Viral: ಮೀನು ಹಿಡಿಯಲು ಹೋಗಿ ತುಂಬಿ ಹರಿಯುತ್ತಿದ್ದ ಹೊಳೆಯಲ್ಲಿ ಸಿಲುಕಿದ ಆಸಾಮಿ; ಪೊಲೀಸರಿಂದ ರಕ್ಷಣೆ
ಜೋರು ಮಳೆ ಮತ್ತು ಪ್ರವಾಹದ ಸಂದರ್ಭದಲ್ಲಿ ನದಿ, ಹೊಳೆ, ಸಮುದ್ರಗಳ ಪಕ್ಕಕ್ಕೆ ಹೋಗಬಾರದೂ ಎಂದು ಎಚ್ಚರಿಕೆಯನ್ನು ನೀಡಿದರೂ ಕೆಲವೊಂದಿಷ್ಟು ಜನ ಅದು ಏನ್ ಆಗುತ್ತೆ ನೋಡೋಣಾ ಅಂತ ತುಂಬಿ ಹರಿಯುವ ನೀರಿನ ಬಳಿಯೇ ಹೋಗುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಕೂಡಾ ಭಂಡ ಧೈರ್ಯದಿಂದ ಪ್ರವಾಹ ಪರಿಸ್ಥಿಯ ನಡುವೆ ಮೀನು ಹಿಡಿಯಲು ಹೋಗಿ ಹೊಳೆಯ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದಾನೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಹಗ್ಗದ ಸಹಾಯದಿಂದ ಆತನನ್ನು ರಕ್ಷಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ತತ್ತರಿಸಿ ಹೋಗಿವೆ. ಭೀಕರ ಪ್ರವಾಹದಿಂದಾಗಿ ಮನೆಗಳು, ಗಂಗಡಿ ಮುಂಗಟ್ಟುಗಳು, ರಸ್ತೆಗಳು ಜಲಾವೃತಗೊಂಡು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇಂತಹ ಪ್ರವಾಹ ಸಂದರ್ಭದಲ್ಲಿ ನದಿ ಸಮೀಪದ ಜನರನ್ನು ಪರಿಹಾರ ಶಿಬಿರಗಳಿಗೆ ಕಳುಹಿಸಲಾಗಿದೆ. ಆದ್ರೆ ಇಲ್ಲೊಬ್ಬ ಆಸಾಮಿ ಪ್ರವಾಹದ ನಡುವೆಯೂ ಭಂಡ ಧೈರ್ಯದಿಂದ ಮೀನು ಹಿಡಿಯಲು ಹೋಗಿ ಪಜೀತಿಗೆ ಸಿಕ್ಕಿಹಾಕಿಕೊಂಡಿದ್ದಾನೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಹಗ್ಗದ ಸಹಾಯದಿಂದ ಆತನನ್ನು ರಕ್ಷಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಈ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯ ಗುಂಡುವಾಗುವಿನಲ್ಲಿ ನಡೆದಿದ್ದು, ಭೀಕರ ಮಳೆಯ ನಡುವೆಯೂ ಕಲ್ಲೂರಿನ ರಾಮಾವತ್ ನಂದು (45) ಎಂಬಾತ ಗುಂಡು ವಾಗು ಸೇತುವೆ ಬಳಿ ಮೀನು ಹಿಡಿಯಲು ಹೋಗಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಹಗ್ಗದ ಸಹಾಯದಿಂದ ಆತನನ್ನು ರಕ್ಷಣೆ ಮಾಡಿದ್ದಾರೆ.
మెదక్ జిల్లా:వాగులో కొట్టుకుని పోతున్న వ్యక్తిని కాపాడిన పోలీసులు
టేక్మాల్ మండలం గుండు వాగులో ఘటన .చేపలు పట్టేందుకు గుండు వాగు బ్రిడ్జి పైకి వెళ్లిన కల్లూరుకు చెందిన రమావత్ నందు (45).ప్రవాహం ఎక్కువ కావడంతో నీటిలో కొట్టుకుపోయిన వ్యక్తి .@TelanganaDGP pic.twitter.com/yKC2XIeKLp
— ChotaNews (@ChotaNewsTelugu) September 3, 2024
ಇದನ್ನೂ ಓದಿ: Richest Cat: ಇನ್ಸ್ಟಾಗ್ರಾಮ್ನಲ್ಲಿ ಪ್ರತೀ ಪೋಸ್ಟ್ಗೆ 12ಲಕ್ಷ ರೂ. ಪಡೆಯುವ ವಿಶ್ವದ ಶ್ರೀಮಂತ ಬೆಕ್ಕು
ಈ ಕುರಿತ ಪೋಸ್ಟ್ ಒಂದನ್ನು ChotaNews ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪೊಲೀಸರಿಬ್ಬರು ತಮ್ಮ ಜೀವದ ಹಂಗನ್ನು ತೊರೆದು ಹಗ್ಗದ ಸಹಾಯದಿಂದ ನೀರಿನಲ್ಲಿ ಹೊಚ್ಚಿ ಹೋದ ವ್ಯಕ್ತಿಯನ್ನು ರಕ್ಷಿಸಿ ಕರೆ ತರುತ್ತಿರುವ ದೃಶ್ಯವನ್ನು ಕಾಣಬಹುದು. ಪೊಲೀಸರ ಈ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ