Viral News: ಈ ಕಂಪನಿ ತನ್ನ ಕೆಲಸಗಾರರಿಗೆ ನೀಡುತ್ತಿದೆ ಡೇಟಿಂಗ್ ಮಾಡಲು ಟಿಂಡರ್ ಲೀವ್

|

Updated on: Sep 05, 2024 | 4:45 PM

ಕೆಲಸದ ಒತ್ತಡವೆಲ್ಲವನ್ನು ಬಿಟ್ಟು ನೀವು ನಿಮ್ಮ ಸಂಗಾತಿಯೊಂದಿಗೆ ಏಕಾಂತದ ಸಮಯವನ್ನು ಕಳೆಯಲು ಈ ಕಂಪನಿ ನಿಮಗೊಂದು ಸುವರ್ಣ ಅವಕಾಶವನ್ನು ನೀಡುತ್ತಿದೆ. ವೈಟ್‌ಲೈನ್ ಗ್ರೂಪ್ ಪರಿಚಯಿಸಿದ ಡೇಟಿಂಗ್​ ಲೀವ್ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

Viral News: ಈ ಕಂಪನಿ ತನ್ನ ಕೆಲಸಗಾರರಿಗೆ ನೀಡುತ್ತಿದೆ ಡೇಟಿಂಗ್ ಮಾಡಲು ಟಿಂಡರ್ ಲೀವ್
Tinder Leaves
Image Credit source: Pinterest
Follow us on

ಕೆಲಸದ ಒತ್ತಡದಿಂದಾಗಿ ನಿಮ್ಮ ಪ್ರೇಯಸಿಯೊಂದಿಗೆ ಡೇಟಿಂಗ್​​ ಹೋಗಲು ಸಾಧ್ಯವಾಗುತ್ತಿಲ್ಲವೇ? ಹಾಗಿದ್ರೆ ನೀವು ಈ ಕಂಪನಿಯನ್ನು ಸೇರಿಕೊಳ್ಳಿ. ಥೈಲ್ಯಾಂಡ್‌ನ ಮಾರ್ಕೆಟಿಂಗ್ ಕಂಪನಿಯೊಂದು ತಮ್ಮ ಕೆಲಸಗಾರರಿಗೆ ನೀಡುತ್ತಿದೆ ಡೇಟಿಂಗ್​ ರಜೆ. ಹೌದು ನೀವು ನಿಮ್ಮ ಸಂಗಾತಿಯೊಂದಿಗೆ ಏಕಾಂತದ ಸಮಯವನ್ನು ಕಳೆಯಲು ಈ ಕಂಪನಿ ನಿಮಗೊಂದು ಸುವರ್ಣ ಅವಕಾಶವನ್ನು ನೀಡುತ್ತಿದೆ. ವೈಟ್‌ಲೈನ್ ಗ್ರೂಪ್ ಪರಿಚಯಿಸಿದ ಈ ಡೇಟಿಂಗ್​ ರಜೆ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

ಈ ಕಂಪನಿಯೂ ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡ ಪೋಸ್ಟ್‌ ಸದ್ಯ ಎಲ್ಲೆಡೆ ವೈರಲ್​​ ಆಗುತ್ತಿದೆ. ಪೋಸ್ಟ್​​ನಲ್ಲಿ ಕಂಪೆನಿಯು “ನಾವು ನಮ್ಮ ಉದ್ಯೋಗಿಗಳಿಗೆ 6 ತಿಂಗಳ ಉಚಿತ ಟಿಂಡರ್ ಪ್ಲಾಟಿನಮ್ ಮತ್ತು ಟಿಂಡರ್ ಗೋಲ್ಡ್​ ಲೀವ್ ನೀಡುತ್ತೇವೆ. ನಮ್ಮ ಉದ್ಯೋಗಿಗಳು ಯಾರೊಂದಿಗಾದರೂ ಡೇಟಿಂಗ್ ಮಾಡಲು ಟಿಂಡರ್ ಲೀವ್ ಬಳಸಬಹುದು” ಎಂದು ಬರೆದುಕೊಂಡಿದೆ.

ಟಿಂಡರ್ ಲೀವ್ ಎಂದರೇನು?

ವೈಟ್‌ಲೈನ್ ಗುಂಪಿನ ಪ್ರಕಾರ, ಟಿಂಡರ್ ಲೀವ್ ಎನ್ನುವುದು ಉದ್ಯೋಗಿಗಳಿಗೆ ಯಾರೊಂದಿಗಾದರೂ ಡೇಟ್ ಮಾಡಲು 6 ತಿಂಗಳೊಮ್ಮೆ ನೀಡುವ ವಿಶೇಷ ಆಫರ್​ ರಜೆ. ಜುಲೈನಲ್ಲಿ ಪ್ರಾರಂಭವಾದ ಈ ವಿಶೇಷ ನೀತಿಯು ಕಂಪನಿಯ ಸಿಬ್ಬಂದಿಗೆ ಡಿಸೆಂಬರ್ 31, 2024 ರವರೆಗೆ ಅನ್ವಯಿಸುತ್ತದೆ.

ಇದನ್ನೂ ಓದಿ: ದಿನಕ್ಕೆ ‌ 8 ಗಂಟೆಗಳ ಕಾಲ ನಿದ್ದೆ ಮಾಡುತ್ತಾ 10 ಲಕ್ಷ ಹಣ ಸಂಪಾದಿಸುವ ಅವಕಾಶ; ಅರ್ಜಿ ಸಲ್ಲಿಸುವುದು ಹೇಗೆಂದು ತಿಳಿಯಿರಿ

ಸದ್ಯ ಈ ಪೋಸ್ಟ್​​ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ. 24 ವರ್ಷದ ಉದ್ಯೋಗಿಯೊಬ್ಬರು ಇದಕ್ಕೆ ಪ್ರತಿಕ್ರಿಯಿಸಿದ್ದು, “ನಾನು ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದು, ಕೆಲಸದಿಂದ ಬಿಡುವು ಸಿಗುವುದಿಲ್ಲ. ನನ್ನ ಕಂಪನಿಯು ನನಗೆ ವಾರದಲ್ಲಿ ಒಂದು ದಿನ ರಜೆ ನೀಡುತ್ತದೆ ಮತ್ತು ನನಗೆ ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೂ ನನಗೆ ಬೆರೆಯಲು ಸಮಯವಿಲ್ಲ. ಕೆಲಸದ ಹೊರಗಿನ ಇತರ ಜನರೊಂದಿಗೆ, ವಾರಾಂತ್ಯಗಳಲ್ಲಿ ನನ್ನ ಸ್ನೇಹಿತರನ್ನು ಭೇಟಿಯಾಗಲು ನಾನು ಸ್ವಲ್ಪ ಸಮಯವನ್ನು ಕಂಡುಕೊಳ್ಳುತ್ತೇನೆ, ಹೊಸ ಜನರನ್ನು ಭೇಟಿಯಾಗಲು ನಾನು ಒಂದು ವೇತನದ ರಜೆಯನ್ನು ಪಡೆದರೆ ಅದು ಉತ್ತಮವಾಗಿರುತ್ತದೆ ” ಎಂದಯ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:44 pm, Thu, 5 September 24