ಬಾತು ಕೋಳಿ ಮಾಲೀಕನಿಂದ ತನ್ನ ಕಾಲುಗಳನ್ನು ಹೇಗೆ ಮಸಾಜ್ ಮಾಡಿಸಿಕೊಳ್ಳುತ್ತಿದೆ ನೋಡಿ
ಬಾತುಕೋಳಿಯೊಂದು ತನ್ನ ಮಾಲೀಕನಿಂದ ತನ್ನ ಪಾದಗಳನ್ನು ಮಸಾಜ್ ಮಾಡಿಸಿಕೊಳ್ಳುತ್ತಾ ಹಾಯಾಗಿ ವಿಶ್ರಾಂತಿ ಪಡೆದುಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇತ್ತೀಚಿನ ದಿನಗಳಲ್ಲಿ ಮನುಷ್ಯರಿಗಿಂತ ಹೆಚ್ಚಾಗಿ ಪ್ರಾಣಿಗಳೇ ಸೋಶಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಪ್ರಾಣಿಗಳ ತುಂಟಾತನ ಹೀಗೆ ಸಾಕಷ್ಟು ವಿಡಿಯೋಗಳು ಮುಖದಲ್ಲೊಂದು ನಗು ಮೂಡಿಸುತ್ತವೆ. ಇದೀಗಾ ಬಾತುಕೋಳಿಯೊಂದು ತನ್ನ ಮಾಲೀಕನಿಂದ ತನ್ನ ಪಾದಗಳನ್ನು ಮಸಾಜ್ ಮಾಡಿಸಿಕೊಳ್ಳುತ್ತಾ ಹಾಯಾಗಿ ವಿಶ್ರಾಂತಿ ಪಡೆದುಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಪ್ರಾಣಿಗಳು ವರ್ತನೆಗಳನ್ನು ಪ್ರದರ್ಶಿಸುವ ವೀಡಿಯೊಗಳಿಗೆ ಆನ್‌ಲೈನ್‌ನಲ್ಲಿ ಕೊರತೆಯಿಲ್ಲ, ಅದು ನಮ್ಮನ್ನು ಹುರಿದುಂಬಿಸುತ್ತದೆ. ಚುಂಬನಗಳಿಂದ ಹಿಡಿದು ಮುದ್ದಾಡುವಿಕೆಯಿಂದ ಅಪ್ಪುಗೆಯವರೆಗೂ, ಪ್ರಾಣಿಗಳು ನಮಗೆ ವಿಶೇಷವಾದ ಭಾವನೆಯನ್ನು ನೀಡುತ್ತವೆ . ಇದೀಗಾ ಅಂತಹದೊಂದು ಬಾತುಕೋಳಿಯ ವಿಡಿಯೋ ಅಂತರ್ಜಾಲದ ಗಮನ ಸೆಳೆದಿದೆ. ಬಾತುಕೋಳಿ ತನ್ನ ಮಾಲೀಕನಿಂದ ಕಾಲು ಮಸಾಜ್ ಮಾಡಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
Ducky gets a foot massage pic.twitter.com/raW3I6zBH8
— Nature is Amazing ☘️ (@AMAZlNGNATURE) April 22, 2023
ಇದನ್ನೂ ಓದಿ: ಚಿರತೆಯಿಂದ ತಮ್ಮ ಮರಿಗಳನ್ನು ರಕ್ಷಿಸಲು ಭದ್ರಕೋಟೆ ನಿರ್ಮಿಸಿದ ಮುಳ್ಳುಹಂದಿಗಳು
@AMAZlNGNATURE ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಏ.22ರಂದು ಪೋಸ್ಟ್ ಮಾಡಲಾಗಿದ್ದು, ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ 1.7 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಈ ವಿಡಿಯೋವನ್ನು ವೀಕ್ಷಿಸಿದ ಟ್ವಿಟರ್ ಬಳಕೆದಾರರು ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ನಾನು ಮಲಗಿದ್ದಾಗ, ನನ್ನ ತಾಯಿ ತನಗೆ ಇದೇ ರೀತಿ ಮಸಾಜ್ ಮಾಡುತ್ತಿದ್ದರು. ಈ ವಿಡಿಯೋದಿಂದ ನೆನಪು ಮತ್ತೆ ಮರುಕಳಿಸಿದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ವಿಡಿಯೋ ತುಂಬಾ ಮುದ್ದಾಗಿದೆ ಎಂದು ಸಾಕಷ್ಟು ಬಳಕೆದಾರರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;
Published On - 11:37 am, Sun, 23 April 23