Viral: ದಿನಕ್ಕೆ 8 ಗಂಟೆಗಳ ಕಾಲ ನಿದ್ದೆ ಮಾಡುತ್ತಾ 10 ಲಕ್ಷ ಹಣ ಸಂಪಾದಿಸುವ ಅವಕಾಶ; ಅರ್ಜಿ ಸಲ್ಲಿಸುವುದು ಹೇಗೆಂದು ತಿಳಿಯಿರಿ
ನಮ್ಮಲ್ಲಿ ಹಲವರಿಗೆ ಹಗಲು ರಾತ್ರಿ ಮಲಗುವುದೆಂದರೇ ಬಲು ಇಷ್ಟ. ದಿನಕ್ಕೆ 8 ಗಂಟೆಯಲ್ಲ, 11-12 ಗಂಟೆ ನಿದ್ರೆ ಮಾಡುವವರೂ ಇದ್ದಾರೆ. ಅಯ್ಯೋ ನಿದ್ದೆ ಮಾಡುವುದೇ ಒಂದು ಕೆಲಸವಾಗಿದ್ದರೆ ಎಷ್ಟು ಚೆನ್ನಾಗಿರೋದು ಅಲ್ವಾ ಅಂತಾ ಹಲವರು ಅಂದುಕೊಳ್ಳುತ್ತಿರುತ್ತಾರೆ. ಇದೀಗ ಇಲ್ಲೊಂದು ಕಂಪೆನಿ ಇಂತಹದೊಂದು ಡ್ರೀಮ್ ಜಾಬ್ ಆಫರ್ ನೀಡಿದ್ದು, ದಿನಕ್ಕೆ 8 ಗಂಟೆಗಳ ಕಾಲ ಮಲಗಿ, 10 ಲಕ್ಷ ಸಂಪಾದಿಸುವ ಅವಕಾಶವನ್ನು ನೀಡಿದೆ. ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿಯಿರಿ.
ಈ ಪ್ರಪಂಚದಲ್ಲಿ ಹಲವಾರು ಉದ್ಯೋಗಗಳಿವೆ. ಅದರಲ್ಲಿ ಕೆಲವೊಂದು ಕೆಲಸಗಾರರಿಗೆ ಒಳ್ಳೊಳ್ಳೆ ಫೆಸಿಲಿಟಿಯನ್ನು ಒದಗಿಸಿಕೊಟ್ರೆ, ಕೆಲವೊಂದು ಉದ್ಯೋಗಗಳು ಕೆಲಸಗಾರರ ಪ್ರಾಣಕ್ಕೆ ಕುತ್ತು ತರುವಂತಿರುತ್ತವೆ. ಈ ಮಧ್ಯೆ ಈಗೀಗ ಚಿತ್ರ ವಿಚಿತ್ರ ಉದ್ಯೋಗಗಳು ಕೂಡಾ ಸೃಷ್ಟಿಯಾಗಿವೆ. ಹೌದು ಆಹಾರ ಸವಿದು ಅದರ ರುಚಿ ಹೇಳುವ, ಚಪ್ಪಲಿ ಧರಿಸುವ ಮೂಲಕ ಅಭಿಪ್ರಾಯ ತಿಳಿಸುವ, ಅಷ್ಟೇ ಏಕೆ ಕೈ ತುಂಬಾ ಸಂಬಳ ಪಡೆದು ಸೊಳ್ಳೆಯಿಂದ ಕಡಿಸಿಕೊಳ್ಳುವ ಉದ್ಯೋಗವೂ ಇವೆ. ಈ ಎಲ್ಲಾ ಉದ್ಯೋಗಗಳ ಬಗ್ಗೆ ಕೇಳಿದಾಗ ಶಾಕ್ ಆಗುವುದಂತೂ ಖಂಡಿತ. ಇದೀಗ ಇಲ್ಲೊಂದು ಕಂಪೆನಿ ಕೂಡಾ ಹೆಚ್ಚಿನವರಿಗೆ ಬಹಳ ಇಷ್ಟ ಪಟ್ಟು ಮಾಡುವ ಡ್ರೀಮ್ ಜಾಬ್ ಆಫರ್ ಅನ್ನು ನೀಡಿದೆ. ಹೌದು ದಿನಕ್ಕೆ 8 ಗಂಟೆಗಳ ಕಾಲ ಮಲಗಿ, 10 ಲಕ್ಷ ಸಂಪಾದಿಸುವ ಅವಕಾಶವನ್ನು ನೀಡಿದ್ದು, ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿಯಿರಿ.
ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಕಂಪೆನಿ ವೇಕ್‌ಫಿಟ್ ಈ ಭರ್ಜರಿ ಜಾಬ್ ಆಫರ್ ಅನ್ನು ನೀಡಿದೆ. ಈ ಹಾಸಿಗೆ ಕಂಪೆನಿ ಮಲಗುವ ಕೆಲಸವನ್ನು ಸೃಷ್ಟಿಸಿದ್ದು, ವೇಕ್‌ಫಿಟ್ ಕಂಪೆನಿ ತಯಾರಿಸುವ ಹಾಸಿಗೆಯಲ್ಲಿ ಮಲಗುವ ಮೂಲಕ ನಿದ್ರೆ ಹೇಗೆ ಬರುತ್ತದೆ ಎಂಬ ಬಗ್ಗೆ ಅಭಿಪ್ರಾಯ ತಿಳಿಸುವುದೇ ಕೆಲಸವಾಗಿದೆ. ಈ ಹಿಂದೆಯೂ ಈ ಕಂಪೆನಿ ಈ ಜಾಬ್ ಆಫರ್ ನೀಡಿತ್ತು. ಇದೀಗ ನಾಲ್ಕನೇ ಬಾರಿ ʼಸ್ಲೀಪ್ ಇಂಟರ್ನ್ʼ ಜಾಬ್ ಆಫರ್ ನೀಡಿದ್ದು, 8 ಗಂಟೆಗಳ ಕಾಲ ಮಲಗುವ ಕೆಲಸಕ್ಕೆ 10 ಲಕ್ಷ ವೇತನ ಪಡೆಯುವ ಅವಕಾಶವನ್ನು ನೀಡಿದೆ. 3 ನೇ ಸೀಸನ್‌ನಲ್ಲಿ ಬೆಂಗಳೂರಿನ ಸಾಯಿಶ್ವರಿ ಪಾಟೀಲ್ ಎಂಬವರು ಈ ಉದ್ಯೋಗದಲ್ಲಿ ಗೆದ್ದು 9 ಲಕ್ಷ ರೂ. ಗೆಲ್ಲುವುದರ ಜೊತೆಗೆ ʼದಿ ಸ್ಲೀಪ್ ಚಾಂಪಿಯನ್ʼ ಎಂಬ ಬಿರುದನ್ನು ಗಳಿಸಿದ್ದರು. ಇದೀಗ ಈ ಕಂಪೆನಿ 8 ಗಂಟೆಗಳ ಕಾಲ ನಿದ್ದೆ ಮಾಡಿ 10 ಲಕ್ಷ ಗೆಲ್ಲುವ ಭರ್ಜರಿ ಆಫರ್ ನೀಡಿದೆ.
ಈ ಉದ್ಯೋಗಕ್ಕೆ ಬೇಕಾದ ಅರ್ಹತೆ, ಅಭ್ಯರ್ಥಿ, ಸಂಬಳ, ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ವೇಕ್‌ಫಿಟ್ ಲಿಂಕ್ಡ್ ಇನ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.
- ಪೋಸ್ಟ್ ಹೆಸರು: ಪ್ರೊಫೆಷನಲ್ ಸ್ಲೀಪ್ ಇಂಟರ್ನ್
- ಕೆಲಸದ ಸ್ಥಳ: ಹಾಸಿಗೆ
- ಅವಧಿ: 2 ತಿಂಗಳುಗಳು
ಈ ಇಂಟರ್ನ್‌ಶಿಪ್ ಅಲ್ಲಿ ಮಾಡಬೇಕಾದ ಕೆಲಸಗಳೇನು?
- ಪ್ರತಿ ರಾತ್ರಿ 8 ರಿಂದ 9 ಗಂಟೆಗಳ ಕಾಲ ವೇಕ್‌ಫಿಟ್ ಹಾಸಿಗೆಯಲ್ಲಿ ಉತ್ತಮ ನಿದ್ರೆಯನ್ನು ಮಾಡುವುದು
- ಹಗಲು ಹೊತ್ತಿನಲ್ಲಿ 20 ನಿಮಿಷಗಳ ಕಾಲ ಕಿರು ನಿದ್ರೆ (ಪವರ್ ನ್ಯಾಪ್) ಮಾಡುವುದು
ಅಭ್ಯರ್ಥಿಯ ಅರ್ಹತೆ:
- ಪ್ರತಿರಾತ್ರಿ ಒಂದೇ ಸಮಯಕ್ಕೆ ಮಲಗುವವರು ಅರ್ಜಿ ಸಲ್ಲಿಸಬಹುದು.
- 20 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದು.
- ಮುಖ್ಯವಾಗಿ ನಿದ್ದೆ ಮಾಡುವುದನ್ನು ಇಷ್ಟಪಡುವವರಾಗಿರಬೇಕು.
- ಯಾವುದೇ ವಿಭಾದಲ್ಲಿ ಪದವಿ ಅಥವಾ ಸ್ನಾತ್ತಕೋತ್ತರ ಪದವಿಯನ್ನು ಪೂರೈಸಿರಬೇಕು
ಸಂಬಳ:
- ಆಯ್ದ ಸ್ಲೀಪ್ ಇಂಟರ್ನ್‌ಗಳಿಗೆ 1 ಲಕ್ಷ ರೂ. ಸಂಬಳ
- ವರ್ಷದ ಸ್ಲೀಪ್ ಚಾಂಪಿಯನ್ ಎಂದು ಗುರುತಿಸಲ್ಪಟ್ಟ ಇಂಟರ್ನ್‌ಗೆ 10 ಲಕ್ಷದ ವರೆಗೆ ಸಂಬಳ ಸಿಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ನೀವು ಈ ಉದ್ಯೋಗದಲ್ಲಿಆಸಕ್ತಿಯನ್ನು ಹೊಂದಿದ್ದರೆ ವೇಕ್‌ಫಿಟ್ ಅವರ ಅಫೀಶಿಯಲ್ ಲಿಂಕ್ಡ್‌ಇನ್ ಪುಟದಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಅಥವಾ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ
https://www.wakefit.co/sleepintern/?srsltid=AfmBOoqgr_0rts2cvbWFWQCYqd_J8aHnxyFDEpYQgwa4IuBsjr0NHc7v
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ