Teacher’s Day 2024: ಶಿಕ್ಷಕರ ದಿನದಂದು ನಿಮ್ಮ ನೆಚ್ಚಿನ ಶಿಕ್ಷಕರನ್ನು ಇನ್ನಷ್ಟು ಸ್ಪೆಶಲ್‌ ಆಗಿಸಲು ಇಲ್ಲಿವೆ ಟಿಪ್ಸ್‌

ಪ್ರತಿವರ್ಷ ಸೆಪ್ಟೆಂಬರ್‌ 5 ರಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಜನ್ಮ ದಿನದ ಗೌರವಾರ್ಥವಾಗಿ ದೇಶಾದ್ಯಂತ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲೂ ವಿದ್ಯಾರ್ಥಿಗಳು ಈ ದಿನವನ್ನು ಶಿಕ್ಷಕರೊಂದಿಗೆ ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಹಿಂದಿನ ವರ್ಷಕ್ಕಿಂತ ಈ ವರ್ಷ ಈ ವಿಶೇಷ ದಿನವನ್ನು ಇನ್ನಷ್ಟು ಸ್ಪೆಷಲ್‌ ಆಗಿ ಆಚರಿಸಲು ಹಾಗೂ ನೆಚ್ಚಿನ ಶಿಕ್ಷಕರ ಮೊಗದಲ್ಲಿ ನಗು ತರಿಸಲು ಇಲ್ಲಿವೆ ಕೆಲವೊಂದು ಸಿಂಪಲ್‌ ಟಿಪ್ಸ್.‌

Teacher's Day 2024: ಶಿಕ್ಷಕರ ದಿನದಂದು ನಿಮ್ಮ ನೆಚ್ಚಿನ ಶಿಕ್ಷಕರನ್ನು ಇನ್ನಷ್ಟು ಸ್ಪೆಶಲ್‌ ಆಗಿಸಲು ಇಲ್ಲಿವೆ ಟಿಪ್ಸ್‌
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 03, 2024 | 1:46 PM

ಮಕ್ಕಳಿಗೆ ಬಾಲ್ಯದಲ್ಲಿ ಸರಿಯಾದ ಮಾರ್ಗದರ್ಶನ ನೀಡುವುದರ ಮೂಲಕ ಅವರನ್ನು ಭವಿಷ್ಯದ ಉತ್ತಮ, ಪ್ರಜ್ಞಾನವಂತ ಪ್ರಜೆಗಳನ್ನಾಗಿ ರೂಪಿಸುವುದರ ಜೊತೆಗೆ ಉತ್ತಮ ಸಮಾಜದ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾದುದು. ತಂದೆ-ತಾಯಿಯ ನಂತರ ಮಕ್ಕಳ ಏಳಿಗೆಯನ್ನು ಬಯಸುವವರೆಂದರೆ ಶಿಕ್ಷಕರು. ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ಶಿಕ್ಷಕರಿಗೆ ಗೌರವ ಸಲ್ಲಿಸಲುವ ಸಲುವಾಗಿ ನಮ್ಮ ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್‌ 05 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಸಲುವಾಗಿ ಈ ದಿನವನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ. ಹಿಂದಿನ ವರ್ಷಕ್ಕಿಂತ ಈ ವರ್ಷ ಈ ವಿಶೇಷ ದಿನವನ್ನು ಇನ್ನಷ್ಟು ಸ್ಪೆಷಲ್‌ ಆಗಿ ಆಚರಿಸಲು ಹಾಗೂ ನೆಚ್ಚಿನ ಶಿಕ್ಷಕರ ಮೊಗದಲ್ಲಿ ನಗು ತರಿಸಲು ಇಲ್ಲಿವೆ ಕೆಲವೊಂದು ಸಿಂಪಲ್‌ ಟಿಪ್ಸ್.‌

ಶಿಕ್ಷಕರ ದಿನವನ್ನು ಇನ್ನಷ್ಟು ಸ್ಪೆಷಲ್‌ ಆಗಿ ಆಚರಿಸಲು ಇಲ್ಲಿವೆ ಕೆಲವು ಅದ್ಭುತ ಟಿಪ್ಸ್:‌

ಫೋಟೋ ಕೊಲಾಜ್:‌

ಫೋಟೋಗಳು ಅನೇಕ ಸಿಹಿ-ಕಹಿ ನೆನಪುಗಳನ್ನು ಮರುಕಳಿಸಲು ಸಹಾಯ ಮಾಡುವ ಅದ್ಭುತಗಳಲ್ಲಿ ಒಂದು ಅಂತಾನೇ ಹೇಳಬಹುದು. ಹಾಗಿರುವಾಗ ನೀವು ಮತ್ತು ನಿಮ್ಮ ಸಹಪಾಠಿಗಳು ಶಿಕ್ಷಕರೊಂದಿಗೆ ತೆಗೆದ ಫೋಟೋಗಳನ್ನು ಹಾಗೂ ಶಿಕ್ಷಕರ ಫನ್ನಿ ಹಾಗೂ ಸುಂದರ ಕ್ಷಣಗಳ ಫೋಟೋಗಳನ್ನು ಕೊಲಾಜ್‌ ಮಾಡಿ ಫ್ರೇಮ್‌ ಮಾಡಿಸಿ ಶಿಕ್ಷಕರಿಗೆ ಉಡುಗೊರೆಯಾಗಿ ನೀಡಬಹುದು. ಈ ಒಂದು ಗಿಫ್ಟ್‌ ಖಂಡಿತವಾಗಿಯೂ ನಿಮ್ಮ ಶಿಕ್ಷಕರ ಮೊಗದಲ್ಲಿ ನಗು ತರಿಸುತ್ತದೆ.

ವಿಶೇಷ ತಿನಿಸುಗಳನ್ನು ಉಣ ಬಡಿಸಬಹುದು:

ನಿಮ್ಮ ನೆಚ್ಚಿನ ಶಿಕ್ಷಕರಿಗೆ ಅವರ ಇಷ್ಟವಾದ ತಿನಿಸುಗಳನ್ನು ನೀವೇ ನಿಮ್ಮ ಕೈಯಾರೆ ತಯಾರಿಸಿ, ಅವರಿಗೆ ತಿನ್ನಿಸಬಹುದು. ಅಥವಾ ನಿಮ್ಮ ಕೈಯಾರೆ ಕೇಕ್‌ ತಯಾರಿಸಿ ಶಿಕ್ಷಕರ ದಿನದಂದು ಶಿಕ್ಷಕರಿಂದ ಆ ಕೇಕ್‌ ಕಟ್‌ ಮಾಡಿಸುವ ಮೂಲಕ ಶಿಕ್ಷಕರ ದಿನವನ್ನು ವಿಶೇಷವಾಗಿ ಆಚರಿಸಬಹುದು. ಈ ಸಣ್ಣ ಪುಟ್ಟ ಸಂಗತಿಗಳ ಮೂಲಕ ಈ ವಿಶೇಷ ದಿನದಂದು ನಿಮ್ಮ ನೆಚ್ಚಿನ ಶಿಕ್ಷಕರನ್ನು ಇನ್ನಷ್ಟು ಸ್ಪೆಷಲ್‌ ಮಾಡಿಸಬಹುದು.

ಅರ್ಥಪೂರ್ಣ ಉಡುಗೊರೆಗಳನ್ನು ನೀಡಬಹುದು:

ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಕರ ದಿನದಂದು ತಮ್ಮ ನೆಚ್ಚಿನ ಶಿಕ್ಷಕರಿಗೆ ಗಿಫ್ಟ್‌ಗಳನ್ನು ನೀಡುವ ಮೂಲಕ ಸಂಭ್ರಮಿಸುತ್ತಾರೆ. ಚಾಕಲೇಟ್‌, ರೋಸ್‌ ಇತ್ಯಾದಿ ಗಿಫ್ಟ್‌ಗಳನ್ನು ನೀಡುವ ಬದಲು ಶಿಕ್ಷಕರ ನೆಚ್ಚಿನ ಪುಸ್ತಕ ಅಥವಾ ಹೂವು-ಹಣ್ಣುಗಳ ಗಿಡಗಳನ್ನು ಅವರಿಗೆ ಉಡುಗೊರೆಯಾಗಿ ನೀಡುವ ಮೂಲಕ ಈ ದಿನವನ್ನು ವಿಶೇಷವಾಗಿ ಆಚರಿಸಬಹುದು.

ಶಿಕ್ಷಕರಿಗಾಗಿ ಹಾಡನ್ನು ರಚಿಸಿ:

ನೀವೇನಾದರೂ ಸಂಗೀತ ಹಾಗೂ ಕಾವ್ಯ ರಚನೆಯಲ್ಲಿ ಆಸಕ್ತಿಯನ್ನು ಹೊಂದಿದವರಾಗಿದ್ದರೆ, ಈ ನಿಮ್ಮ ಪ್ರತಿಭೆಯ ಮೂಲಕವೇ ಶಿಕ್ಷಕರನ್ನು ಸಂತೋಷ ಪಡಿಸಬಹುದು. ಹೌದು ಶಿಕ್ಷಕರ ಸಲುವಾಗಿ ಒಂದೊಳ್ಳೆ ಹಾಡನ್ನು ರಚಿಸಿ, ಶಿಕ್ಷಕರ ದಿನದ ಕಾರ್ಯಕ್ರಮದಂದು ಸ್ಟೇಜ್‌ ಮೇಲೆ ಆ ಹಾಡನ್ನು ಹಾಡುವ ಮೂಲಕ ಶಿಕ್ಷಕರ ಮನದಲ್ಲಿ ಸಂತೋಷ ತರಿಸಬಹುದು.

ಇದನ್ನೂ ಓದಿ: 12 ಸಾವಿರ ರೂ. ಸಂಬಳದಲ್ಲಿ 10 ಸಾವಿರ ರೂ. ಮಗುವಿಗೆ ಕೊಟ್ರೆ ಆ ವ್ಯಕ್ತಿಯ ಜೀವನ ಹೇಗೆ?

ಸ್ಪೆಷಲ್‌ ವಿಡಿಯೋ ಮಾಡಿ:

ನಾವು ಬರ್ತ್‌ ಡೇ ಸಮಯದಲ್ಲಿ ವಿಶ್‌ ಮಾಡಲು ವಿಡಿಯೋ ಮಾಡುವ ಹಾಗೇ ಪ್ರತಿ ತರಗತಿಯ ಸಹಪಾಠಿಗಳೆಲ್ಲರೂ ಸೇರಿ ಶಿಕ್ಷಕರಿಗೆ ಧನ್ಯವಾದಗಳನ್ನು ತಿಳಿಸುವ ಕ್ಯೂಟ್‌ ವಿಡಿಯೋವನ್ನು ಮಾಡಿ, ಆ ವಿಡಿಯೋವನ್ನು ಶಿಕ್ಷಕರ ದಿನದ ಕಾರ್ಯಕ್ರಮದಂದು ಪ್ಲೇ ಮಾಡುವ ಮೂಲಕ ಶಿಕ್ಷಕರಿಗೆ ಸರ್‌ಪ್ರೈಸ್‌ ನೀಡಬಹುದು.

ಗಿಡಗಳನ್ನು ನೆಡಬಹುದು:

ಶಿಕ್ಷಕರ ದಿನವನ್ನು ಇನ್ನಷ್ಟು ವಿಶೇಷವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕೆಂದು ಬಯಸಿದರೆ, ನೀವು ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜನೆ ಮಾಡಬಹುದು. ಹೌದು ಶಿಕ್ಷಕರ ದಿನದಂದು ಒಂದಷ್ಟು ಹಣ್ಣು ಇತ್ಯಾದಿ ಗಿಡಗಳನ್ನು ತಂದು ಪ್ರತಿಯೊಬ್ಬ ಶಿಕ್ಷಕರ ಹೆಸರಿನಲ್ಲಿ ಆ ಗಿಡಗಳನ್ನು ಶಾಲೆಯ ಸುತ್ತ ಮುತ್ತ ನೆಡುವ ಮೂಲಕ ಶಿಕ್ಷಕರ ದಿನವನ್ನು ಸದಾ ಕಾಲ ನೆನಪಿನಲ್ಲಿರುವ ಹಾಗೆ ವಿಶೇಷವಾಗಿ ಆಚರಿಸಬಹುದು.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ