Viral Video: ‘ಗೋಲ್ಡ್ ಕುಲ್ಫಿ’ ಎಂದಾದರೂ ತಿಂದಿದ್ದೀರಾ? ಇದು ಅಸಲಿಯೋ, ನಕಲಿಯೋ? ನೀವೇ ನೋಡಿ

ಇಂದೋರ್ನ ಬೀದಿ ಬದಿ ವ್ಯಾಪಾರಿಯೊಬ್ಬರು 'ಚಿನ್ನದ ಕುಲ್ಫಿ' ಮಾರಾಟ ಮಾಡುತ್ತಿರುವ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ ಫುಡ್​​ ಬ್ಲಾಗರ್ ಕಲಾಶ್ ಸೋನಿ ಈ ವೀಡಿಯೊ ಹಂಚಿಕೊಂಡಿದ್ದಾರೆ.

Viral Video: ಗೋಲ್ಡ್ ಕುಲ್ಫಿ ಎಂದಾದರೂ ತಿಂದಿದ್ದೀರಾ? ಇದು ಅಸಲಿಯೋ, ನಕಲಿಯೋ? ನೀವೇ ನೋಡಿ
ವೈರಲ್ ವೀಡಿಯೋ
Edited By:

Updated on: May 02, 2023 | 5:59 PM

ಬೇಸಿಗೆಯಲ್ಲಿ ಅತ್ಯಂತ ಆನಂದವೆಂದರೆ ಕುಲ್ಫಿ ತಿನ್ನುವುದು. ಸುಡುವ ಬಿಸಿಲಿನಲ್ಲಿ ತಂಪಾದ ಔತಣದಂತಿರುವ ಕುಲ್ಫಿ ಎಲ್ಲ ಕಡೆಯಲ್ಲೂ ಜನಪ್ರಿಯ. ಅದರಲ್ಲಿಯೂ ನಮಗೆ ಹಲವಾರು ಆಯ್ಕೆಗಳು. ಸಾದಾ ಕುಲ್ಫಿ, ಪಿಸ್ತಾ ಕುಲ್ಫಿ, ಮಾವಿನ ಕುಲ್ಫಿ ಹಾಗೇ ವಿವಿಧ ರೀತಿಯ ಫ್ಲೇವರ್ ಹೊಂದಿದೆ. ಆದರೆ ನೀವು ಚಿನ್ನದ ಕುಲ್ಫಿಯ ಬಗ್ಗೆ ಎಂದಾದರೂ ಕೇಳಿದ್ದೀರಾ? ಇದೇನು ವಿಚಿತ್ರ ಅಂತ ಅಂದ್ಕೋತಿದೀರಾ? ಇತ್ತೀಚೆಗೆ, ಇಂದೋರ್ ಬೀದಿ ವ್ಯಾಪಾರಿಯೊಬ್ಬರು ‘ಚಿನ್ನದ ಕುಲ್ಫಿ’ ಮಾರಾಟ ಮಾಡುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಇನ್ಸ್ಟಾಗ್ರಾಮ್​​ನಲ್ಲಿ ಫುಡ್​ ಬ್ಲಾಗರ್ ಕಲಾಶ್ ಸೋನಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಇಂದೋರ್ ಬೀದಿ ವ್ಯಾಪಾರಿಯೊಬ್ಬರು ಈ ಕುಲ್ಫಿಯನ್ನು ಮಾರಾಟ ಮಾಡುವುದನ್ನು ನೀವು ನೋಡಬಹುದು. ವೀಡಿಯೊದಲ್ಲಿ ಆಭರಣಗಳನ್ನು ಹಾಕಿಕೊಂಡಿರುವ ವ್ಯಕ್ತಿ ಫ್ರಿಜ್​​​​ನಿಂದ ಕುಲ್ಫಿಯ ತುಂಡನ್ನು ಹೊರತೆಗೆಯುತ್ತಾರೆ ಅದನ್ನು ’24 ಕ್ಯಾರೆಟ್ ಚಿನ್ನದ ಪೇಪರ್​​ನಲ್ಲಿ ಸುತ್ತಿಕೊಂಡಿರುತ್ತದೆ. ಕಲಾಶ್ ಸೋನಿ ಅವರು ಹೇಳುವ ಪ್ರಕಾರ, ಈ ಕುಲ್ಫಿಯ ಬೆಲೆ 351 ರೂ. ಕುಲ್ಫಿ ಮಾರಾಟ ಮಾಡುತ್ತಿರುವ ವ್ಯಾಪಾರಿ ಹೆಸರು ಪ್ರಕಾಶ್ ಕುಲ್ಫಿ ಎಂದು ಕರೆಯಲಾಗುತ್ತದೆ. ಇದು ಇಂದೋರ್ನ ಸರಾಫಾದಲ್ಲಿದೆ. ಇಲ್ಲಿದೆ ನೋಡಿ ವೀಡಿಯೊ

ಇದನ್ನೂ ಓದಿ:Viral Video: ರಸ್ತೆ ದಾಟುತ್ತಿರುವ ಹುಲಿ ಮರಿಗಳು, ನಿಧಾನವಾಗಿ ವಾಹನ ಚಲಾಯಿಸಿ ಎಂದ ಐಎಫ್ಎಸ್ ಅಧಿಕಾರಿ

ಇದೀಗ ಈ ವೀಡಿಯೊ 40,000 ಕ್ಕೂ ಹೆಚ್ಚು ಲೈಕ್ ಹಾಗೂ ಹಲವಾರು ಶೇರ್, ಕಾಮೆಂಟ್​​​ಗಳನ್ನು ಸಹ ಹೊಂದಿದೆ. ಈ ಪೋಸ್ಟ್ ನೋಡಿದ ಅನೇಕ ಕಮೆಂಟ್ ಮಾಡಿದ್ದಾರೆ, ಒಬ್ಬ ಬಳಕೆದಾರರು “ಹಣ ವ್ಯರ್ಥ” ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು “ನಾನು ಅಲ್ಲಿಗೆ ಹೋಗಿದ್ದೆ, ಅದನ್ನು ತಿಂದೆ ಆದರೆ ಆ ದುಡ್ಡಿಗೆ ಅದು ಯೋಗ್ಯವಾಗಿಲ್ಲ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು “ಬ್ರೋ ಇದು ನಕಲಿ. ಇದು ಅರ್ಧ ಕ್ಯಾರೆಟ್ ಕೂಡ ಇಲ್ಲ, 24 ತೋ ಬೋಹೋತ್ ದುರ್ ಹೈ” ಎಂದು ಪೋಸ್ಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:58 pm, Tue, 2 May 23

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us