Richest Cat: ಇನ್ಸ್ಟಾಗ್ರಾಮ್​​ನಲ್ಲಿ ಪ್ರತೀ ಪೋಸ್ಟ್​​ಗೆ 12ಲಕ್ಷ ರೂ. ಪಡೆಯುವ ವಿಶ್ವದ ಶ್ರೀಮಂತ ಬೆಕ್ಕು

ವಿಶ್ವದ ಅತ್ಯಂತ ಶ್ರೀಮಂತ ಬೆಕ್ಕು ಎಂದು ಪರಿಗಣಿಸಲ್ಪಟ್ಟಿರುವ ಈ ಬೆಕ್ಕಿನ ಹೆಸರು ನಳ. ಈ ಬೆಕ್ಕು 852 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದ ಆಸ್ತಿಯನ್ನು ಹೊಂದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿರುವ ಬೆಕ್ಕು ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಕೂಡ ಈ ಬೆಕ್ಕು ಪಡೆದುಕೊಂಡಿದೆ.

Richest Cat: ಇನ್ಸ್ಟಾಗ್ರಾಮ್​​ನಲ್ಲಿ ಪ್ರತೀ ಪೋಸ್ಟ್​​ಗೆ 12ಲಕ್ಷ ರೂ. ಪಡೆಯುವ ವಿಶ್ವದ ಶ್ರೀಮಂತ ಬೆಕ್ಕು
ವಿಶ್ವದ ಶ್ರೀಮಂತ ಬೆಕ್ಕುImage Credit source: instagram
Follow us
|

Updated on:Sep 03, 2024 | 10:34 AM

ಇತ್ತೀಚಿಗಷ್ಟೇ ಒಟ್ಟು 3,300 ಕೋಟಿ ರೂಪಾಯಿ ಆಸ್ತಿ ಹೊಂದಿರುವ ಜರ್ಮನ್ ಶೆಫರ್ಡ್ ತಳಿಯ ಗುಂಥರ್-6 ಎಂಬ ಹೆಸರಿನ ವಿಶ್ವದ ಅತ್ಯಂತ ಶ್ರೀಮಂತ ಶ್ವಾನ ಭಾರೀ ಸುದ್ದಿಯಲ್ಲಿತ್ತು. ಇದೀಗ ಫೋರ್ಬ್ಸ್ ಪಟ್ಟಿಯಲ್ಲಿ ಜಾಗ ಪಡೆದಿರುವ ವಿಶ್ವದ ಶ್ರೀಮಂತ ಬೆಕ್ಕು ಸೋಶಿಯಲ್​​ ಮೀಡಿಯಾದಲ್ಲಿ ಭಾರೀ ವೈರಲ್​​ ಆಗುತ್ತಿದೆ. ಈ ಬೆಕ್ಕು ಬರೀ ಇನ್ಸ್ಟಾಗ್ರಾಮ್​​ನಲ್ಲಿ ಪ್ರತೀ ಪೋಸ್ಟ್​​ಗೆ 12ಲಕ್ಷ ರೂ. ಸಂಭಾವನೆಯನ್ನು ಪಡೆಯುತ್ತದೆ. ಇದಲ್ಲದೇ ಅತ್ಯಂತ ಜನಪ್ರಿಯ ಬೆಕ್ಕು ಎಂದೇ ಗಿನ್ನೆಸ್​ ವಿಶ್ವ ದಾಖಲೆಯನ್ನೂ ಪಡೆದುಕೊಂಡಿದೆ.

ವಿಶ್ವದ ಅತ್ಯಂತ ಶ್ರೀಮಂತ ಬೆಕ್ಕು ಎಂದು ಪರಿಗಣಿಸಲ್ಪಟ್ಟಿರುವ ಈ ಬೆಕ್ಕಿನ ಹೆಸರು ನಳ(Nala). ಈ ಬೆಕ್ಕು 852 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದ ಆಸ್ತಿಯನ್ನು ಹೊಂದಿದೆ. ಇನ್ಸ್ಟಾಗ್ರಾಮ್​​ನಲ್ಲಿ ಸಖತ್​ ಆಕ್ಟೀವ್​ ಆಗಿರುವ ಈ ಬೆಕ್ಕು 4.5 ಮಿಲಿಯನ್​​ ಅಂದರೆ ಬರೋಬ್ಬರಿ 40 ಲಕ್ಷಕ್ಕೂ ಅಧಿಕ ಫಾಲೋವರ್ಸ್ಗಳನ್ನು ಹೊಂದಿದೆ.

View this post on Instagram

A post shared by Nala Cat ™ (@nala_cat)

ಇದನ್ನೂ ಓದಿ: Richest Dog: 3300 ಕೋಟಿಗೂ ಅಧಿಕ ಆಸ್ತಿ ಹೊಂದಿರುವ ವಿಶ್ವದ ಶ್ರೀಮಂತ ಶ್ವಾನವಿದು

ಯುನೈಟೆಡ್ ಸ್ಟೇಟ್ಸ್‌ನ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಪೂಕಿ ಎಂದು ಕರೆಯಲ್ಪಡುವ ಮಹಿಳೆ ಈ ಬೆಕ್ಕನ್ನು ಲಾಸ್ ಏಂಜಲೀಸ್‌ನ ಪ್ರಾಣಿಗಳ ರಕ್ಷಣಾ ಆಶ್ರಯದಿಂದ 4 ತಿಂಗಳ ಈ ಬೆಕ್ಕಿನ ಮರಿಯನ್ನು ದತ್ತು ತೆಗೆದುಕೊಂಡಿದ್ದಳು. ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿರುವ ಬೆಕ್ಕು ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಕೂಡ ಈ ಬೆಕ್ಕು ಪಡೆದುಕೊಂಡಿದೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:33 am, Tue, 3 September 24

ಚಿತ್ರರಂಗದಲ್ಲಿ ನಟಿಯರ ನಡುವೆ ತಾರತಮ್ಯ: ಅಸಲಿ ವಿಚಾರ ತಿಳಿಸಿದ ಸಾಕ್ಷಿ ಮೇಘನ
ಚಿತ್ರರಂಗದಲ್ಲಿ ನಟಿಯರ ನಡುವೆ ತಾರತಮ್ಯ: ಅಸಲಿ ವಿಚಾರ ತಿಳಿಸಿದ ಸಾಕ್ಷಿ ಮೇಘನ
ಸಿನಿಮಾ ಬಿಡುಗಡೆ ಸಮಯದಲ್ಲಿ ನಟ ಕಿರಣ್ ರಾಜ್​ ಕಾರು ಅಪಘಾತ ಆಗಿದ್ದು ನಿಜವೇ?
ಸಿನಿಮಾ ಬಿಡುಗಡೆ ಸಮಯದಲ್ಲಿ ನಟ ಕಿರಣ್ ರಾಜ್​ ಕಾರು ಅಪಘಾತ ಆಗಿದ್ದು ನಿಜವೇ?
ಸಿಎಂ ಕುರ್ಚಿ ಖಾಲಿ ಇಲ್ಲ: ನಾನೇ ಮುಂದುವರಿಯುತ್ತೇನೆ ಎಂದ ಸಿದ್ದರಾಮಯ್ಯ
ಸಿಎಂ ಕುರ್ಚಿ ಖಾಲಿ ಇಲ್ಲ: ನಾನೇ ಮುಂದುವರಿಯುತ್ತೇನೆ ಎಂದ ಸಿದ್ದರಾಮಯ್ಯ
ವಿಡಿಯೋ: ಊರಿನ ಗಣೇಶೋತ್ಸವದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ
ವಿಡಿಯೋ: ಊರಿನ ಗಣೇಶೋತ್ಸವದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ
ಬೈಕ್​ನಲ್ಲಿ ಹೋಗುತ್ತಿದ್ದಾಗ ಚರಂಡಿಗೆ ಬಿದ್ದ ವ್ಯಕ್ತಿ; ವಿಡಿಯೋ ವೈರಲ್
ಬೈಕ್​ನಲ್ಲಿ ಹೋಗುತ್ತಿದ್ದಾಗ ಚರಂಡಿಗೆ ಬಿದ್ದ ವ್ಯಕ್ತಿ; ವಿಡಿಯೋ ವೈರಲ್
ಮಹಿಳೆಗೆ CM ಯೋಗ; ಕೋಡಿಶ್ರೀ ಭವಿಷ್ಯದ ಬಗ್ಗೆ ಹೆಬ್ಬಾಳ್ಕರ್ ಗರಂ ಆಗಿದ್ಯಾಕೆ?
ಮಹಿಳೆಗೆ CM ಯೋಗ; ಕೋಡಿಶ್ರೀ ಭವಿಷ್ಯದ ಬಗ್ಗೆ ಹೆಬ್ಬಾಳ್ಕರ್ ಗರಂ ಆಗಿದ್ಯಾಕೆ?
ಸಿಎಂ ಬದಲಾವಣೆ ಆಗುವುದಾದರೆ ನಾನೂ ಸ್ಪರ್ಧಿಸುವೆ: ಶಾಮನೂರು ಶಿವಶಂಕರಪ್ಪ
ಸಿಎಂ ಬದಲಾವಣೆ ಆಗುವುದಾದರೆ ನಾನೂ ಸ್ಪರ್ಧಿಸುವೆ: ಶಾಮನೂರು ಶಿವಶಂಕರಪ್ಪ
ಹಾಸನ: ಊರಿಗೆ ನುಗ್ಗಿದ ಗಜಪಡೆ, ದಿಕ್ಕಾಪಾಲಾಗಿ ಓಡಿದ ಗ್ರಾಮಸ್ಥರು
ಹಾಸನ: ಊರಿಗೆ ನುಗ್ಗಿದ ಗಜಪಡೆ, ದಿಕ್ಕಾಪಾಲಾಗಿ ಓಡಿದ ಗ್ರಾಮಸ್ಥರು
‘ನಾನು ಆರೋಗ್ಯವಾಗಿದ್ದೇನೆ’; ಹೆಲ್ತ್​ ಅಪ್​ಡೇಟ್ ಕೊಟ್ಟ ಕಿರಣ್ ರಾಜ್
‘ನಾನು ಆರೋಗ್ಯವಾಗಿದ್ದೇನೆ’; ಹೆಲ್ತ್​ ಅಪ್​ಡೇಟ್ ಕೊಟ್ಟ ಕಿರಣ್ ರಾಜ್
ಆ್ಯಪಲ್ ಐಫೋನ್ 16 ಪ್ರೊ ಮ್ಯಾಕ್ಸ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತಿರಾ!!
ಆ್ಯಪಲ್ ಐಫೋನ್ 16 ಪ್ರೊ ಮ್ಯಾಕ್ಸ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತಿರಾ!!