Viral video: ಕಾರಿನ ಇಂಜಿನ್ ಕಂಪಾರ್ಟ್ಮೆಂಟ್ನಲ್ಲಿ ಸಿಲುಕಿಕೊಂಡ ಪುಟ್ಟ ನಾಯಿ, 30 ಮೈಲಿ ದೂರ ಕಾರ್ ಪ್ರಯಾಣಿಸಿದರು ಬದುಕುಳಿದ ಶ್ವಾನ
ಕಾರ್ ಇಂಜಿನ್ ಒಳಗೆ ಸಿಕ್ಕಿ ಹಾಕಿಕೊಂಡ್ಡಿದ ನಾಯಿ ಮರಿಯನ್ನು ಸುರಕ್ಷಿತವಾಗಿ ಕಾರ್ ಇಂಜಿನ್ ಕಂಪಾರ್ಟ್ಮೆಂಟ್ನಿಂದ ಹೊರತೆಗೆಯಲಾಯಿತು. ಈ ವಿಡಿಯೋವನ್ನು ಕ್ಯಾರಿ ಲಿಪರ್ಟ್ ಗಿಲ್ಲಾಸ್ಪಿ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಾಯಿ ಮರಿಗಳು ಹಾಗೂ ಬೆಕ್ಕಿನ ಮರಿಗಳು ಆಟವಾಡುತ್ತಾ ತರ್ಲೆ ಮಾಡುತ್ತಾ ಇರುತ್ತವೆ. ಆಟವಾಡುತ್ತಾ ಎಲ್ಲೆಲ್ಲೋ ಅವಿತುಕೊಳ್ಳುತ್ತವೆ. ಆದರೆ ಅದು ಅಪಾಯದ ಸ್ಥಳವೇ ಎಂಬ ಬಗ್ಗೆ ಆ ಮುಗ್ಧ ಜೀವಿಗಳಿಗೆ ಅರಿವಿರುವುದಿಲ್ಲ. ಇದೇ ರೀತಿ ನಾಯಿ ಮರಿಯೊಂದು ಕಾರಿನ ಇಂಜಿನ್ ಕಂಪಾರ್ಟ್ಮೆಂಟ್ ಒಳಗೆ ಸಿಳುಕಿ ಪಜೀತಿಗೆ ಒಳಗಾಗಿದೆ. ಅದೃಷ್ಟವಶಾತ್ ಆ ನಾಯಿ ಮರಿಯನ್ನು ಸಂರಕ್ಷಿಸಲಾಗಿದೆ. ಅಮೇರಿಕಾದಲ್ಲಿ ನಡೆದ ಘಟನೆ ಇದಾಗಿದ್ದು, ಕಾರೊಂದರ ಇಂಜಿನ್ ಕಂಪಾಂರ್ಟ್ಮೆಂಟ್ನಲ್ಲಿ ಸಿಲುಕಿಕೊಂಡಿದ್ದ ನಾಯಿಯೊಂದು 30 ಮೈಲಿ ದೂರದವರಿಗಿನ ಕಾರ್ ಪ್ರಯಾಣದಲ್ಲಿ ಪವಾಡ ಸದೃಶವಾಗಿ ಬದುಕುಳಿದಿದೆ. ನಾಯಿಯೊಂದು ಕಾರಿನ ಇಂಜಿನ್ ಮೇಲೆ ಏರಿ, ಅಲ್ಲಿಯೇ ಸಿಕ್ಕಿಹಾಕಿಕೊಂಡಿತು. ಆದರೆ ಈ ವಿಷಯ ಕಾರ್ ಚಾಲಕನ ಅರಿವಿಗೆ ಬರಲಿಲ್ಲ. ಆತ ಅದೇ ಕಾರಿನಲ್ಲಿ ಅಮೆರಿಕಾದ ಕನ್ಸಾಸ್ ನಿಂದ ಮಿಸೌರಿಗೆ 30 ಮೈಲಿ ಪ್ರಯಾಣಿಸಿದ್ದನು. ಆದರೂ ನಾಯಿಯ ಪ್ರಾಣಕ್ಕೆ ಯಾವುದೇ ರೀತಿಯ ಕುತ್ತು ಬರಲಿಲ್ಲ.
me: getting to work early yesterday to catch up on some things.
this little dog: let’s do this instead! pic.twitter.com/qcO7HQ4rxn
— Carrie Lippert Gillaspie (@CarrieGillaspie) April 20, 2023
ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಕನ್ಸಾಸ್ ಸಿಟಿ ರಾಯಲ್ಸ್ನ ಹೋಸ್ಟ್ ಮತ್ತು ಡಿಜಿಟಲ್ ವರದಿಗಾರ ಕ್ಯಾರಿ ಗಿಲ್ಲಾಸ್ಪಿ ಅವರು ಇಂಜಿನ್ನಲ್ಲಿ ಸಿಲುಕಿಕೊಂಡಿದ್ದ ನಾಯಿಯನ್ನು ಗುರುತಿಸಿದ್ದಾರೆ. ಅವರು ಗುರುವಾರದ ದಿನ ಕೌಫ್ ಮನ್ ಸ್ಡೇಡಿಯಂನ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ವಾಹನವೊಂದರಿಂದ ಪಿಸುಗುಡುವ ಧ್ವನಿಯೊಂದು ಕೇಳಿ ಬಂದಿದೆ. ನಂತರ ಕಾರ್ ಮಾಲೀಕರಾದ ಆಶ್ಲೇ ನ್ಯೂಮನ್ ಅವರನ್ನು ಪಾರ್ಕಿಂಗ್ ಸ್ಥಳಕ್ಕೆ ಕರೆಸಲಾಯಿತು.
ಇದನ್ನೂ ಓದಿ:ರಾಷ್ಟ್ರಧ್ವಜ ಬಳಸಿ ಚಿಕನ್ ಕ್ಲೀನ್ ಮಾಡುತ್ತಿರುವ ವಿಡಿಯೊ ವೈರಲ್; ಸಿಲ್ವಾಸ್ಸಾದ ವ್ಯಕ್ತಿಯ ಬಂಧನ
ಆ ಕಾರ್ ಇಂಜಿನ್ನಲ್ಲಿ ಪುಟ್ಟ ನಾಯಿ ಸಿಲುಕಿಕೊಂಡಿರುವುದು ಅವರ ಅರಿವೆ ಬರುತ್ತದೆ. ಆ ನಾಯಿಯನ್ನು ಸುರಕ್ಷಿತವಾಗಿ ಹೊರ ತೆಗೆಯಲು ಮೆಕ್ಯಾನಿಕ್ ಒಬ್ಬರನ್ನು ಕರೆಸಲಾಯಿತು. ರಾಯಲ್ಸ್ ಲೀಡ್ ಮೆಕ್ಯಾನಿಕಲ್ ತಂತ್ರಜ್ಞ ಡೆನ್ನಿಸ್ ಮಿಲ್ಲರ್ ನಡೆಸಿದ ರಕ್ಷಣಾ ಕಾರ್ಯಚರಣೆಯ ನಂತರ ಪುಟ್ಟ ನಾಯಿಯನ್ನು ಸುರಕ್ಷಿತವಾಗಿ ಕಾರ್ ಇಂಜಿನ್ ಕಂಪಾರ್ಟ್ಮೆಂಟ್ ನಿಂದ ಹೊರತೆಗೆಯಲಾಯಿತು. ಈ ವೈರಲ್ ವಿಡಿಯೋವನ್ನು ಕ್ಯಾರಿ ಲಿಪರ್ಟ್ ಗಿಲ್ಲಾಸ್ಪಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ಮಾಡಿ
Published On - 4:54 pm, Mon, 24 April 23