AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Alligator Gar: ಭೋಪಾಲ್ ಅಲ್ಲಿ ಸಿಕ್ಕ ಮೊಸಳೆಯಂತೆ ಕಾಣುವ ಭಯಾನಕ ಮೀನು; ತಬ್ಬಿಬ್ಬಾದ ಅರಣ್ಯ ಇಲಾಖೆ ಅಧಿಕಾರಿಗಳು!

ನಾರ್ತ್ ಅಮೆರಿಕಾದ ಅತ್ಯಂತ ಅಪರೂಪದ ಅಲಿಗೇಟರ್ ಗಾರ್ ಮೀನನ್ನು ಭೋಪಾಲ್ ಅಲ್ಲಿ ಕಂಡು ತಜ್ಞರು ಗೊಂದಲಕ್ಕೀಡಾಗಿದ್ದಾರೆ. ವಿಶಿಷ್ಟವಾದ ಅಲಿಗೇಟರ್ ತರಹದ ಮೂತಿ ಮತ್ತು ಚೂಪಾದ ಹಲ್ಲುಗಳನ್ನು ಹೊಂದಿರುವ ಮೀನು ಉತ್ತರ ಅಮೆರಿಕಾದ ಸ್ಥಳೀಯ ಸಿಹಿನೀರಿನ ಪರಭಕ್ಷಕ ತಳಿಯಾಗಿದೆ. ಅಲಿಗೇಟರ್ ಗಾರ್ ಅನ್ನು ಹಿಡಿದ ಅನಸ್ ಖಾನ್ ಆರಂಭದಲ್ಲಿ ಅದನ್ನು ಮೊಸಳೆ ಎಂದು ತಪ್ಪಾಗಿ ಭಾವಿಸಿದ್ದರು.

Alligator Gar: ಭೋಪಾಲ್ ಅಲ್ಲಿ ಸಿಕ್ಕ ಮೊಸಳೆಯಂತೆ ಕಾಣುವ ಭಯಾನಕ ಮೀನು; ತಬ್ಬಿಬ್ಬಾದ ಅರಣ್ಯ ಇಲಾಖೆ ಅಧಿಕಾರಿಗಳು!
ಭೋಪಾಲ್‌ನಲ್ಲಿ ಅಲಿಗೇಟರ್ ಗಾರ್Image Credit source: AdityaBidwai
ನಯನಾ ಎಸ್​ಪಿ
|

Updated on:Apr 22, 2023 | 1:21 PM

Share

ಮೊಸಳೆಯಂತ (Alligator) ಚೂಪಾದ ಹಲ್ಲುಗಳನ್ನು ಒಳಗೊಂಡಿರುವ ಭಯಾನಕ ಮೀನನ್ನು (Fish) ನೀವು ಎಂದಾದರೂ ನೋಡಿದ್ದೀರಾ? ಇಂತಹ ಭಯಾನಕ ಮೀನು ಮದ್ಯ ಪ್ರದೇಶದ ಭೋಪಾಲ್ (Bhopal) ಅಲ್ಲಿ ಅಸಾನ್ ಖಾನ್ ಎಂಬುವವರಿಗೆ ಆಕಸ್ಮಿಕವಾಗಿ ಸಿಕ್ಕಿದೆ. ಇದು ಯಾವ ತರಹದ ಮೀನು ಎಂದು ತಿಳಿಯದ ಅವರು ಈ ಭಯಾನಕ ಮೀನಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಈ ಚಿತ್ರವನ್ನು ನೋಡಿದ ಭೋಪಾಲ್ ಅರಣ್ಯ ಇಲಾಖೆಯ ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ.

ಉತ್ತರ ಅಮೆರಿಕ ಮೂಲದ ಪರಭಕ್ಷಕ ತಳಿಯಾದ ಅಪರೂಪದ ಅಲಿಗೇಟರ್ ಗಾರ್ ಮೀನು, ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ಹೇಗೆ ಸಿಕ್ಕಿಬಿತ್ತು ಎಂಬ ನಿಗೂಢತೆ ತಜ್ಞರನ್ನು ಕಾಡಿದೆ. ನಗರದ ಖಾನುಗಾಂವ್ ಪ್ರದೇಶದ ಮೇಲಿನ ಸರೋವರದಲ್ಲಿ ಆಕಸ್ಮಿಕವಾಗಿ ಅನಸ್ ಖಾನ್ ಎಂಬುವವರು ಈ ಅಪರೂಪದ ಮೇದನ್ನು ಹಿಡಿದ್ದಿದ್ದಾರೆ. ಆರಂಭದಲ್ಲಿ ಈ ಮೀನನ್ನು ನೋಡಿ ಮೊಸಳೆ ಎಂದು ತಪ್ಪಾಗಿ ಭಾವಿಸಿದ್ದನ್ನು ತಮ್ಮ ಟ್ವಿಟ್ಟರ್ ಅಲ್ಲಿ ಹಂಚಿಕೊಂಡಿದ್ದಾರೆ.

“ನನ್ನ ಫಿಶಿಂಗ್ ಗೇರ್‌ನಲ್ಲಿ ಮೀನು ಸಿಲುಕಿಕೊಂಡಾಗ, ಅದು ಮೊಸಳೆ ಎಂದು ನಾನು ಭಾವಿಸಿದೆ ಆದರೆ ಹತ್ತಿರದಿಂದ ಪರಿಶೀಲಿಸಿದಾಗ, ಕ್ಯಾಚ್ ಅಲಿಗೇಟರ್ ಅಥವಾ ಘಾರಿಯಲ್‌ನಂತೆ ಕಾಣುತ್ತದೆ” ಎಂದು ಅನಸ್ ಹೇಳಿದರು.

ಅಲಿಗೇಟರ್ ಗಾರ್ (ಅಟ್ರಾಕ್ಟೋಸ್ಟಿಯಸ್ ಸ್ಪಾಟುಲಾ) ಉತ್ತರ ಅಮೆರಿಕಾದ ಸಿಹಿನೀರಿನ ಮೀನಾಗಿದ್ದು, ಬ್ರಿಟಾನಿಕಾ ಪ್ರಕಾರ, ಅಲಿಗೇಟರ್ ತರಹದ ಮೂತಿ ಮತ್ತು ರೇಜರ್-ಚೂಪಾದ ಹಲ್ಲುಗಳನ್ನು ಹೊಂದಿದೆ. ಇದು ದಕ್ಷಿಣ ಯುನೈಟೆಡ್ ಸ್ಟೇಟ್ಸ್‌ನ ನದಿಗಳು, ಸರೋವರಗಳಲ್ಲಿ ಕಾಣಲು ಸಿಗುತ್ತದೆ, ಮುಖ್ಯವಾಗಿ ಮಿಸ್ಸಿಸ್ಸಿಪ್ಪಿ ನದಿ ಜಲಾನಯನ ಪ್ರದೇಶದಲ್ಲಿ – ಸ್ವಾಭಾವಿಕವಾಗಿ ಸಂಭವಿಸುವ ಈ ಮೀನಿಗೂ ಭೋಪಾಲ್​ಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಟೈಮ್ಸ್ ನೌ ವರದಿ ಮಾಡಿದೆ.

ಅನಾಸ್ ಮನೆಗೆ ಕೊಂಡೊಯ್ದ 1.5 ಅಡಿ ಉದ್ದದ ಮೀನಿನ ವೈರಲ್ ಚಿತ್ರಗಳು ಆನ್‌ಲೈನ್‌ನಲ್ಲಿ ಕುತೂಹಲವನ್ನು ಹುಟ್ಟುಹಾಕಿತು. ಇದು ಅರಣ್ಯ ಅಧಿಕಾರಿಗಳ ಕುತೂಹಲಕ್ಕೂ ಕಾರಣವಾಯಿತು. ಈ ಮೀನಿನ ವಿಡಿಯೋವನ್ನು ರಿಪೋರ್ಟ್ 1 ಭರತ್ ಇಂಗ್ಲಿಷ್ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಉತ್ತರ ಅಮೆರಿಕಾದ ಮೀನು ಭೋಪಾಲ್​ಗೆ ಬಂದದ್ದು ಹೇಗೆ?

“ಭೋಪಾಲ್‌ನಲ್ಲಿನ ಸಿಹಿನೀರಿನ ಕೊಳಕ್ಕೆ ಈ ಮೀನು ಪ್ರಭೇದಗಳು ಹೇಗೆ ಬಂದವು ಎಂದು ಮೀನುಗಾರಿಕೆ ತಜ್ಞ ಶಾರಿಕ್ ಶೇಖ್ ಈ ಟಿವಿಗೆ ತಿಳಿಸಿದರು. “ಮೀನಿನ ಮೊಟ್ಟೆಗಳನ್ನು ಕೋಲ್ಕತ್ತಾ ಮತ್ತು ಆಂಧ್ರಪ್ರದೇಶ ಮಾರುಕಟ್ಟೆಗಳಿಂದ ಭೋಪಾಲ್‌ಗೆ ತರಲಾಗುತ್ತದೆ. ಹಾಗಾಗಿ ಈ ಮೀನಿನ ಮೊಟ್ಟೆಗಳಲ್ಲಿ ಅಲಿಗೇಟರ್ ಗಾರ್ ಮೊಟ್ಟೆಗಳು ಸಹ ಮಿಶ್ರಣವಾಗಿರಬಹುದು” ಎಂಬ ವಿವರಣೆಯನ್ನು ತಜ್ಞರು ನೀಡಿದ್ದಾರೆ.

ಇದು ಒಂದು ಅಪರೂಪದ ಘಟನೆಯಾಗಿರಬಹುದು, ಆದರೆ ಇಂತಹ ಘಟನೆ ಇದೆ ಮೊದಲಲ್ಲ. ಜನವರಿ 2016 ರಲ್ಲಿ, ಇಂದೋರ್‌ನಲ್ಲಿ ಮೀನುಗಾರರು ಪಿರಾನ್ಹಾವನ್ನು ಹಿಡಿದ್ದಿದ್ದರು, ಇದು ಕೋಲ್ಕತ್ತಾದಿಂದ ಬಂದಿದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮಗು ಅಳುತ್ತಿರುವುದಕ್ಕೆ ವಿಮಾನದಲ್ಲಿನ ಪ್ರಯಾಣಿಕ ಸಿಡಿಮಿಡಿ; ಕೋಪಗೊಂಡು ವ್ಯಕ್ತಿ ಮಾಡಿದ್ದೇನು ಗೊತ್ತಾ?

ನಗರದ ಜಲಮೂಲಗಳಲ್ಲಿ ವಾಸಿಸುವ “ಸರ್ವಭಕ್ಷಕ” ಮೀನಿನ ಮೊದಲ ದಾಖಲಿತ ಪ್ರಕರಣವಾಗಿತ್ತು. ಈ ಆಕ್ರಮಣಕಾರಿ ಪ್ರಭೇದಗಳು ಸ್ಥಳೀಯ ಪರಿಸರ ವ್ಯವಸ್ಥೆಯನ್ನು ಅಡ್ಡಿಪಡಿಸಬಹುದೆಂಬ ಆತಂಕದಿಂದ ಆ ಪಿರಾನ್ಹಾವನ್ನು ಬಿಜಾಸನ್ ಸರೋವರದಿಂದ ಬಂಗಾರ್ದ ಸರೋವರಕ್ಕೆ ಸ್ಥಳಾಂತರಿಸಲಾಯಿತು. ಆದರೆ ನಂತರ ಆ ಮೀನು ಅಲ್ಲಿ ಮೃತಪಟ್ಟಿತು.

ತಜ್ಞರು ಇದೇ ರೀತಿಯ ಭಯವನ್ನು ಹೊಂದಿದ್ದಾರೆ, ಭೋಪಾಲ್ ಅಲ್ಲಿಅಲಿಗೇಟರ್ ಗಾರ್ ಸಮೃದ್ಧಿ ಸಂಭವನೀಯ ಎಂದ ಹೇಳಲಾಗಿದೆ.

Published On - 1:14 pm, Sat, 22 April 23

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ