AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಚಿರತೆಯಿಂದ ತಮ್ಮ ಮರಿಗಳನ್ನು ರಕ್ಷಿಸಲು ಭದ್ರಕೋಟೆ ನಿರ್ಮಿಸಿದ ಮುಳ್ಳುಹಂದಿಗಳು

ಕೇವಲ ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಕೂಡ ತಮ್ಮ ಮರಿಗಳನ್ನು ರಕ್ಷಣೆ ಮಾಡಲು ಯಾವ ಹಂತಕ್ಕಾದರೂ ತಲುಪುತ್ತವೆ, ತಮ್ಮ ಪ್ರಾಣವನ್ನು ಬಲಿಕೊಟ್ಟಾದರೂ ಮರಿಗಳನ್ನು ರಕ್ಷಿಸುತ್ತವೆ.

Viral Video: ಚಿರತೆಯಿಂದ ತಮ್ಮ ಮರಿಗಳನ್ನು ರಕ್ಷಿಸಲು ಭದ್ರಕೋಟೆ ನಿರ್ಮಿಸಿದ ಮುಳ್ಳುಹಂದಿಗಳು
ಚಿರತೆ ದಾಳಿ
ನಯನಾ ರಾಜೀವ್
|

Updated on: Apr 23, 2023 | 10:37 AM

Share

ಕೇವಲ ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಕೂಡ ತಮ್ಮ ಮರಿಗಳನ್ನು ರಕ್ಷಣೆ ಮಾಡಲು ಯಾವ ಹಂತಕ್ಕಾದರೂ ತಲುಪುತ್ತವೆ, ತಮ್ಮ ಪ್ರಾಣವನ್ನು ಬಲಿಕೊಟ್ಟಾದರೂ ಮರಿಗಳನ್ನು ರಕ್ಷಿಸುತ್ತವೆ. ಅಂಥದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿದೆ. ಚಿರತೆ ಹಾಗೂ ಮುಳ್ಳುಹಂದಿಗಳ ಕುಟುಂಬದ ನಡುವಿನ ಹೋರಾಟ ಎಲ್ಲರಿಗೂ ಸ್ಫೂರ್ತಿ ನೀಡುವಂತಿದೆ.

ಐಎಎಸ್​ ಅಧಿಕಾರಿ ಸುಪ್ರಿಯಾ ಸಾಹು ಎಂಬುವವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಎರಡು ಮುಳ್ಳುಹಂದಿಗಳು ತಮ್ಮ ಮರಿಗಳೊಂದಿಗೆ ರಸ್ತೆಯಲ್ಲಿ ಕಾಣಿಸಿಕೊಂಡಿವೆ.

ಸ್ವಲ್ಪ ಸಮಯದ ಬಳಿಕ ಚಿರತೆಗಳು ಅವುಗಳ ಬಳಿಗೆ ಬಂದು ಮರಿಗಳನ್ನು ಹಿಡಿಯಲು ಪ್ರಯತ್ನ ಪಟ್ಟಿದೆ. ಮುಳ್ಳುಹಂದಿಗಳು ತಮ್ಮ ಮರಿಗಳನ್ನು ಚಿರತೆಯಿಂದ ರಕ್ಷಿಸಲು ಗುರಾಣಿ ಹಿಡಿದು ಹೋರಾಡುವಂತೆ ಸ್ವಯಂ ಬೇಲಿ ರೂಪಿಸಿ, ಕೊನೆಗೂ ಮರಿಗಳನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.

ಮತ್ತಷ್ಟು ಓದಿ: Blind Snake: ಇದು ಎರೆಹುಳುವಲ್ಲ ಹಾವು, ಈ ಬ್ಲೈಂಡ್ ಸ್ನೇಕ್ ಎಷ್ಟು ಅಪಾಯಕಾರಿ?

ಚಿರತೆಯು ಮುಳ್ಳುಹಂದಿ ಮರಿಗಳನ್ನು ಮುಟ್ಟುವ ಎಲ್ಲಾ ಪ್ರಯತ್ನಗಳು ವಿಫಲವಾಗಿತ್ತು, ಲಕ್ಷಾಂತರ ಮಂದಿ ಈ ವಿಡಿಯೋ ವೀಕ್ಷಿಸಿದ್ದು, ಮರಿಗಳನ್ನು ಉಳಿಸಿಕೊಳ್ಳಲು ಮುಳ್ಳುಹಂದಿಗಳ ಹೋರಾಟವನ್ನು ನೆಟ್ಟಿಗರು ಶ್ಲಾಘಿಷಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ