮ್ಮ ಸಾಕುಪ್ರಾಣಿಗಳನ್ನು ನೋಡಿಕೊಳ್ಳಲು ಸಾಧ್ಯವಾಗದಿದ್ದರೆ, ಈಗ ಪ್ರಾಣಿಗಳನ್ನು ನೋಡಿಕೊಳ್ಳುವ ಏಜೆನ್ಸಿಗಳಿಗೆ ಕೊಡಬಹುದಿತ್ತು ಅದರ ಬದಲು ದಾರಿ ಮೇಲೆ ಬಿಟ್ಟು ಹೋಗುವುದು ಎಷ್ಟು ಸರಿ ಎಂಬಂತೆ ಹಲವಾರು ರೀತಿಯ ಹಲವಾರು ಪ್ರಶ್ನೆಗೆ ಗ್ರಾಸವಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ಮಾಡಿ
Published On - 1:02 pm, Mon, 24 April 23