AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Post: ಸ್ವಂತ ಸ್ಟಾರ್ಟ್‌ಅಪ್‌ ನಡೆಸಲು ಹಣ ಸಿಕ್ಕಿತೆಂದು ಹೇಳದೆ ಕೇಳದೆ ಕೆಲಸ ಬಿಟ್ಟ ಬೆಂಗಳೂರಿನ ಇಂಟರ್ನ್‌

ಕೆಲಸಗಾರರಾಗಿರಲಿ ಅಥವಾ ಇಂಟರ್ನ್‌ಶಿಪ್‌ ಮಾಡುವವರಾಗಿರಲಿ ಯಾವುದೇ ಕಂಪೆನಿಯನ್ನು ತೊರೆಯುವಾಗ ಕಂಪೆನಿಯ ಒಂದಷ್ಟು ಪ್ರಕ್ರಿಯೆಗಳನನ್ನು ಪಾಲಿಸಬೇಕಾಗುತ್ತದೆ. ಸಡನ್‌ ಆಗಿ ಕೆಲಸ ಬಿಡಲು ಆಗುವುದಿಲ್ಲ. ಆದ್ರೆ ಇಲ್ಲೊಂದು ಇಂಟರ್ನ್‌ ಸ್ವಂತ ಸ್ಟಾರ್ಟ್‌ ಅಪ್‌ ನಡೆಸಲು ಹಣ ಸಿಗುತ್ತಿದ್ದಂತೆ, ಇಷ್ಟು ದಿನ ಕೆಲಸ ಕಲಿಯಲು ಅವಕಾಶ ಕೊಟ್ಟ ಕಂಪೆನಿಯ ಬಾಸ್‌ಗೆ ಒಂದು ಮಾತು ಹೇಳದೆ ಏಕಾಏಕಿ ಕೆಲಸ ಬಿಟ್ಟಿದ್ದು, ಇನ್ಮುಂದೆ ನನಗೆ ನಿಮ್ಮ ಇಂಟರ್ನ್‌ಶಿಪ್‌ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇಂಟರ್ನ್‌ ಹಾಗೂ ಬಾಸ್‌ ಮಧ್ಯೆ ನಡೆದ ಈ ವಾಟ್ಸಾಪ್‌ ಚಾಟ್‌ ಇದೀಗ ವೈರಲ್‌ ಆಗುತ್ತಿದೆ.

Viral Post: ಸ್ವಂತ ಸ್ಟಾರ್ಟ್‌ಅಪ್‌ ನಡೆಸಲು ಹಣ ಸಿಕ್ಕಿತೆಂದು ಹೇಳದೆ ಕೇಳದೆ ಕೆಲಸ ಬಿಟ್ಟ ಬೆಂಗಳೂರಿನ ಇಂಟರ್ನ್‌
ವೈರಲ್​​​​ ಪೋಸ್ಟ್​
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Sep 02, 2024 | 4:28 PM

Share

ಕಾಲೇಜು ಜೀವನ ಮುಗಿಯುತ್ತಿದ್ದಂತೆ ಹೆಚ್ಚಿನವರು ಕೆಲಸದ ಬಗ್ಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಒಂದಷ್ಟು ತಿಂಗಳುಗಳ ಕಾಲ ವಿವಿಧ ಕಂಪೆನಿಗಳಲ್ಲಿ ಇಂಟರ್ನ್‌ಶಿಪ್‌ ಮಾಡುತ್ತಾರೆ. ಇಲ್ಲಿ ಇಂಟರ್ನ್‌ಗಳು ಸರ್ಟಿಫಿಕೇಟ್‌ ಮಾತ್ರವಲ್ಲದೆ ವಿವಿಧ ಕೌಶಲ್ಯಗಳನ್ನು ಕಲಿಯುತ್ತಾರೆ. ಈ ಇಂಟರ್ನ್‌ಶಿಪ್‌ ನಡುವೆ ಒಂದೊಳ್ಳೆ ಉದ್ಯೋಗ ಸಿಕ್ಕಿದ್ರೆ ಹೆಚ್ಚಿನವರು ಇಂಟರ್ನ್‌ಶಿಪ್‌ ಪೂರ್ಣಗೊಳಿಸದೆ ಆ ಉದ್ಯೋಗಕ್ಕೆ ಹೋಗಲ್ಲ. ಆದ್ರೆ ಇಲ್ಲೊಂದು ಅದಕ್ಕೆ ತದ್ವಿರುದ್ಧವಾದ ಘಟನೆ ನಡೆದಿದ್ದು, ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಇಂಟರ್ನ್‌ ಸ್ಟರ್ಟ್‌ಅಪ್‌ ನಡೆಸಲು ಧನ ಸಹಾಯ ಸಿಗುತ್ತಿದ್ದಂತೆ, ಇಷ್ಟು ದಿನ ಕೆಲಸ, ಕೌಶಲ್ಯಗಳನ್ನು ಕಲಿಯಲು ಅವಕಾಶ ಕೊಟ್ಟ ಕಂಪೆನಿಯ ಬಾಸ್‌ಗೆ ಒಂದು ಮಾತು ಹೇಳದೆ ಏಕಾಏಕಿ ಕೆಲಸ ಬಿಟ್ಟಿದ್ದು, ಇನ್ಮುಂದೆ ನನಗೆ ನಿಮ್ಮ ಇಂಟರ್ನ್‌ಶಿಪ್‌ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇಂಟರ್ನ್‌ ಹಾಗೂ ಬಾಸ್‌ ಮಧ್ಯೆ ನಡೆದ ಈ ವಾಟ್ಸಾಪ್‌ ಚಾಟ್‌ ಇದೀಗ ವೈರಲ್‌ ಆಗಿದ್ದು, ಸ್ಟಾರ್ಟ್‌ ಅಪ್‌ ನಡೆಸುವ ಮುನ್ನ ಒಬ್ಬರ ಜೊತೆ ಹೇಗೆ ಮಾತಾಡಬೇಕು ಎಂಬುದು ಆತ ಕಲಿಯಬೇಕಿದೆ ಎಂದು ನೆಟ್ಟಿಗರು ಹೇಳಿದ್ದಾರೆ.

ಕಾರ್ತಿಕ್‌ ಶ್ರೀಧರನ್ (Karthik Sridharan)‌ ಎಂಬವರು ಈ ಕುರಿತ ಪೋಸ್ಟ್‌ ಒಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ಬೆಂಗಳೂರಿನಲ್ಲಿ ಮಾತ್ರ ನಡೆಯಲು ಸಾಧ್ಯ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ಆಗಿರುವ ವಾಟ್ಸಾಪ್‌ ಚಾಟ್‌ ಸ್ಕ್ರೀನ್‌ಶಾಟ್‌ ಫೋಟೊದಲ್ಲಿ ಕಂಪೆನಿ ಬಾಸ್‌ ಮತ್ತು ಇಂಟರ್ನ್‌ ಮಧ್ಯೆ ನಡೆದ ಸಂಭಾಷಣೆಯ ದೃಶ್ಯವನ್ನು ಕಾಣಬಹುದು. ಇಂಟರ್ನ್‌ ಕೆಲಸದ ಸಮಯದಲ್ಲಿ ಆಫೀಸ್‌ನಲ್ಲಿ ಕಾಣಿಸಿಕೊಳ್ಳದಿದ್ದಾಗ, ಬಾಸ್‌ ಡೈರೆಕ್ಟ್‌ ಆಗಿ ಇಂಟರ್ನ್‌ಗೆ ಮೆಸೇಜ್‌ ಮಾಡಿ ನಿಮಗೆ ಏನಾಯಿತು? ಕಳೆದ ಶುಕ್ರವಾರದಿಂದ ನೀವು ಆಫೀಸಿನಲ್ಲಿ ಕಾಣಿಸಿಕೊಳ್ಳಲೇ ಇಲ್ಲ ಎಂದು ಹೇಳಿದ್ದಾರೆ. ಇದ್ದಕ್ಕೆ ಉತ್ತರಿಸಿದ ಇಂಟರ್ನ್ನ ಕ್ಷಮಿಸಿ, ನನಗೆ ಸ್ಟಾರ್ಟ್‌ ಅಪ್‌ ನಡೆಸಲು ಧನ ಸಹಾಯ ಸಿಕ್ಕಿತು. ಹಾಗಾಗಿ ಇನ್ನು ಮುಂದೆ ನನಗೆ ಇಂಟರ್ನ್‌ಶಿಪ್‌ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಕ್ಳು ಕಷ್ಟ ಪಟ್ಟು ಮಾಡೋ ಹೋಮ್‌ವರ್ಕ್‌ನ್ನು ಪರಿಚಯಿಸಿದ್ದು ಇವರೇ ನೋಡಿ..

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

ಸೆಪ್ಟೆಂಬರ್‌ 1 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಮತ್ತು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಏಕೆ ಇಷ್ಟೊಂದು ಅಹಂ, ಕೆಲಸ ಬಿಡೋ ಮುನ್ನ ಬಾಸ್‌ಗೆ ಒಂದು ಮಾತು ಹೇಳಬಹುದಿತ್ತಲ್ವಾʼ ಎಂದು ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಯಾರಿಗೂ ಇಷ್ಟೊಂದು ಅಗೌರವ ತೋರಬಾರದುʼ ಎಂದು ಹೇಳಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ