Video: ಪ್ರೇಯಸಿಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಬಂದ ಆಸಾಮಿ; ಮಕ್ಕಳ ಕಳ್ಳನೆಂದು ಭಾವಿಸಿ ಧರ್ಮದೇಟು ನೀಡಿದ ಜನ
ಪ್ರೇಯಸಿಯನ್ನು ಭೇಟಿಯಾಗಲು ಬಂದು ಹುಡುಗಿ ಮನೆಯವರ ಕೈಲಿ ಅಥವಾ ಸ್ಥಳೀಯರ ಕೈಯಿಂದ ಧರ್ಮದೇಟು ತಿಂದವರ ಹಲವು ಸುದ್ದಿಗಳು ಈ ಹಿಂದೆಯೂ ವೈರಲ್ ಆಗಿದ್ದವು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಇಲ್ಲೊಬ್ಬ ಯುವಕ ತನ್ನ ಹುಡುಗಿಯನ್ನು ಭೇಟಿಯಾಗುವ ಸಲುವಾಗಿ ಬುರ್ಖಾ ಧರಿಸಿ ಬಂದು ಸ್ಥಳೀಯರ ಕೈಗೆ ತಗ್ಲಾಕೊಂಡಿದ್ದಾನೆ. ಈತ ಮಕ್ಕಳ ಕಳ್ಳನೇ ಇರಬೇಕೆಂದು ಸ್ಥಳೀಯರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಈಗಿನ ಕಾಲದಲ್ಲಿ ಕೆಲ ಪ್ರೇಮಿಗಳು ತಮ್ಮ ಪ್ರೀತಿ ಉಳಿಸಿಕೊಳ್ಳಲು ಹಾಗೂ ತಮ್ಮ ಹುಡುಗಿಗಾಗಿ ಭಂಡ ಧೈರ್ಯದಿಂದ ಏನು ಬೇಕಾದರೂ ಮಾಡ್ತಾರೆ. ಅದರಲ್ಲೂ ಕೆಲ ಯುವಕರು ಪ್ರೇಯಸಿಯನ್ನು ಭೇಟಿಯಾಗುವ ಸಲುವಾಗಿ ಎಂತೆಂತಹ ಸರ್ಕಸ್‌ಗಳನ್ನು ಮಾಡುತ್ತಿರುತ್ತಾರೆ. ಹೀಗೆ ಹುಡುಗಿ ವೇಷ ಧರಿಸಿ, ಬುರ್ಖಾ ಧರಿಸಿ ಪ್ರೇಯಸಿಯನ್ನು ಮಿಟ್ ಮಾಡಲು ಬಂದು ಸಿಕ್ಕಿಬಿದ್ದವರ ಕಥೆಗಳನ್ನು ಕೇಳಿರುತ್ತೀರಿ ಅಲ್ವಾ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಇಲ್ಲೊಬ್ಬ ಯುವಕ ತನ್ನ ಹುಡುಗಿಯನ್ನು ಭೇಟಿಯಾಗುವ ಸಲುವಾಗಿ ಬುರ್ಖಾ ಧರಿಸಿ ಬಂದು ಸ್ಥಳೀಯರ ಕೈಗೆ ತಗ್ಲಾಕೊಂಡಿದ್ದಾನೆ. ಈತ ಮಕ್ಕಳ ಕಳ್ಳನೇ ಇರಬೇಕೆಂದು ಸ್ಥಳೀಯರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿದ್ದು, ಯುವಕನೊಬ್ಬ ಬುರ್ಖಾ ಧರಿಸಿ ಗೆಳತಿಯನ್ನು ಭೇಟಿಯಾಗಲು ಬಂದು ಸಾರ್ವಜನಿಕರ ಕೈಯಲ್ಲಿ ಧರ್ಮದೇಟು ತಿಂದಿದ್ದಾನೆ. ಆಗಸ್ಟ್ 30 ರ ಶನಿವಾರದಂದು ಯುವಕನೊಬ್ಬ ಬುರ್ಖಾ ಧರಿಸಿ ಗೆಳತಿಯನ್ನು ಭೇಟಿಯಾಗಲು ಬಂದಿದ್ದ. ಆತನ ವಿಚಿತ್ರ ವರ್ತನೆಯನ್ನು ಗಮನಿಸಿ ಅನುಮಾನಗೊಂಡ ಸ್ಥಳೀಯರು ಮುಖ ಗವಸು ತೆರೆದಿದ್ದಾರೆ. ಈತ ಮಕ್ಕಳ ಕಳ್ಳನೇ ಇರಬೇಕೆಂದು ಅಲ್ಲಿನ ಜನ ಹಿಗ್ಗಾಮುಗ್ಗ ಥಳಿಸಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆಯ ವೇಳೆ ಯಾರಿಗೂ ಅನುಮಾನ ಬರಬಾರದೆಂದು ಗೆಳತಿಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಬಂದಿರುವುದಾಗಿ ಹೇಳಿಕೊಂಡಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
उत्तर प्रदेश के जिला मुरादाबाद में गर्लफ्रेंड से मिलने के लिए चांद भूरा नामक युवक बुर्का पहनकर पहुंच गया। लोगों को शक हुआ और उसे पकड़ लिया। तलाशी में एक लाइटर पिस्टल भी मिली। फिर उसकी पिटाई हुई। पुलिस को सौंप दिया गया। pic.twitter.com/lJvA8NVnnq
— Sachin Gupta (@SachinGuptaUP) September 2, 2024
ಸಚಿನ್ ಗುಪ್ತಾ (Sachin Gupta) ಎಂಬವರು ಈ ಕುರಿತ ಪೋಸ್ಟ್ ಒಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಯುವಕನೊಬ್ಬ ಗೆಳತಿಯನ್ನು ಮೀಟ್ ಆಗಲು ಬುರ್ಖಾ ಧರಿಸಿ ಬಂದು ಸ್ಥಳೀಯರ ಕೈಗೆ ತಗ್ಲಾಕೊಂಡ ದೃಶ್ಯವನ್ನು ಕಾಣಬಹುದು. ಈತ ಮಕ್ಕಳ ಕಳ್ಳನೇ ಇರಬೇಕೆಂದು ಆಧಾರ್ ಕಾರ್ಡ್ ತೋರಿಸುವಂತೆ ಕೇಳಿದ್ದಾರೆ. ಆತ ಆಧಾರ್ ಕಾರ್ಡ್ ತೋರಿಸದೇ ಇದ್ದಾಗ, ಈತ ಯಾರೋ ಖತರ್ನಾಕ್ ಕಳ್ಳನೇ ಇರಬೇಕೆಂದು ಜನ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಇದನ್ನೂ ಓದಿ: ಕಾರಿಗೆ ಬೈಕ್ ಟಚ್ ಆಯಿತೆಂದು ಫುಡ್ ಡೆಲಿವರಿ ಬಾಯ್ ಮೇಲೆ ದರ್ಪ ತೋರಿದ ತಂದೆ-ಮಗ
ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ಪೋಸ್ಟ್ 15 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆತ ಇನ್ನೆಂದೂ ಗೆಳತಿಯನ್ನು ಭೇಟಟಿಯಾಗಲು ಹೋಗಲಾರʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಯ್ಯೋ ಇದೆಂಥಾ ಅವಸ್ಥೆʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ