AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಮಕ್ಳು ಕಷ್ಟ ಪಟ್ಟು ಮಾಡೋ ಹೋಮ್‌ವರ್ಕ್‌ನ್ನು ಪರಿಚಯಿಸಿದ್ದು ಇವರೇ ನೋಡಿ..

ಹೋಮ್‌ ವರ್ಕ್‌ ಎಂದ್ರೆ ಸಾಕು ಬಹುತೇಕ ಹೆಚ್ಚಿನ ಶಾಲಾ ಮಕ್ಕಳು ಸಿಟ್ಟು ಮಾಡಿಕೊಳ್ಳುತ್ತಾರೆ. ಹೌದು ಶಾಲೆಯಿಂದ ಮನೆಗೆ ಬಂದ್ರೂ ನೆಮ್ಮದಿಯಿಂದ ಆಟ ಆಡೋಕೆ ಬಿಡದೆ ಹೋಮ್‌ ವರ್ಕ್‌ ಮಾಡು, ಓದು ಅಂತೆಲ್ಲಾ ಹೇಳ್ತಾರೆ ಎಂದು ಕೋಪ ಮಾಡಿಕೊಳ್ಳುತ್ತಾರೆ. ಆದ್ರೆ ಮಕ್ಳು ಕಷ್ಟಪಟ್ಟು ಮಾಡೋ ಈ ಹೋಮ್‌ ವರ್ಕ್‌ ಅನ್ನೋ ಕಾನ್ಸೆಪ್ಟ್‌ ಅನ್ನು ಯಾರು ಜಾರಿಗೆ ತಂದಿದ್ದು ಗೊತ್ತಾ? ಈ ಕುರಿತ ಇಂಟರೆಸ್ಟಿಂಗ್‌ ಸ್ಟೋರಿ ಇಲ್ಲಿದೆ.

Viral: ಮಕ್ಳು ಕಷ್ಟ ಪಟ್ಟು ಮಾಡೋ ಹೋಮ್‌ವರ್ಕ್‌ನ್ನು ಪರಿಚಯಿಸಿದ್ದು ಇವರೇ ನೋಡಿ..
ವೈರಲ್​ ಸ್ಟೋರಿ
ಮಾಲಾಶ್ರೀ ಅಂಚನ್​
| Edited By: |

Updated on: Sep 02, 2024 | 2:45 PM

Share

ಹೋಮ್‌ ವರ್ಕ್‌ ಹೋಮ್‌ ವರ್ಕ್‌ ಹೋಮ್‌ ವರ್ಕ್…..‌ ಈ ಹೆಸ್ರು ಕೇಳಿದ್ರೆ ಸಾಕು ಬಹುತೇಕ ಎಲ್ಲಾ ಶಾಲಾ ಮಕ್ಕಳು ಕೋಪ ಮಾಡಿಕೊಳ್ಳುತ್ತಾರೆ. ಶಾಲೆಯಿಂದ ಮನೆಗೆ ಬಂದ್ರೂ ನೆಮ್ಮದಿಯಿಂದ ಆಟ ಆಡೋಕೆ ಬಿಡದೆ ರಾಶಿ ರಾಶಿ ಹೋಮ್‌ ವರ್ಕ್‌ ಮಾಡೋಕೆ ಕೊಡ್ತಾರೆ ಅಂತ ಮಕ್ಳು ಸಿಟ್ಟು ಮಾಡಿಕೊಳ್ಳುತ್ತಾರೆ. ಇನ್ನೂ ಈ ಹೋಮ್‌ ವರ್ಕ್‌ ಪೋಷಕರಿಗೂ ಹೊರೆಯಾಗಿ ಪರಿಣಮಿಸಿದ್ದು, ಪೋಷಕರಂತೂ ಹೋಮ್‌ ವರ್ಕ್‌ ಮಾಡದೆ ಮಕ್ಕಳನ್ನು ಮನೆಯ ಹೊರಗೆ ಕಾಲಿಡಲು ಕೂಡಾ ಬಿಡ್ತಲ್ಲ. ಪೆಟ್ಟು ಕೊಟ್ಟಾದ್ರೂ ಮಕ್ಕಳ ಕೈಲಿ ಹೋಮ್‌ ವರ್ಕ್‌ ಮಾಡಿಸ್ತಾರೆ. ಅಷ್ಟಕ್ಕೂ ಮಕ್ಳು ಇಷ್ಟ ಇಲ್ಲದೆ ಕಷ್ಟ ಪಟ್ಟು ಮಾಡೋ ಈ ಹೋಮ್‌ ವರ್ಕ್‌ ಅನ್ನು ಪರಿಚಯಿಸಿದ್ದು ಯಾರು ಗೊತ್ತಾ? ಈ ಕುರಿತ ಇಂಟರೆಸ್ಟಿಂಗ್‌ ಸ್ಟೋರಿ ಇಲ್ಲಿದೆ.

ಹೋಮ್‌ ವರ್ಕ್‌ ಅನ್ನು ಪರಿಚಯಿಸಿದವರು ಇಟಲಿಯ “ರಾಬರ್ಟೊ ನೆವಿಲಿಸ್‌”, ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಇವರು 1905 ನೇ ಇಸವಿಯಲ್ಲಿ ತಮ್ಮ ವಿದ್ಯಾರ್ಥಿಗಳು ಏನಾದ್ರೂ ತಪ್ಪು ಮಾಡಿದ್ರೆ, ಪೆಟ್ಟು ನೀಡುವ ಬದಲು ಆ ತಪ್ಪಿಗೆ ಹೋಮ್‌ ವರ್ಕ್‌ ಮಾಡುವ ಶಿಕ್ಷೆಯನ್ನು ನೀಡುತ್ತಿದ್ದರು. ಕ್ರಮೇಣ ಈ ಹೋಮ್‌ ವರ್ಕ್‌ ಎಂಬ ಕಾನ್ಸೆಪ್ಟ್‌ ಪ್ರಪಂಚದಾದ್ಯಂತ ಜನಪ್ರಿಯವಾಗಿ ನಂತರ ಕಲಿಕೆಯ ಭಾಗವಾಗಿ ಪ್ರತಿಯೊಂದು ಶಾಲೆಯಲ್ಲೂ ವಿದ್ಯಾರ್ಥಿಗಳಿಗೆ ಹೋಮ್‌ ವರ್ಕ್‌ ನೀಡಲು ಶುರು ಮಾಡಿದರು. ಈ ಕುರಿತ ಇಂಟರೆಸ್ಟಿಂಗ್‌ ಸ್ಟೋರಿಯನ್ನು amazing_.facts._ ಹೆಸರಿನ ಇನ್‌ಸ್ಟಾಗ್ರಾಮ್‌ ಪೇಜ್‌ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ಇವರೇ ನೋಡಿ ಹೋಮ್‌ ವರ್ಕ್‌ ಅನ್ನು ಕಂಡು ಹಿಡಿದ ಶಿಕ್ಷಕ ರಾಬರ್ಟೊ ನೆವಿಲಿಸ್”‌ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಪ್ರೇಯಸಿಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಬಂದ ಆಸಾಮಿ; ಮಕ್ಕಳ ಕಳ್ಳನೆಂದು ಭಾವಿಸಿ ಧರ್ಮದೇಟು ನೀಡಿದ ಜನ

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

View this post on Instagram

A post shared by @amazing_.facts.__

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ವ್ಯಕ್ತಿಯ ವಿದ್ಯಾರ್ಥಿಗಳಿಗೆ ನೀಡಿದ ಶಿಕ್ಷೆ, ಇಂದೂ ಪ್ರಪಂಚದ ಪ್ರತಿಯೊಬ್ಬ ವಿದ್ಯಾರ್ಥಿಗೂ ದೊಡ್ಡ ಶಿಕ್ಷೆಯಾಗಿದೆʼ ಎಂಬ ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹಾಗಿದ್ರೆ ಇಂದು ನಾವು ಕಷ್ಟ ಪಡಲು ಇವರೇ ಕಾರಣವೇʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಜ್ಞಾನವನ್ನು ಹೆಚ್ಚಿಸುವ ಶಿಕ್ಷೆಯನ್ನು ನೀಡಿದ್ದಕ್ಕಾಗಿ ನಿಮಗೆ ಧನ್ಯವಾದಗಳುʼ ಎಂದು ಹೇಳಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕೆಪಿಎಸ್ಸಿ ರದ್ದುಗೊಳಿಸುವ ಬಗ್ಗೆ ಸಂಪುಟದಲ್ಲಿ ಚರ್ಚೆ: ಕಾರಣ ಇಲ್ಲಿದೆ
ಕೆಪಿಎಸ್ಸಿ ರದ್ದುಗೊಳಿಸುವ ಬಗ್ಗೆ ಸಂಪುಟದಲ್ಲಿ ಚರ್ಚೆ: ಕಾರಣ ಇಲ್ಲಿದೆ
ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ