Viral: 12 ಸಾವಿರ ರೂ. ಸಂಬಳದಲ್ಲಿ 10 ಸಾವಿರ ರೂ. ಮಗುವಿಗೆ ಕೊಟ್ರೆ ಆ ವ್ಯಕ್ತಿಯ ಜೀವನ ಹೇಗೆ? ಪತ್ನಿಗೆ ಕ್ಲಾಸ್ ತೆಗೆದುಕೊಂಡ ಕರ್ನಾಟಕ ಹೈಕೋರ್ಟ್
ಇಲ್ಲೊಂದು ಅಚ್ಚರಿಯ ಪ್ರಕರಣವೊಂದರ ವಿಡಿಯೋ ವೈರಲ್ ಆಗುತ್ತಿದ್ದು, ಮಹಿಳೆಯೊಬ್ಬರು ಹೆಚ್ಚಿನ ಜೀವನಾಂಶವನ್ನು ಕೋರಿ ಪತಿಯ ವಿರುದ್ಧ ಮೊಕದ್ದಮೆ ಹೂಡಿದ್ದರು. ವಿಚಾರಣೆಯ ವೇಳೆ ಪತಿ ಪ್ರತಿ ತಿಂಗಳು ತನಗೆ ಸಿಗುವ 12 ಸಾವಿರ ಸಂಬಳದಲ್ಲಿ 10 ಸಾವಿರ ರೂ.ಗಳನ್ನು ತನ್ನ ಮಗುವಿನ ಆರೈಕೆಗಾಗಿ ನೀಡುವ ಸಂಗತಿಯನ್ನು ತಿಳಿದು ಶಾಕ್ ಆದ ಕರ್ನಾಟಕ ಹೈಕೋರ್ಟ್ ಸಿಗುವ ಸಂಬಳದಲ್ಲಿ ಹೆಚ್ಚಿನ ಪಾಲು ಮಗುವಿಗೆ ನೀಡಿದ್ರೆ ಆ ವ್ಯಕ್ತಿ ಹೇಗೆ ಜೀವನ ನಡೆಸಲು ಸಾಧ್ಯ ಎಂದು ಪತಿಯ ವಿರುದ್ಧ ಮೊಕದ್ದಮೆ ಹೂಡಿದಾಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಡಿವೋರ್ಸ್ ಬಳಿಕ ಹೆಚ್ಚಿನ ಜೀವನಾಂಶವನ್ನು ಕೋರಿ ಕೋರ್ಟ್ ಮೆಟ್ಟಿಲೇರುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಕೆಲ ದಿನಗಳ ಹಿಂದೆ ಮಹಿಳೆಯೊಬ್ಬರು 6 ಲಕ್ಷ ಜೀವನಾಂಶ ಬೇಕೆಂದು ಕೋರ್ಟ್ ಮೆಟ್ಟಿಲೇರಿದ ಸುದ್ದಿಯೊಂದು ಸಖತ್ ವೈರಲ್ ಆಗಿತ್ತು. ಅದೇ ರೀತಿ ಇಲ್ಲೊಬ್ರು ಮಹಿಳೆ ಇನ್ನೂ ಹೆಚ್ಚಿನ ಜೀವನಾಂಶ ಬೇಕೆಂದು ಪತಿಯ ವಿರುದ್ಧ ಕರ್ನಾಟಕ ಹೈ ಕೋರ್ಟ್‌ನಲ್ಲಿ ಮೊಕದ್ದಮೆಯನ್ನು ಹೂಡಿದ್ದರು. ವಿಚಾರಣೆಯ ಸಂದರ್ಭದಲ್ಲಿ ಪತಿ ತನಗೆ ಸಿಗುವ 12 ಸಾವಿರ ರೂ. ಸಂಬಳದಲ್ಲಿ ಪ್ರತಿ ತಿಂಗಳು 10 ಸಾವಿರ ರೂ. ಗಳನ್ನು ಮಗುವಿಗಾಗಿ ನೀಡುವ ವಿಚಾರವನ್ನು ತಿಳಿದು ಶಾಕ್ ಆದ ಕರ್ನಾಟಕ ಹೈಕೋರ್ಟ್ ಸಿಗುವ ಸಂಬಳದಲ್ಲಿ ಹೆಚ್ಚಿನ ಪಾಲು ಮಗುವಿಗೆ ನೀಡಿದ್ರೆ ಆ ವ್ಯಕ್ತಿ ಹೇಗೆ ಜೀವನ ನಡೆಸಲು ಸಾಧ್ಯ ಎಂದು ಪತಿಯ ವಿರುದ್ಧ ಮೊಕದ್ದಮೆ ಹೂಡಿದಾಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹೆಚ್ಚಿನ ಜೀವನಾಂಶವನ್ನು ಕೋರಿ ಮಹಿಳೆಯೊಬ್ಬರು ಪತಿಯ ವಿರುದ್ಧ ಕರ್ನಾಟಕ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ. ವಿಚಾರಣೆಯ ವೇಳೆ ಮಹಿಳೆಯ ಪರ ವಕೀಲರು ಆಕೆಯ ಪತಿ ತಿಂಗಳಿಗೆ 10 ಸಾವಿರ ರೂ. ಮಗುವಿನ ಆರೈಕೆಗೆ ನೀಡುತ್ತಿದ್ದಾರೆ. ಆದ್ರೆ ಪತ್ನಿಗೆ ಏನನ್ನೂ ನೀಡಿಲ್ಲ, ಆ ವ್ಯಕ್ತಿ ತಿಂಗಳಿಗೆ 62 ಸಾವಿರ ರೂ. ಸಂಪಾದನೆ ಮಾಡುತ್ತಿದ್ದಾರೆ ಆದ್ರೆ ಪತ್ನಿಗೆ ಜೀವನಾಂಶ ನೀಡಿಲ್ಲ ಎಂದು ವಾದ ಮಂಡಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಪತಿಯ ಪರ ವಕೀಲರು ನಮ್ಮ ಕಕ್ಷಿದಾರರ ಸಂಬಳ ತಿಂಗಳಿಗೆ 18 ಸಾವಿರ ರೂ.
Husband earns ₹12,000 a month. He pays ₹10,000 as #Maintenance to wife
The judge shocks how did the lower court granted such maintenance.
The judge “How will be live?” pic.twitter.com/jO1gZnUXQ3
— ShoneeKapoor (@ShoneeKapoor) August 31, 2024
ಅದರಲ್ಲಿ 12 ಸಾವಿರ ಮಾತ್ರ ಕೈಗೆ ಸಿಗೋದು, ಆ 12 ಸಾವಿರ ಸಂಬಳದಲ್ಲಿ 10 ಸಾವಿರ ರೂ. ಮಗುವಿನ ಆರೈಕೆಗೆ ನೀಡುತ್ತಿದ್ದಾರೆ ಎಂದು ವಾದವನ್ನು ಮಂಡಿಸುತ್ತಾರೆ. ವಾದವನ್ನು ಆಳಿಸಿದ ಬಳಿಕ ಶಾಕ್ ಆದ ನ್ಯಾಯಾಧೀಶರು ಸಂಬಳದ ಬಹುಪಾಲು ಮಗುವಿನ ಆರೈಕೆಗೆ ನೀಡಿದ್ರೆ ಆ ವ್ಯಕ್ತಿ ಹೇಗೆ ಸ್ವಾಮಿ ಜೀವನ ನಡೆಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಪತಿಯ ಸಂಬಳ ಹೆಚ್ಚಿದ್ದರೆ ಮಾತ್ರ ಮಗುವಿನ ಆರೈಕೆಗೆ ಹೆಚ್ಚಿನ ಹಣವನ್ನು ಕೋರಿ ಅರ್ಜಿ ಸಲ್ಲಿಸಬಹುದು ಇಲ್ಲವಾದರೆ ಅದು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ತೀರ್ಪನ್ನು ನೀಡಿದ್ದಾರೆ.
ಇದನ್ನೂ ಓದಿ: ಐ ಲವ್ ಯು ಹೇಳಿದ್ರೆ ಮಾತ್ರ ರೀಚಾರ್ಜ್ ಮಾಡ್ತೇನೆ, ಅಂಗಡಿ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಸ್ಕೂಲ್ ಹುಡ್ಗೀರು
ಶೋನಿ ಕಪೂರ್ (ShoneeKapoor) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋ 7 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇನ್ನು ಮುಂದೆ ಪುರುಷರು ಮದುವೆಯಾಗುವುದನ್ನೇ ನಿಲ್ಲಿಸಬೇಕಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಯಾವಾಗಲೂ ಪುರುಷರಿಗೆಯೇ ಏಕೆ ಇಷ್ಟೊಂದು ಅನ್ಯಾಯ ಆಗುತ್ತಿದೆʼ ಎಂದು ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼನ್ಯಾಯಾಧೀಶರು ಉತ್ತಮ ತೀರ್ಪನ್ನು ನೀಡಿದ್ದಾರೆʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ