Viral: ಕಾರಿಗೆ ಬೈಕ್‌ ಟಚ್‌ ಆಯಿತೆಂದು‌ ಫುಡ್‌ ಡೆಲಿವರಿ ಬಾಯ್‌ ಮೇಲೆ ದರ್ಪ ತೋರಿದ ತಂದೆ-ಮಗ

ಕೆಲ ಜನರು ತಮ್ಮದೇ ತಪ್ಪಿದ್ರೂ ಕೂಡಾ ಶ್ರೀಮಂತಿಕೆಯ ಮದದಲ್ಲಿ ಜಡ ಜನರ ಮೇಲೆ ತಮ್ಮ ದರ್ಪವನ್ನು ತೋರುತ್ತಿರುತ್ತಾರೆ. ಇಂತಹ ಸಾಕಷ್ಟು ಘಟನೆಗಳು ನಮ್ಮ ಕಣ್ಣ ಮುಂದೆ ನಡೆಯುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಹಿಂದಿನಿಂದ ಬಂದ ತಮ್ಮ ಕಾರಿಗೆ ಮುಂದೆ ನಿಂತಿದ್ದ ಫುಡ್‌ ಡೆಲಿವರಿ ಹುಡುಗನ ಬೈಕ್‌ ಟಚ್‌ ಆಯಿತೆಂದು, ಕಾರಿನಿಂದ ಇಳಿದ ತಂದೆ ಮಗ ಫುಡ್‌ ಡೆಲಿವರಿ ಬ್ಯಾಗ್‌ ಅನ್ನು ರಸ್ತೆಗೆಸೆದು, ಆ ಯುವಕನ ಜೊತೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

Viral: ಕಾರಿಗೆ ಬೈಕ್‌ ಟಚ್‌ ಆಯಿತೆಂದು‌ ಫುಡ್‌ ಡೆಲಿವರಿ ಬಾಯ್‌ ಮೇಲೆ ದರ್ಪ ತೋರಿದ ತಂದೆ-ಮಗ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 02, 2024 | 12:03 PM

ಶ್ರೀಮಂತಿಕೆಯ ದರ್ಪದಿಂದ ಮೆರೆದಾಡುವವರು ಅದೆಷ್ಟೋ ಜನರಿದ್ದಾರೆ. ಹಣದ ಮದದಲ್ಲಿ ಇತರರನ್ನು ಕೀಳಾಗಿ ನೋಡುತ್ತಾ ಅಹಂಕಾರದಿಂದ ಮೆರೆದಾಡುತ್ತಿರುತ್ತಾರೆ. ಕೆಲವರಂತೂ ತಾವೇ ತಪ್ಪು ಮಾಡಿದ್ರು, ಆ ತಪ್ಪನ್ನು ಅಮಾಯಕನ ಮೇಲೆ ಹೊರಿಸಿ, ದರ್ಪ ತೋರುತ್ತಾರೆ. ಇಂತಹ ಸಾಕಷ್ಟು ಘಟನೆಗಳು ನಮ್ಮ ಕಣ್ಣ ಮುಂದೆ ನಡೆಯುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಹಿಂದಿನಿಂದ ಬಂದ ತಮ್ಮ ಕಾರಿಗೆ ಮುಂದೆ ನಿಂತಿದ್ದ ಫುಡ್‌ ಡೆಲಿವರಿ ಹುಡುಗನ ಬೈಕ್‌ ಟಚ್‌ ಆಯಿತೆಂದು, ಕಾರಿನಿಂದ ಇಳಿದ ತಂದೆ ಮಗ ಫುಡ್‌ ಡೆಲಿವರಿ ಬ್ಯಾಗ್‌ ಅನ್ನು ರಸ್ತೆಗೆಸೆದು, ಆ ಯುವಕನ ಜೊತೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಈ ಅಮಾನವೀಯ ಘಟನೆ ಆಂಧ್ರಪ್ರದೇಶದ ಗಾಜುವಾಕದಲ್ಲಿ ನಡೆದಿದ್ದು, ಶ್ರೀಮಂತಿಕೆಯ ಮದದಲ್ಲಿ ತಂದೆ-ಮಗ ಡೆಲಿವರಿ ಬಾಯ್‌ ಜೊತೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ನಡು ರಸ್ತೆಯಲ್ಲಿ ಡೆಲಿವರಿ ಬಾಯ್‌ ಬೈಕ್‌ಗೆ ಕಾರೊಂದು ಹಿಂದಿನಿಂದ ಬಂದು ಟಚ್‌ ಆಗಿದೆ. ಇದೆಲ್ಲಾ ಫುಡ್‌ ಡೆಲಿವರಿ ಹುಡುಗನದ್ದೇ ತಪ್ಪೆಂದು ಕಾರಿನಿಂದ ಇಳಿದು ಬಂದ ತಂದೆ ಮಗ, ಆ ಯುವಕನ ಜೊತೆ ಸೊಕ್ಕಿನಿಂದ ಮಾತನಾಡಿದ್ದಲ್ಲದೆ, ಸಹಾನುಭೂತಿಯನ್ನೂ ತೋರದೆ ಬೈಕ್‌ನ ಹಿಂಬದಿಯಲ್ಲಿದ್ದ ಫುಡ್‌ ಡೆಲಿವರಿ ಬ್ಯಾಗ್‌ ಅನ್ನು ನಡು ರಸ್ತೆಗೆ ಎಸೆದು ಅಟ್ಟಹಾಸ ಮೆರೆದಿದ್ದಾರೆ. ಈ ಕ್ರೌರ್ಯವನ್ನು ವಾಹನ ಸವಾರರೊಬ್ಬರು ಪ್ರಶ್ನಿಸಿದ್ದಕ್ಕೆ ತಂದೆ ನಾನು ಸಬ್‌ ಇನ್ಸ್‌ಪೆಕ್ಟರ್‌ ಎಂದು ದರ್ಪದಿಂದ ಮಾತನಾಡಿದ್ದಾನೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ಪೋಸ್ಟ್‌ ಒಂದನ್ನು Ghar Ke Kalesh ಎಂಬ ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಡೆಲಿವರಿ ಬಾಯ್‌ ಬೈಕ್‌ಗೆ ಹಿಂದಿನಿಂದ ಗುದ್ದಿದ್ದು ಮಾತ್ರವಲ್ಲದೆ ಆ ಕಾರ್‌ ಮಾಲೀಕರು ಡೆಲಿವರಿ ಬಾಯ್‌ ಮೇಲೆ ದರ್ಪ ತೋರುವ ದೃಶ್ಯವನ್ನು ಕಾಣಬಹುದು. ಸೀದಾ ಕಾರಿನಿಂದ ಇಳಿದು ಬಂದು ಮಾನವೀಯತೆಯನ್ನೂ ತೋರದೆ ಕಾರ್‌ ಮಾಲೀಕ ಫುಡ್‌ ಡೆಲಿವರಿ ಬ್ಯಾಗ್‌ ಅನ್ನೇ ನಡು ರಸ್ತೆಗೆ ಎಸೆದು ಅಹಂಕಾರದಿಂದ ವರ್ತಿಸಿದ್ದಾನೆ.

ಇದನ್ನೂ ಓದಿ: ತಿಂಡಿಗೆ ಅವಲಕ್ಕಿ ಬದಲು ಡ್ರೈ ಫ್ರೂಟ್ಸ್‌ ಕೊಟ್ಟ ಗಂಡ, ಕೋಪದಲ್ಲಿ ಆತ್ಮಹತ್ಯೆ ಮಾಡಿಕೊಂಡ ಪತ್ನಿ

ಸೆಪ್ಟೆಂಬರ್‌ 1 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮೊದಲು ಹೀಗೆ ದರ್ಪ ತೋರಿಸುವವರ ಡ್ರೈವಿಂಗ್‌ ಲೈಸನ್ಸ್‌ಗಳನ್ನು ರದ್ದುಗೊಳಿಸಬೇಕುʼ ಎಂದು ಹೇಳಿದ್ದಾರೆ, ಮತ್ತೊಬ್ಬ ಬಳಕೆದಾರರು ʼಫುಡ್‌ ಡೆಲಿವರಿ ಬ್ಯಾಗ್‌ ಅನ್ನು ರಸ್ತೆಗೆಸೆಯುವ ಅವಶ್ಯಕತೆ ಏನಿತ್ತʼ ಎಂದು ಕೇಳಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್​ಗಳು
ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್​ಗಳು
Weekly Astrology: ಡಿಸೆಂಬರ್ 23 ರಿಂದ 29ರ ವರೆಗಿನ ರಾಶಿ ಭವಿಷ್ಯ
Weekly Astrology: ಡಿಸೆಂಬರ್ 23 ರಿಂದ 29ರ ವರೆಗಿನ ರಾಶಿ ಭವಿಷ್ಯ
ವೀಳ್ಯದೆಲೆ ದೀಪದ ಮಹತ್ವ ಮತ್ತು ಹಚ್ಚುವ ವಿಧಾನ ತಿಳಿಯಿರಿ
ವೀಳ್ಯದೆಲೆ ದೀಪದ ಮಹತ್ವ ಮತ್ತು ಹಚ್ಚುವ ವಿಧಾನ ತಿಳಿಯಿರಿ